ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಿರು ಸಂಗ್ರಹ: ಲೋಕಾಯುಕ್ತ ತಂಡ ಪರಿಶೀಲನೆ

Last Updated 21 ಜನವರಿ 2011, 19:30 IST
ಅಕ್ಷರ ಗಾತ್ರ

ಸಂಡೂರು: ಇಲ್ಲಿನ ನಂದಿಹಳ್ಳಿ ಸಮೀಪ ತಮಿಳುನಾಡು ಮೂಲದ ಪಿ.ಕೆ.ಪೊನ್ನುರಾಜ್ ಮಾಲೀಕತ್ವದ ಪಿ.ಕೆ.ಪಿ. ಮೈನಿಂಗ್ ಕಂಪೆನಿ ಸ್ಟಾಕ್ ಯಾರ್ಡ್‌ನಲ್ಲಿ ಸಂಗ್ರಹಿಸಿರುವ ಕಬ್ಬಿಣದ ಅದಿರನ್ನು ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳ ತಂಡವು ಶುಕ್ರವಾರ ಪರಿಶೀಲಿಸಿತು.

ತಾಲ್ಲೂಕಿನ ಹಲವು ಗಣಿ ಪ್ರದೇಶಗಳಲ್ಲಿ ಎರಡು ದಿನಗಳವರೆಗೆ ಈ ತನಿಖೆ ಮುಂದುವರಿಯಲಿದೆ. ವಿವಿಧ ಕಂಪೆನಿಗಳ ಸ್ಟಾಕ್ ಯಾರ್ಡ್ ಹಾಗೂ ಗಣಿ ಅದಿರು ತೆಗೆಯುವ ಸ್ಥಳದ ಮಾಹಿತಿಯನ್ನೂ ಈ ತಂಡ ಪಡೆದುಕೊಳ್ಳಲಿದೆ.

ಲೋಕಾಯುಕ್ತರು ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಅದಿರು ಸಾಗಣೆ ಕುರಿತು ಮಾರ್ಚ್‌ನಲ್ಲಿ  ನೀಡಲಿದ್ದಾರೆ ಎನ್ನಲಾಗುವ ವರದಿಗೆ ಪೂರಕವಾಗಿ ಈ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

 ಲೋಕಾಯುಕ್ತ ಡಿ.ಎಫ್.ಒ. ಉದಯಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತನಿಖಾ ತಂಡದ ವೀರಭದ್ರಪ್ಪ, ಹೊಸಪೇಟೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಮಲಿಂಗಂ, ಸಂಡೂರು ವಲಯದ ಅರಣ್ಯಾಧಿಕಾರಿಗಳು ತನಿಖಾ ತಂಡದಲ್ಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT