ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್‌: ಬೆಳ್ಳಿ ಗೆದ್ದ ಜ್ಯೋತಿ

Last Updated 8 ಸೆಪ್ಟೆಂಬರ್ 2013, 20:07 IST
ಅಕ್ಷರ ಗಾತ್ರ

ರಾಂಚಿ (ಪಿಟಿಐ): ಮೊದಲ ದಿನ ನಿರಾಸೆ ಅನುಭವಿಸಿದ್ದ ಕರ್ನಾಟಕ ಇಲ್ಲಿ ನಡೆಯುತ್ತಿರುವ 53ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಷಿಪ್‌­ನಲ್ಲಿ ಎರಡನೇ ದಿನ ಒಂದು ಬೆಳ್ಳಿ ಪದಕ ಗೆದ್ದುಕೊಂಡಿತು. ಇದಕ್ಕೆ ಕಾರಣ­ವಾಗಿದ್ದು ಭರವಸೆಯ  ಅಥ್ಲೀಟ್ ಎಚ್‌.ಎಂ. ಜ್ಯೋತಿ.

ಮಹಿಳೆಯರ 100 ಮೀಟರ್‌ ಓಟದ ಸ್ಪರ್ಧೆಯಲ್ಲಿ ಜ್ಯೋತಿ 11.87 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಈ ಸಾಧನೆ ಮಾಡಿದರು. ಒಎನ್‌ಜಿಸಿಯ ಧ್ಯುತಿ ಚಂದ್‌ 11.73 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಸಾಧನೆ ಮಾಡಿದರು. ಈ ವಿಭಾಗದ ಕಂಚು ರೈಲ್ವೆಯ ಮರ್ಲಿನ್‌ ಕೆ. ಜೋಸೆಫ್‌ (ಕಾಲ: 11.95ಸೆ.) ಪಾಲಾಯಿತು.

ಆದರೆ, ಜೋಸೆಫ್‌ ಸೆಮಿಫೈನಲ್‌ ಹೀಟ್‌ನಲ್ಲಿ 13 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿ ಫೈನಲ್‌ ತಲುಪಿದ್ದರು. ನಿಗದಿತ ಗುರಿಯನ್ನು ಈ ಅಥ್ಲೀಟ್‌ 11.35 ಸೆಕೆಂಡ್‌ಗಳಲ್ಲಿ ಮುಟ್ಟಿದ್ದರು. ಆದರೆ, ಫೈನಲ್‌ನಲ್ಲಿ ಅವರು ಮೊದಲಿನಂತೆ ಓಡುವಲ್ಲಿ ವಿಫಲರಾದರು. ಈ ಸ್ಪರ್ಧೆಯ ವೇಳೆ ಮಳೆಯೂ ಕಾಡಿತು. ಮಹಿಳೆಯರ 800 ಮೀಟರ್‌ ಸ್ಪರ್ಧೆಯಲ್ಲಿ ಟಿಂಟು ಲೂಕಾ ಚಿನ್ನ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT