ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್: ಎರಡು ಹೊಸ ವಿಕ್ರಮಗಳು

Last Updated 17 ನವೆಂಬರ್ 2011, 9:45 IST
ಅಕ್ಷರ ಗಾತ್ರ

ಮೈಸೂರು: ಓವೆಲ್ ಮೈದಾನದಲ್ಲಿ ನಡೆಯುತ್ತಿರುವ ಮೈಸೂರು ವಿಶ್ವವಿದ್ಯಾಲಯದ 83ನೇ ಅಂತರ ಕಾಲೇಜು ಅಥ್ಲೆಟಿಕ್ ಕೂಟದ ಎರಡನೇ ದಿನವಾದ ಬುಧವಾರ ಮಹಿಳೆಯರ ವಿಭಾಗದಲ್ಲಿ ಎರಡು ಕೂಟ ದಾಖಲೆಗಳು ನಿರ್ಮಾಣವಾದವು.

ಮೈಸೂರಿನ ಟೆರೆಷಿಯನ್ ಪ್ರಥಮ ದರ್ಜೆ ಕಾಲೇಜಿ ಶಹಜಹಾನಿ ಜಾವೆಲಿನ್ ಥ್ರೋನಲ್ಲಿ ಮತ್ತು ಟೆರೆಷಿಯನ್ ಕಾಲೇಜಿನವರೇ ಆದ ಎಸ್. ರಮ್ಯಶ್ರೀ ಟ್ರಿಪಲ್ ಜಂಪ್‌ನಲ್ಲಿ ನೂತನ ದಾಖಲೆ ಬರೆದು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡರು.

ಜಾವೆಲಿನ್ ಥ್ರೋನಲ್ಲಿ ಶಹಜಹಾನಿ 43.94 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ 1996-97ರ ಕೂಟದಲ್ಲಿ ಟೆರೆಷಿಯನ್ ಕಾಲೇಜಿನ ಪಿ.ಕೆ. ಪುಷ್ಪವತಿ ಅವರು ರಚಿಸಿದ್ದ (ಹಳೆಯದು: 40.60ಮೀ) ದಾಖಲೆಯನ್ನು ಅಳಿಸಿ ಹಾಕಿದರು.

ಟ್ರಿಪಲ್ ಜಂಪ್‌ನಲ್ಲಿ  10.96 ಮೀಟರ್ ದೂರ ಜಿಗಿದ ಎಸ್. ರಮ್ಯಶ್ರೀಯವರು 2005-06ನೇ ಸಾಲಿನ ಕೂಟದಲ್ಲಿ ಮಲ್ಲಪ್ಪ ಮರಿಮಲ್ಲಪ್ಪ ಕಾಲೇಜಿನ ಪಿ.ಎಸ್. ಶ್ರುತಿ (10.85 ಮೀ)ಸಾಧಿಸಿದ್ದ ದಾಖಲೆಯನ್ನು ಮೀರಿ ನಿಂತರು.

ಸುಮಂತ್ ವೇಗದ ರಾಜ:
ಪುರುಷರ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದ ಮೈಸೂರಿನ ಟಿಟಿಎಲ್ ಕಾಲೇಜಿನ ಕೆ.ಪಿ. ಸುಮಂತ್ ಕೂಟದ `ವೇಗದ ರಾಜ~ನಾಗಿ ಹೊರಹೊಮ್ಮಿದರು. 11.16ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಪ್ರಥಮ ಸ್ಥಾನ ಗಳಿಸಿದರು. ಮಂಗಳವಾರ ಅವರು 200 ಮೀಟರ್ ಓಟದಲ್ಲಿಯೂ ಸ್ವರ್ಣ ಗಳಿಸಿದ್ದರು.

ಫಲಿತಾಂಶ:
ಪುರುಷರು: 100ಮೀ ಓಟ: ಕೆ.ಪಿ. ಸುಮಂತ್ (ಟಿಟಿಎಲ್ ಕಾಲೇಜು, ಮೈಸೂರು)-1, ಎಂ.ಕೆ. ಕಿರಣಕುಮಾರ (ಸರ್ಕಾರಿ ಕಾಲೇಜು, ಮಂಡ್ಯ)-2, ಕೆ.ಎನ್. ಪೂರ್ಣಚಂದ್ರ (ಸೋಮಾನಿ ಕಾಲೇಜು, ಮೈಸೂರು)-3, ಕಾಲ:11.16ಸೆ; 5000 ಮೀ: ಎಸ್.ಬಿ. ಯಲ್ಲಪ್ಪ (ಪಿಜಿಎಸ್‌ಸಿ ಮೈಸೂರು)-1, ವಿನ್ಸೆಂಟ್ ಪೆರಿಯಾನಯಗಂ (ಮಹದೇಶ್ವರ ಎಸ್‌ಎಂಸಿ, ಕೊಳ್ಳೆಗಾಲ)-2, ಎಸ್.ಆರ್. ಅವಿಜಿತ್ (ಭಾರತಿ ಕಾಲೇಜು ಭಾರತಿನಗರ)-3, ಕಾಲ: 17ನಿ, 01.62ಸೆ; ಹ್ಯಾಮರ್ ಥ್ರೋ: ಕೆ.ಎನ್. ರಾಜೇಶ್ (ಜೆಎಸ್‌ಎಸ್ ಊಟಿರಸ್ತೆ)-1, ಪಿ. ಜೆರಿನ್ (ಸೇಂಟ್ ಫಿಲೋಮಿನಾ ಕಾಲೇಜು, ಮೈಸೂರು)-2, ಧನಂಜಯ (ಸರ್ಕಾರಿ ಕಾಲೇಜು, ಚನ್ನರಾಯಪಟ್ಟಣ)-3, ಕಾಲ:26.49ಸೆ;

ಪೋಲ್‌ವಾಲ್ಟ್: ಎಂ.ಎಸ್. ಬಸವರಾಜು (ಶಾಂತಿ ಕಾಲೇಜು ಮಳವಳ್ಳಿ)-1, ಎಂ. ಅನಿಲಕುಮಾರ (ಪಿಎಲ್‌ಎನ್. ಕಾಲೇಜು ಪೂರಿಗಾಲಿ)-2, ಸಣ್ಣಪ್ಪ (ಪಿಜಿಎಸ್‌ಸಿ, ಮಾನಸಗಂಗೋತ್ರಿ ಮೈಸೂರು)-3, ಎತ್ತರ: 2.90ಮೀ;
ಮಹಿಳೆಯರು: 200 ಮೀ ಓಟ: ಎಸ್. ಶೋಭಾ (ಪಿಜಿಎಸ್‌ಸಿ ಮೈಸೂರು)-1, ಪ್ರಗತಿ ಮುತ್ತಣ್ಣ (ಮಹಾಜನ ಕಾಲೇಜು ಮೈಸೂರು)-2, ಆಶಾರಾಣಿ (ಸರ್ಕಾರಿ ಕಾಲೇಜು ನಂಜನಗೂಡು)-3, ಕಾಲ: 28.16ಸೆ; 5000 ಮೀ: ಶ್ರದ್ಧಾರಾಣಿ ಎಸ್. ದೇಸಾಯಿ (ಟೆರೆಷಿಯನ್ ಕಾಲೇಜು ಮೈಸೂರು)-1, ಎಂ. ರೇಣುಕಾ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಲಗೂರು)-2, ಎಚ್.ಜಿ. ಸುಮಾ (ಸರ್ಕಾರಿ ಕಲಾ ಕಾಲೇಜು ಹಾಸನ)-3, ಕಾಲ: 20ನಿ,36.56ಸೆ; ಜಾವೆಲಿನ್ ಥ್ರೋ: ಶಹಜಹಾನಿ (ಟೆರೆಷಿಯನ್ ಕಾಲೇಜು ಮೈಸೂರು)-1, ಡಿ. ಆರ್. ಅನುರಾಧಾ (ಜಿಎಫ್‌ಜಿಸಿ ಚನ್ನರಾಯಪಟ್ಟಣ)-2, ಸುಕನ್ಯಾ (ಡಿಡಿ ಅರಸ್ ಕಾಲೇಜು ಹುಣಸೂರು)-3, ಕಾಲ: ನೂತನ ದಾಖಲೆ: 43.94ಮೀ (ಹಳೆಯದು: 40.60ಮೀ),

ಟ್ರಿಪಲ್ ಜಂಪ್: ಎಸ್. ರಮ್ಯಶ್ರೀ (ಟೆರೆಷಿಯನ್ ಕಾಲೇಜು ಮೈಸೂರು)-1, ತೇಜಸ್ವಿನಿ (ಭಾರತಿ ಕಾಲೇಜು ಭಾರತಿನಗರ)-2, ಸಿ.ಆರ್. ದೀಪಿಕಾ (ಪಿಜಿಎಸ್‌ಸಿ ಮಾನಸಗಂಗೋತ್ರಿ ಮೈಸೂರು)-3, ಕಾಲ: ನೂತನ ದಾಖಲೆ: 10.96ಸೆ (ಹಳೆಯದು: 10.85ಮೀ), 400ಮೀ ಹರ್ಡಲ್ಸ್: ಡಿ.ಕೆ. ವಿಜಯಕುಮಾರಿ (ಶಾಂತಿ ಕಾಲೇಜು ಮಳವಳ್ಳಿ)-1, ಸಿ. ಶಿಲ್ಪಾ (ಪಿಜಿಎಸ್‌ಸಿ ಮೈಸೂರು)-2, ಕೆ.ಆರ್. ವಿನಯಶ್ರೀ (ಸರ್ಕಾರಿ ಮಹಿಳಾ ಕಾಲೇಜು, ಕೆ.ಆರ್. ನಗರ)-3, ಕಾಲ: 1ನಿ, 15.74ಸೆ;

5 ಕಿ.ಮೀ ನಡಿಗೆ: ಕೆ.ವಿ. ಪಲ್ಲವಿ-1, ಕೆ.ಆರ್. ಪವಿತ್ರ -2 (ಸರ್ಕಾರಿ ಕಾಲೇಜು, ಕಾಟನಹಳ್ಳಿ), ಕೆ.ಪಿ. ರತ್ನ (ಸರ್ಕಾರಿ ಮಹಿಳಾ ಕಾಲೇಜು, ಮದ್ದೂರು)-3, ಕಾಲ:34ನಿ, 47.10ಸೆ,

4್ಡ400 ಮೀ ರಿಲೆ: ಟೆರೆಷಿಯನ್ ಕಾಲೇಜು ಮೈಸೂರು (ಮುಬೀನಾ ಬೇಗಂ, ಕೆ. ಯಶಸ್ವಿನಿ, ಎಸ್. ಅಂಜಲಿ, ಶ್ರದ್ಧಾರಾಣಿ ಎಸ್. ದೇಸಾಯಿ)-1, ಪಿಜಿಎಸ್‌ಸಿ ಮಾನಸಗಂಗೋತ್ರಿ ಮೈಸೂರು (ಟಿ.ಡಿ. ಸೌಮ್ಯ, ಎನ್. ಭಾಗ್ಯಲಕ್ಷ್ಮೀ, ಟಿ.ನ್. ನಳಿನಾ, ಸಿ. ಸ್ಮಿತಾ)-2, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ.ಆರ್. ನಗರ (ಎಚ್.ವಿ. ಸಹನಶ್ರೀ, ಎಸ್. ರಾಣಿ, ಕೆ.ಎಸ್. ಪುಷ್ಪವತಿ, ಸೌಮ್ಯ)-3, ಕಾಲ: 4ನಿ,40.37ಸೆ;
ಹೆಪ್ಟಥ್ಲಾನ್: ಪವಿತ್ರ (ಟೆರೆಷಿಯನ್ ಕಾಲೇಜು ಮೈಸೂರು)-1, ಕೆ.ವಿ. ಪಲ್ಲವಿ (ಸರ್ಕಾರಿ ಕಾಲೇಜು, ಕ್ಯಾತನಹಳ್ಳಿ)-2, ಪಾಯಿಂಟ್ಸ್: 3627
 
ಮಹಾಬೋಧಿ, ಪ್ರಮತಿ ಶಾಲೆಗೆ ಜಯ
ಮೈಸೂರು: ಮಹಾಬೋಧಿ ಪ್ರೌಢಶಾಲೆಯ ತಂಡವು ಮೈಸೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ  ಮೀರ್ ಇಕ್ಬಾಲ್ ಹುಸೇನ್ ಸಬ್ ಜೂನಿಯರ್ ಫುಟ್‌ಬಾಲ್ ಟೂರ್ನಿಯ ಎರಡನೇ ದಿನವಾದ ಬುಧವಾರ ಫರೂಕಿಯಾ ಬಾಲಕರ ಪ್ರೌಢಶಾಲೆಯನ್ನು ಏಳು ಗೋಲುಗಳಿಂದ ಸೋಲಿಸಿತು.

ಪಂದ್ಯದ ಮೊದಲ ನಿಮಿಷದಲ್ಲಿಯೇ ಸನತ್ ಗಳಿಸಿದ ಗೋಲಿನಿಂದ ಮಹಾಬೋಧಿ ಶಾಲೆಯು ಮುನ್ನಡೆ ಪಡೆಯಿತು. ನಂತರವೂ ಫರೂಕಿಯಾ ತಂಡವನ್ನು ಕಾಡಿದ ಸನತ್ ಮತ್ತೆ ಮೂರು ಗೋಲು ಗಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಕುಶಾನ್ ಎರಡು ಗೋಲು ಹೊಡೆದರು.

ಇನ್ನೊಂದು ಪಂದ್ಯದಲ್ಲಿ ಪ್ರಮತಿ ಹಿಲ್‌ವ್ಯೆ ಶಾಲೆಯ ತಂಡವು 4-0ಯಿಂದ ವೆಸ್ಟ್ ಲಯನ್ಸ್ ಶಾಲೆಯ ವಿರುದ್ಧ ಗೆದ್ದರು. ಫೈರೋಜ್ ಎರಡು ಮತ್ತು ಅನಿರುದ್ಧ ಹಾಗೂ ಲೋಹಿತ್ ಗೌಡ ತಲಾ ಒಂದು ಗೋಲು ಗಳಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

ಇನ್ನುಳಿದ ಪಂದ್ಯಗಳಲ್ಲಿ ರೋಟರಿ ಶಾಲೆಯು 3-1ರಿಂದ ಹಾರ್ಡ್ವಿಕ್ ಶಾಲೆ ವಿರುದ್ಧ, ಡಿಎಂಎಸ್ ಶಾಲೆಯು 2-0ಯಿಂದ ಇನ್‌ಫಾಂಟ್ ಪ್ರೌಢಶಾಲೆ ವಿರುದ್ಧವೂ, ಕೇಂದ್ರಿಯ ವಿದ್ಯಾಲಯ `ಎ~ ತಂಡವು ರೋಟರಿ ಶಾಲೆಯ ವಿರುದ್ಧ 1-0 ವಿರುದ್ಧ ಜಯಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT