ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್: ಸಂಜಯ್, ಪದ್ಮಿನಿಗೆ ಅಗ್ರಸ್ಥಾನ

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ ಅಮೀನ್ ಕಾಲೇಜ್‌ನ ವಿ.ಸಂಜಯ್ ಹಾಗೂ ಸುರಾನಾ ಕಾಲೇಜ್‌ನ ಎಂ.ಜಿ.ಪದ್ಮಿನಿ ಗುರುವಾರ ಇಲ್ಲಿ ಆರಂಭವಾದ ಬೆಂಗಳೂರು ವಿಶ್ವವಿದ್ಯಾಲಯ ಆಶ್ರಯದ ಅಂತರ ಕಾಲೇಜ್ ಅಥ್ಲೆಟಿಕ್ ಕೂಟದ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟದ ಮೊದಲ ದಿನ ಸಂಜಯ್ 21.7 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಸೇಂಟ್ ಜೋಸೆಫ್ಸ್ ವಿಜ್ಞಾನ ಹಾಗೂ ಕಲಾ ಕಾಲೇಜ್‌ನ ಎಸ್.ವಗರ್ತ್ ಗೌರವ್ ಹಾಗೂ ಕಾಮ   ರ್ಸ್ ಕಾಲೇಜ್‌ನ ತನ್ವಿಜ್ ಬಟಾವಿಯ ನಂತರದ ಸ್ಥಾನ ಗಳಿಸಿದರು. ಎಂ.ಜಿ.ಪದ್ಮಿನಿ 25.8 ಸೆ.ಗಳಲ್ಲಿ ಗುರಿ ಮುಟ್ಟಿದರು.

ಫಲಿತಾಂಶ ಇಂತಿವೆ: ಪುರುಷರ ವಿಭಾಗ: 800 ಮೀ.: ಸಿ.ಎಸ್.ನವೀನ್ (ಅಲ್-ಅಮಿನ್ ಕಾಲೇಜ್; 2:01.1)-1, ಶಿವಾನಂದ ಎಸ್.ಹಡಪದ (ಅಲ್-ಅಮಿನ್ ಕಾಲೇಜ್; 2:02.6)-2, ಎನ್.ವಿನಯ್ (ನ್ಯಾಷನಲ್ ಕಾಲೇಜ್: 2:06.7)-3; 200 ಮೀ.: ವಿ.ಸಂಜಯ್ (ಅಲ್ ಅಮೀನ್ ಕಾಲೇಜ್; 21.7 ಸೆ.)-1, ಎಸ್.ವಗರ್ತ್ ಗೌರವ್ (ಸೇಂಟ್ ಜೋಸೆಫ್ಸ್ ವಿಜ್ಞಾನ ಹಾಗೂ ಕಲಾ ಕಾಲೇಜ್; 22.4)-2, ತನ್ವಿಜ್ ಬಟಾವಿಯ (ಸೇಂಟ್ ಜೋಸೆಫ್ಸ್  ಕಾಮರ್ಸ್ ಕಾಲೇಜ್; 22.7)-3; ಹೈಜಂಪ್: ಟಿ.ರವಿ (ಬಿಇಎಲ್ ಎಫ್‌ಜಿಸಿ ಕಾಲೇಜ್; 1.70 ಮೀ.)-1, ಬಿ ಅಹ್ಮದ್ ಫೈಜಲ್ (ಎಂ.ಎಸ್.ರಾಮಯ್ಯ ಕಾಲೇಜ್; 1.68)-2, ಮೆಲ್ವಿನ್ (ಸೇಂಟ್ ಜೋಸೆಫ್ಸ್ ಕಾಲೇಜ್; 1.60)-3.

ಮಹಿಳೆಯರ ವಿಭಾಗ: 200 ಮೀ,: ಎಂ.ಜಿ.ಪದ್ಮಿನಿ (ಸುರಾನಾ ಕಾಲೇಜ್; 25.8ಸೆ.)-1, ಶಾಲಿನಿ ನಾಯಕ್ (ಬಿಎಂಎಸ್ ಮಹಿಳಾ ಕಾಲೇಜ್; 26.5)-2, ಜಿ.ಎನ್.ಸುನಿತಾ (ಜಿಎಫ್‌ಜಿಸಿ ಚಿಕ್ಕಬಳ್ಳಾಪುರ; 31.0)-3. ಲಾಂಗ್‌ಜಂಪ್: ಬಿ.ಬಿ.ಶುಭಾ (ಸೆಂಟ್ರಲ್ ಕಾಲೇಜ್; 5.30 ಮೀ.)-1, ಆಲಿವಿಯಾ ಕ್ರಿಸ್ಟೈನ್ (ಮೌಂಟ್ ಕಾರ್ಮೆಲ್ ಕಾಲೇಜ್: 4.29)-2, ಸಿ.ಎಸ್.ಸ್ಮಿತಾ (ಸುರಾನಾ ಕಾಲೇಜ್; 4.06)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT