ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ದೂರಿ ಆಂಜನೇಯಸ್ವಾಮಿ ರಥೋತ್ಸವ

Last Updated 28 ಮಾರ್ಚ್ 2011, 5:55 IST
ಅಕ್ಷರ ಗಾತ್ರ

ಮಲೇಬೆನ್ನೂರು:  ಸಮೀಪದ ಯಲವಟ್ಟಿ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ಆಂಜನೇಯಸ್ವಾಮಿ ರಥೋತ್ಸವ ಭಾನುವಾರ ಸಾಂಪ್ರದಾಯಿಕವಾಗಿ ಹಮ್ಮಿಕೊಳ್ಳಲಾಗಿತ್ತು.    ಬಲಿದಾನ, ತೆಂಗಿನ ಕಾಯಿ ಸಮರ್ಪಣೆ ಮಾಡಿದ ನಂತರ ರಾಮರಾಮ ಗೋವಿಂದ ಎನ್ನುತ್ತಾ ತೇರನ್ನು ಎಳೆದರು. 

ಉಪಸ್ಥಿತ ಜನತೆ ಬಾಳೆಹಣ್ಣು, ಮಂಡಕ್ಕಿ, ಉತ್ತತ್ತಿ ರಥಕ್ಕೆ ತೂರಿ ಭಕ್ತಿ ಮೆರೆದರು. ಗ್ರಾಮದ ಉತ್ಸವ ಮೂರ್ತಿ ಉಪಸ್ಥಿತರಿದ್ದವು. ಮಂಗಳವಾದ್ಯ, ಜಾಗಟೆ ಮೇಳ, ಶಂಖವಾದ್ಯ ಮೊಳಗಿದವು. ಡೊಳ್ಳು ಕುಣಿತ, ಭಜನಾತಂಡ, ತಮಟೆ ಮೇಳ, ಜಾಂಚ್, ನಾಸಿಕ್ ಡೋಲು ಕಳೆ ತಂದಿದ್ದವು. ದೇವಾಲಯ ಹಾಗೂ ರಥವನ್ನು ಸುಂದರವಾಗಿ ಅಲಂಕರಿಸಲಾಗಿತ್ತು.  ಸುತ್ತಮುತ್ತಲ ಗ್ರಾಮದ ಜನತೆ ಭಾಗವಹಿಸಿದ್ದರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT