ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅದೃಷ್ಟ' ಪ್ರೇಮ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಇಪ್ಪತ್ತು ವರ್ಷ ಸಿನಿಮಾ ರಂಗದಲ್ಲಿ ಸ್ಥಿರ ಛಾಯಾಗ್ರಾಹಕರಾಗಿದ್ದ ಬದ್ರಿನಾಥ್ `ಅದೃಷ್ಟ' ಪರೀಕ್ಷೆಗೆ ಹೊರಟಿದ್ದಾರೆ. ಅವರು ಮಾತ್ರವಲ್ಲ, ಅವರೊಟ್ಟಿಗೆ ಇನ್ನೂ ಹಲವರ ಪಾಲಿನ `ಅದೃಷ್ಟ' ಪರೀಕ್ಷೆ ಇದು.

ಸುಮಾರು 150ಕ್ಕೂ ಅಧಿಕ ಚಿತ್ರಗಳಿಗೆ ಸ್ಥಿರ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಬದ್ರಿನಾಥ್ ಹಲವು ವರ್ಷಗಳ ನಿರ್ದೇಶನದ ಕನಸು ಕೊನೆಗೂ ಈಡೇರುತ್ತಿರುವ ಸಂತಸದಲ್ಲಿದ್ದರು. ಸಿನಿಮಾ ರಂಗದಲ್ಲಿ ಸೋತವರು, ಏರಿಳಿತ ಕಂಡವರೇ ಈ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಚಿತ್ರದ ಶೀರ್ಷಿಕೆ `ಅದೃಷ್ಟ' ಹೆಚ್ಚು ಅರ್ಥವತ್ತಾಗಿದೆ. `ಹುಚ್ಚ', `ಯಜಮಾನ'ದಂಥ ಹಿಟ್ ಚಿತ್ರಗಳನ್ನು ನೀಡಿದ್ದ ನಿರ್ಮಾಪಕ ರೆಹಮಾನ್ `ಮದುವೆ ಮನೆ' ಚಿತ್ರದಲ್ಲಿ ನಷ್ಟಕಂಡಿದ್ದವರು. ಉದ್ಯಮಿ ನಾಗರಾಜ್ ಅವರ ಸಹಕಾರದೊಂದಿಗೆ ಮತ್ತೆ ಅವರು `ಅದೃಷ್ಟ'ವನ್ನು ಪಣವಾಗಿಟ್ಟು ಬಂಡವಾಳ ಹೂಡುತ್ತಿದ್ದಾರೆ.

`ಅದೃಷ್ಟ' ತ್ರಿಕೋನ ಪ್ರೇಮಕತೆಯ ಚಿತ್ರ. ಮನೋವೈಜ್ಞಾನಿಕ ತಿರುವು ಚಿತ್ರದಲ್ಲಿದೆ. ಆದರೆ ಮನೋರೋಗದ ವಿಚಾರಗಳಿಲ್ಲ ಎಂಬ ವಿವರಣೆ ಬದ್ರಿನಾಥ್ ಅವರದು. ಪ್ರೇಮ ಶಾಶ್ವತ ಸಂಗತಿ. ಹೀಗಾಗಿ ಪ್ರೇಮಕತೆಗಳ ಚಿತ್ರಗಳು ಎಂದೆಂದಿಗೂ ಪ್ರಸ್ತುತ ಎಂದು ಅವರು ವಿಶ್ಲೇಷಿಸಿದರು. ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ `ಗೊಂಬೆಗಳ ಲವ್' ಚಿತ್ರದ ನಾಯಕ ಅರುಣ್ ಅವರ ಎರಡನೇ ಹೆಜ್ಜೆಯಿದು.

ಅಮಾಯಕ ಯುವಕನ ಪಾತ್ರದಲ್ಲಿ ನಟಿಸುತ್ತಿರುವ ಅವರಿಗೆ ಮೊದಲ ಚಿತ್ರಕ್ಕಿಂತ ವಿಭಿನ್ನ ಪಾತ್ರ ಸಿಕ್ಕಿದೆ. ನೃತ್ಯ ಮತ್ತು ಸಾಹಸದ ಪಟ್ಟುಗಳನ್ನು ಪ್ರದರ್ಶಿಸಲು ಅವರು ಕಾತರರಾಗ್ದ್ದಿದಾರೆ.

ಶುಭಾ ಪೂಂಜಾ ಮತ್ತು ರಮ್ಯಾ ಬಾರ್ನಾ ನಾಯಕಿಯರು. ಶುಭಾ ಮತ್ತೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಮುಗ್ಧೆ ಆದರೆ. ಜಗಳಗಂಟಿ ಹುಡುಗಿ ನಾನು ಎಂದು ನಕ್ಕರು ಶುಭಾ. ರಮ್ಯಾ ಬಾರ್ನಾ ಚಿತ್ರದಲ್ಲಿ ವಿದೇಶದಿಂದ ಊರಿಗೆ ಮರಳಿರುವ ಯುವತಿ.

ಹದಿನೈದು ದಿನಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ಬ್ಯಾಂಕಾಕ್‌ಗೆ ಪಯಣಿಸಲಿದೆ. ರಾಜೇಶ್ ರಾಮನಾಥ್ ಐದು ಹಾಡುಗಳಿಗೆ ಸಂಗೀತ ಹೊಸೆಯುವ ಹೊಣೆ ಹೊತ್ತುಕೊಂಡಿದ್ದಾರೆ. ಸತೀಶ್ ಹೊಸ ಛಾಯಾಗ್ರಾಹಕ `ಅದೃಷ್ಟ'ದ ಮೂಲಕ ಪರಿಚಯವಾಗುತ್ತಿದ್ದಾರೆ.

ಚಿತ್ರಗಳು: ಕೆ.ಎನ್.ನಾಗೇಶ್‌ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT