ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಧುನಿಕ ದೂರದರ್ಶಕಕ್ಕೆ ಪೈಪೋಟಿ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೂಲಾರ್ಡಿ (ಆಸ್ಟ್ರೇಲಿಯ) (ಪಿಟಿಐ): ಮುಂದಿನ ಪೀಳಿಗೆಯ ಭಾರಿ ಶಕ್ತಿ ಸಾಮರ್ಥ್ಯದ ರೇಡಿಯೊ ದೂರದರ್ಶಕ ಎಂದು ಬಿಂಬಿಸಲಾಗಿರುವ `ಸ್ಕ್ವೇರ್ ಕಿ.ಮೀ ಅರೇ~ (ಎಸ್‌ಕೆಎ) ಪಡೆಯಲು ವಿವಿಧ ರಾಷ್ಟ್ರಗಳು ಪೈಪೋಟಿ ನಡೆಸಿವೆ.

ಎರಡು ಶತಕೋಟಿ ವೆಚ್ಚದ ಈ ಅತ್ಯಾಧುನಿಕ ದೂರದರ್ಶಕ ಪಡೆಯಲು ಕೆನಡಾ, ಬ್ರೆಜಿಲ್, ಜರ್ಮನಿ, ಚೀನಾ, ಭಾರತ, ರಷ್ಯ, ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಅನೇಕ ರಾಷ್ಟ್ರಗಳು ಉತ್ಸಾಹ ತೋರಿವೆ. ಆದರೂ ಆಸ್ಟ್ರೇಲಿಯಾದ ಬೂಲಾರ್ಡಿ ಕೇಂದ್ರದಲ್ಲಿ ಈ ಯಂತ್ರವನ್ನು ಸ್ಥಾಪಿಸುವ ಉದ್ದೇಶವಿದೆ.

`ಭಾರತ ಸೇರಿದಂತೆ 20ಕ್ಕೂ ಹೆಚ್ಚು ರಾಷ್ಟ್ರಗಳ ವಿವಿಧ ವೈಜ್ಞಾನಿಕ ಸಂಸೋಧನಾ ಸಂಸ್ಥೆಗಳ ಮಾರ್ಗದರ್ಶನದಲ್ಲಿ ಈ ದೂರದರ್ಶಕ ಯಂತ್ರವನ್ನು ತಯಾರಿಸಲಾಗಿದೆ~ ಎಂದು ಅಂತರ ರಾಷ್ಟ್ರೀಯ ಖಗೋಳಶಾಸ್ತ್ರ ಸಂಶೋಧನಾ ಕೇಂದ್ರದ ನಿರ್ದೇಶಕ ಪೀಟರ್ ಕ್ವಿನ್ ತಿಳಿಸಿದ್ದಾರೆ.

ಕಳೆದ ತಿಂಗಳು ಈ ರಾಷ್ಟ್ರಗಳು ಲಿಖಿತ ಪ್ರಸ್ತಾವ ಸಲ್ಲಿಸಿದ್ದು, ಅಂತರ ರಾಷ್ಟ್ರೀಯ ಮಟ್ಟದ ಸಮಿತಿ ಈ ರಾಷ್ಟ್ರಗಳಲ್ಲಿಯೇ ದೂರದರ್ಶಕ  ಸ್ಥಾಪಿಸಲು ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
 
2016ರಲ್ಲಿ ಇದಕ್ಕಾಗಿ ಕೇಂದ್ರದ ನಿರ್ಮಾಣ ಆರಂಭವಾಗಲಿದ್ದು, 2024ರ ವೇಳೆಗೆ ದೂರದರ್ಶಕ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಬ್ರಹ್ಮಾಂಡ, ಆಕಾಶಗಂಗೆ, ಖಗೋಳಶಾಸ್ತ್ರ, ಭೌತಶಾಸ್ತ್ರದ ಮೂಲ ನೀತಿ, ಸಿದ್ಧಾಂತಗಳ ಬಗ್ಗೆ ಮತ್ತಷ್ಟು ಅರಿಯಲು ಈ ಯಂತ್ರ ನೆರವಾಗಲಿದೆ. ಇದರ ಕಾಲಾವಧಿ 50 ವರ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT