ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಧುನಿಕ ಫ್ಯಾಕೋ ಯಂತ್ರ ಹಾವೇರಿಗೆ

Last Updated 22 ಸೆಪ್ಟೆಂಬರ್ 2011, 9:45 IST
ಅಕ್ಷರ ಗಾತ್ರ

ಹಾವೇರಿ: `ಇಲ್ಲಿನ ರೇಣುಕಾ ಕಣ್ಣಿನ ಆಸ್ಪತ್ರೆಯಲ್ಲಿ ಸ್ವಿಜ್ಜರಲ್ಯಾಂಡ್ ನಿರ್ಮಿತ ಫಾಕೊ ಯಂತ್ರ ಆರ‌್ಟಿಲ್ ಕ್ಯಾಟಾ  ರೆಕ್ಸ್ ಹಾಗೂ ನೂತನ ಸ್ಲಿಟ್   ಲ್ಯಾಂಪ್, ರಿಚಿಟ್ ಅಪ್ಲಿನೇಷನ್ ಟೊನೊ ಮೆಟರ್ ಎನ್ನುವ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲಾಗಿದೆ~ ಎಂದು ಆಸ್ಪತ್ರೆಯ ವೈದ್ಯ ಡಾ.ಉಮೇಶ ಜಿ. ಹಿರೇಮಠ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ದೇಶದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಇರುವ ಯಂತ್ರಗಳಲ್ಲಿಯೇ ಈ ಫ್ಯಾಕೋ ಮಶೀನ್ ಅತ್ಯಾಧುನಿಕವಾಗಿದೆ. ಇಡೀ ದೇಶ ದಲ್ಲಿಯೇ ಏಳು ಯಂತ್ರಗಳು ಬಂದಿವೆ. ಅದರಲ್ಲಿ ತಮ್ಮ ಆಸ್ಪತ್ರೆಗೆ ಬಂದಿರುವುದು ಕೂಡಾ ಒಂದಾಗಿದೆ. ಈ ಮಶೀನ್ ಬೆಲೆ 10.50 ಲಕ್ಷ ರೂ.ಗಳಾಗಿದೆ ಎಂದು ಹೇಳಿದರು.

ಹೊಸ ವಿನ್ಯಾಸ ಹೊಂದಿರುವ ಈ ಫ್ಯಾಕೋ ಮಶೀನ್ ಕೇವಲ 1.8 ಮಿ.ಮೀದಿಂದ 2.2 ಮಿ.ಮೀ. ವರೆಗಿನ ರಂದ್ರದಲ್ಲಿನ ಪೊರೆ ಚಿಕಿತ್ಸೆಯನ್ನು ಯಾರದೇ ಸಹಾಯವಿಲ್ಲದೇ ಕೇವಲ ಒಂದು ನಿಮಿಷಕ್ಕಿಂತ ಕಡಿಮೆ ಅವಧಿ ಯಲ್ಲಿ ಮಾಡಲಿದೆ. ಇಷ್ಟು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆಯನ್ನು ಹಿಂದಿನ ಯಾವ ಯಂತ್ರಗಳು ಮಾಡಲು ಸಾಧ್ಯವಾಗುತ್ತಿ ರಲಿಲ್ಲ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಕಣ್ಣಿನ ಪೊರೆ ಸಮಸ್ಯೆ ಇರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಒಮ್ಮೆ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ದೊರೆಯುತ್ತದೆ. ಎರ ಡ್ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡಿದರೆ ಫಲತಾಂಶ ಪಡೆಯಲು ಸಾಧ್ಯವಾಗುವು ದಿಲ್ಲ.

ಅದಕ್ಕಾಗಿ ಈ ಕ್ಷೇತ್ರದಲ್ಲಿ ಆಗಿರುವ ತಂತ್ರಜ್ಞಾನದ ಅಭಿವೃದ್ಧಿಯನ್ನು ತಮ್ಮ ಆಸ್ಪತ್ರೆಯಲ್ಲಿ ಅಳವಡಿಸುತ್ತಿರುವುದಾಗಿ ಹೇಳಿದರು.

ಇದರಿಂದ ಜಿಲ್ಲೆಯ ಜನರಿಗೆ ಅನು ಕೂಲವಾಗುವುದರ ಜತೆಗೆ ಯಾವುದೇ ಹೆದರಿಕೆ ಇಲ್ಲದೇ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದಾಗಿದೆ. ಜಿಲ್ಲೆಯ ಜನರು ಈ ಆತ್ಯಾಧುನಿಕ ಯಂತ್ರದ ಪ್ರಯೋಜನ ಪಡೆದುಕೊಳ್ಳ ಬೇಕೆಂದು ಅವರು ವಿನಂತಿಸಿದರು.

ತಾವು ಜಿಲ್ಲೆಯನ್ನು ಕೇಂದ್ರವನ್ನಾಗಿ ಟ್ಟುಕೊಂಡು ಜಿಲ್ಲೆಯಾದ್ಯಂತ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಉಚಿತ ಶಸ್ತ್ರ ಚಿಕಿತ್ಸೆಗಳನ್ನು ಮಾಡು ತ್ತಿದ್ದು, ಈವರೆಗೆ ಗ್ರಾಮೀಣ ಪ್ರದೇಶದ 2 ಸಾವಿರಕ್ಕೂ ಹೆಚ್ಚಿನ ಜನರಿಗೆ ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆ ಮಾಡಿರುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿಎಸ್.ಎಸ್.ಕಬ್ಬಿನಕಂತಿಮಠ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT