ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಭುತ ಇತಿಹಾಸ ತೆರೆದಿಟ್ಟ ಸಂಶೋಧನೆ

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕಠ್ಮಂಡು (ಐಎಎನ್‌ಎಸ್): ಎವರೆಸ್ಟ್ ಶಿಖರಗಳನ್ನೇರುವುದರಲ್ಲಿ ದಾಖಲೆ ನಿರ್ಮಿಸಿ ‘ಮಿಸ್ಟರ್ ಎವರೆಸ್ಟ್’ ಎಂದೇ ಖ್ಯಾತರಾಗಿರುವ ಅಮೆರಿಕದ ಪೀಟರ್ ಅಥನ್ಸ್, ಎವರೆಸ್ಟ್ ಬೆಟ್ಟಗಳ ಸಾಲಿನಲ್ಲಿರುವ ಮಾನವ ನಿರ್ಮಿತ ಗುಹೆಗಳಲ್ಲಿ ಸಂಶೋಧನೆ ನಡೆಸುವ ಮೂಲಕ ಅದ್ಭುತ ಇತಿಹಾಸವನ್ನು ತೆರೆದಿಡುವ ಪ್ರಯತ್ನ ನಡೆಸಿದ್ದಾರೆ. ಅಪಾರ್ಟ್‌ಮೆಂಟ್‌ಗಳ ಮಾದರಿಯಲ್ಲಿ ವಿವಿಧ ಹಂತಗಳ ವಿನ್ಯಾಸದಲ್ಲಿ ಈ ಗುಹೆಗಳನ್ನು ನಿರ್ಮಿಸಲಾಗಿದೆ.
 
ಕೆಳಮಟ್ಟದ ಗುಹೆಗಳು ಧಾನ್ಯಗಳನ್ನು ಸಂರಕ್ಷಿಸುವ ಕಣಜಗಳಂತೆ ಮತ್ತು ಮೇಲ್ಮಟ್ಟದ ಗುಹೆಗಳನ್ನು ಮಸಣಗಳಂತೆ ನಿರ್ಮಿಸಲಾಗಿದೆ. ಬುದ್ಧ, ಶೆನ್ರಾಬ್ ಸೇರಿದಂತೆ ಹಲವು ಪ್ರಮುಖ ಧರ್ಮ ಪ್ರವಾದಿಗಳ ಕುರಿತ ಚಿತ್ರಣಗಳು ಇಲ್ಲಿವೆ. ಆದರೆ ಧರ್ಮಗಳ ಬಗೆಗಿನ ಅಗತ್ಯ ಮಾಹಿತಿಯ ಕೊರತೆ ಸಂಶೋಧನೆಗೆ ಅಡ್ಡಿಯಾಗಿದೆ. ಗುಹೆಯಲ್ಲಿನ ಚಿತ್ರಗಳು ಟಿಬೆಟ್ ಮತ್ತು ಭಾರತೀಯ ಧಾರ್ಮಿಕ ಕಲೆಗಳ ಸಮ್ಮಿಶ್ರಣವಾಗಿವೆ. ಕೆಲವೊಂದು ಚಿತ್ರಗಳು ಭಾರತದಲ್ಲಿ ಗುಪ್ತರ ಆಡಳಿತ ಕಾಲದಲ್ಲಿದ್ದ ಕಲೆಯ ಪ್ರಭಾವವನ್ನು ಒಳಗೊಂಡಿದೆ.

ಕೆಲವು ಗೋಡೆ ಚಿತ್ರಗಳು ಭಾರತೀಯ ಪುರುಷ ಮತ್ತು ಮಹಿಳಾ ಮಹಾಸಿದ್ಧಿಗಳ ಚಿತ್ರವನ್ನು ಒಳಗೊಂಡಿವೆ. ಪ್ರತಿ ಚಿತ್ರವೂ ಅದಕ್ಕೆ ಸಂಬಂಧಿಸಿದಂತೆ ಚೌಪದಿಗಳನ್ನು ಒಳಗೊಂಡಿವೆ. ಮೊದಲ ಸಾಲು ಮಹಾಸಿದ್ಧನ ಹೆಸರು ಮತ್ತು ಉಳಿದ ಸಾಲುಗಳು ಜೀವವಿಜ್ಞಾನದ ಮಾಹಿತಿಗಳನ್ನು ಹೊಂದಿವೆ ಎಂದು ಅಥನ್ಸ್‌ನ ಪತ್ನಿ ಲೀಸ್ಲ್ ತಿಳಿಸಿದ್ದಾರೆ. ಪರ್ವತಾರೋಹಿಗಳು ಪ್ರವೇಶಿಸಲು ಕಷ್ಟಕರವಾಗಿದ್ದ ಈ ಗುಹೆಗಳಿರುವ ಭಾಗದಲ್ಲಿ ಸಂಶೋಧನೆ ನಡೆಸಲು ಅಥನ್ಸ್ ಸ್ಥಾಪಿಸಿದ ಸರ್ಕಾರೇತರ ಸಂಸ್ಥೆ ನೇಪಾಳ ಸರ್ಕಾರ ಮತ್ತು ಪುರತತ್ವ ಇಲಾಖೆಗಳೊಂದಿಗೆ 2008ರಲ್ಲಿ ಒಪ್ಪಂದ ಮಾಡಿಕೊಂಡು ಗುಹೆಗಳಲ್ಲಿ ಸಂಶೋಧನೆ ನಡೆಸಲು ಅನುಮತಿ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT