ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ: ವಿಚಾರಣೆಗೆ 10 ತ್ವರಿತ ಕೋರ್ಟ್‌

Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ಹತ್ತು ತ್ವರಿತ ನ್ಯಾಯಾಲ­ಯಗಳನ್ನು ತೆರೆಯ­ಲಾಗುವುದು. ಈ ಸಂಬಂಧ ಸರ್ಕಾರಿ ಆದೇಶ ಹೊರಡಿ­ಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸೋಮವಾರ ಇಲ್ಲಿ ಹೇಳಿದರು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿ­ಸಿದ ಪ್ರಕಾರ ತ್ವರಿತ ನ್ಯಾಯಾ ಲಯ­ಗಳನ್ನು ತೆರೆಯಲಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಪ್ರತಿಯೊಂದು ನ್ಯಾಯಾಲಯಕ್ಕೆ ಒಬ್ಬ ನ್ಯಾಯಾಧೀಶರು ಸೇರಿದಂತೆ ಒಟ್ಟು 37 ಸಿಬ್ಬಂದಿ ನೇಮಕ ಮಾಡಲಾಗು­ತ್ತದೆ.

ಸಚಿವರಿಗೆ ಪತ್ರ: ಮಹಿಳೆಯರನ್ನು ಕೆಟ್ಟದಾಗಿ  ಬಿಂಬಿಸುವವರ ವಿರುದ್ಧ ಕಠಿಣ ಕ್ರಮವನ್ನು ಜಾರಿಗೊಳಿ ಸುವಂತೆ ಗೃಹ ಸಚಿವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಪತ್ರ ಬರೆಯುವುದಾಗಿ  ತಿಳಿಸಿದರು.

ಹೊಸ ನ್ಯಾಯಾಲಯ ಎಲ್ಲಿ?
ಬೆಂಗಳೂರು – 3, ಬೆಳಗಾವಿ, ದಕ್ಷಿಣ ಕನ್ನಡ, ಗುಲ್ಬರ್ಗ, ಮಡಿಕೇರಿ, ಮಂಡ್ಯ, ಮೈಸೂರು, ರಾಮನಗರ ತಲಾ ಒಂದು.

ರಾಜ್ಯ ಹಿಂದುಳಿದ ವರ್ಗಗಳ ಬಹಿರಂಗ ಸಭೆ
ಬೆಂಗಳೂರು
: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಇದೇ ೧೯ ಮತ್ತು ೨೦ ರಂದು ವಿವಿಧ ಜಾತಿ, ಜನಾಂಗಗಳ ಕುರಿತು ಬಹಿರಂಗ ವಿಚಾರಣಾ ಸಭೆ ಆಯೋಜಿಸಿದೆ. ಬೆಂಗಳೂರಿನ ವಸಂತನಗರದ  ಆಯೋಗದ ಕಚೇರಿಯಲ್ಲಿ ಬೆಳಿಗ್ಗೆ ೧೧ಕ್ಕೆ ಸಭೆ ಆರಂಭವಾಗಲಿದೆ. ಸೆ.೧೯ ರಂದು ನಾಯರ್, ವೀರಶೈವ ಆದಿಬಣಜಿಗ, ಶಿವಸಿಂಪಿ ಹಾಗೂ ಮೊದಲಿಯಾರ್ ಜನಾಂಗಗಳಿಗೆ ಸಂಬಂಧಿಸಿದಂತೆ ಮತ್ತು ಸೆ. ೨೦ ರಂದು ಆರ್ಯವೈಶ್ಯ ಬೇರಿ ಚೆಟ್ಟಿಯಾರ್, ಗೋಂದಳಿ, ಯಲ್ಲಮ್ಮ ಒಕ್ಕಲಿಗ ಹಾಗೂ ಮುಖಾರಿ ಜನಾಂಗಗಳಿಗೆ ಸಂಬಂಧಿಸಿ ದಂತೆ ಬಹಿರಂಗ ವಿಚಾರಣೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT