ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥ್ಯ ಅವಕಾಶಗಳ ಕ್ಷೇತ್ರ

Last Updated 3 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಎಂ ಎಸ್ ರಾಮಯ್ಯ ಕಾಲೇಜಿನ ಹೋಟೆಲ್ ಮ್ಯಾನೇಜ್‌ಮೆಂಟ್ ವಿಭಾಗಕ್ಕೆ ಪ್ರವೇಶಾತಿ ಪಡೆದಿರುವ 70 ವಿದ್ಯಾರ್ಥಿಗಳ ತರಬೇತಿ ಕಾರ್ಯಕ್ರಮ ಈಚೆಗೆ ಆರಂಭವಾಯಿತು.

ಸ್ಟಾರ್‌ವುಡ್ ಹೋಟೆಲ್‌ನ ಜನರಲ್ ಮ್ಯಾನೇಜರ್ ಮಾರ್ಟಿನ್ ವೆಟ್ರಿಚ್ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಮನೀಶ್ ಸಾಧು, ಗೋಕುಲ ಎಜುಕೇಷನ್ ಸೊಸೈಟಿಯ ವೇಣುಗೋಪಾಲ್ ಶಾಸ್ತ್ರಿ ಅತಿಥಿಗಳಾಗಿದ್ದರು.

ಪ್ರಾಂಶುಪಾಲ ಅಭೆ ಮ್ಯಾಥ್ಯು ಮಾತನಾಡಿ, ಹೋಟೆಲ್ ಉದ್ಯಮ ಇಂದು ಜಾಗತಿಕ ಮನ್ನಣೆ ಪಡೆದುಕೊಂಡಿದೆ. ಈ ಕೋರ್ಸ್ ಮುಗಿಸಿದವರಿಗೆ ಅತಿಥ್ಯ ಮತ್ತು ಹೋಟೆಲ್ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವಿದೆ ಎಂದರು.
 
ಮಾರ್ಟಿನ್ ವೆಟ್ರಿಚ್ ಅವರು ಪ್ರಸಕ್ತ ಸನ್ನಿವೇಶದಲ್ಲಿ ಅತಿಥಿ ಸತ್ಕಾರ ಕ್ಷೇತ್ರ ಬೆಳೆಯುತ್ತಿರುವ ಪರಿ, ವ್ಯಾಪಕ ಅವಕಾಶ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT