ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಭುತ ಸ್ಮಾರಕಕ್ಕೆ ದಕ್ಕದ ವಿಶ್ವ ಪರಂಪರೆ ತಾಣದ ಸೌಭಾಗ್ಯ

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಇಲ್ಲಿನ ವಿಶ್ವವಿಖ್ಯಾತ ಗೋಳಗುಮ್ಮಟ ಮತ್ತೊಮ್ಮೆ ವಿಫಲವಾಗಿದೆ. ಈ ಬಾರಿ ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೆ ಭಾರತದಿಂದ ಕಳುಹಿಸಿದ್ದ ಪ್ರಸ್ತಾವದಲ್ಲಿ `ಪಶ್ಛಿಮ ಘಟ್ಟ ಪರ್ವತ ಶ್ರೇಣಿ~ ಮಾತ್ರ ಕಾಣಿಸಿಕೊಂಡಿದೆ.

ಇದೇ 19ರಂದು ಪ್ಯಾರಿಸ್‌ನಲ್ಲಿ ವಿಶ್ವಪರಂಪರೆ ಸಮಿತಿ ಸಭೆ ನಡೆಯಲಿದ್ದು ವಿಶ್ವದ ಬೇರೆ ಬೇರೆ ಭಾಗಗಳ ಮಹತ್ವದ ಸ್ಮಾರಕಗಳನ್ನು ಯುನೆಸ್ಕೊದ `ವಿಶ್ವ ಪರಂಪರೆ ತಾಣ~ಗಳ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ತೀರ್ಮಾನವಾಗಲಿದೆ.

ರಾಷ್ಟ್ರದ ಬಹುಮುಖ್ಯ ಐತಿಹಾಸಿಕ ತಾಣಗಳಲ್ಲಿ ಒಂದಾದ ಗೋಳಗುಮ್ಮಟವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಬೇಕೆಂದು ಉತ್ತರ ಕರ್ನಾಟಕದ ಇತಿಹಾಸಕಾರರು ಹಾಗೂ ಪರಂಪರೆ ಕಾರ್ಯಕರ್ತರು ಸುಮಾರು ಎರಡು ದಶಕಗಳಿಂದ ಆಗ್ರಹಿಸುತ್ತಲೇ ಬಂದಿದ್ದಾರೆ.

ಆದರೆ, ಈ ಅದ್ಭುತ ಸ್ಮಾರಕಕ್ಕೆ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಲು ಇನ್ನೂ ಸಾಧ್ಯವಾಗಿಲ್ಲ. ಸುಮಾರು 1659ರಲ್ಲಿ ಮೊಹಮ್ಮದ್ ಆದಿಲ್ ಶಾಹ ಇಂಡೊ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಿದ ಈ ಅಪರೂಪದ ಸ್ಮಾರಕಕ್ಕೆ ವಿಶ್ವ ಸ್ಮಾರಕವಾಗಿ ಹೊರಹೊಮ್ಮುವ ಎಲ್ಲ ಅರ್ಹತೆಗಳಿವೆ. ತಾಂತ್ರಿಕವಾಗಿ ವಿಸ್ಮಯವೆಂದೇ ಬಣ್ಣಿಸಲಾಗಿದೆ.
 
ಕಾನ್ಸಂಟಿನ್‌ಪೋಲ್‌ನ ಹಗಿಯಾ ಸೋಫಿಯಾ ಮತ್ತು ರೋಮ್‌ನ ಸೇಂಟ್ ಬೆಸಿಲಿಕಾ ಗುಮ್ಮಟಗಳನ್ನು ಹೊರತುಪಡಿಸಿದರೆ, ಗೋಳಗುಮ್ಮಟ ವಿಶ್ವದ ಮೂರನೇ ಬೃಹತ್ ಗುಮ್ಮಟವೆಂದು ಪರಿಗಣಿಸಲಾಗಿದೆ.
 
ಗೋಳಗುಮ್ಮಟದ ಕೇಂದ್ರಬಿಂದು ಅದರ `ಪಿಸುಗುಟ್ಟುವ ಗ್ಯಾಲರಿ.~ ನೂರಾ-ಇಪ್ಪತ್ತೆರಡು ಅಡಿ ಸುತ್ತಳತೆಯ ಈ ಗ್ಯಾಲರಿಯಲ್ಲಿ ಹೊರಡುವ ಒಂದು ಸಣ್ಣ ಶಬ್ದ ಕೂಡ ಏಳುಸಾರಿ ಪ್ರತಿಧ್ವನಿಸುತ್ತದೆ. ಗ್ಯಾಲರಿಯ ಒಂದು ಬದಿಯಲ್ಲಿ ಗೀರುವ ಒಂದು ಕಡ್ಡಿಯ ಶಬ್ದ ಕೂಡಾ ಆಚೆ ಬದಿಯ ಗ್ಯಾಲರಿಯಲ್ಲಿ ಕುಳಿತವರಿಗೆ ಕೇಳಿಸುತ್ತೆ.

ಗೋಳಗುಮ್ಮಟ ಸೇರಿದಂತೆ ಉತ್ತರ ಕರ್ನಾಟಕದ ಕೇಂದ್ರ ರಕ್ಷಿತ ಸ್ಮಾರಕಗಳನ್ನು ನಿರ್ವಹಿಸುತ್ತಿರುವ ಭಾರತೀಯ ಪ್ರಾಚ್ಯವಸ್ತು ಇಲಾಖೆಯ ಧಾರವಾಡ ವಲಯ ಕಚೇರಿ, ಗೋಳಗುಮ್ಮಟವನ್ನು ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿಸಲು ದೆಹಲಿಯಲ್ಲಿನ ತನ್ನ ಕೇಂದ್ರ ಕಚೇರಿಗೆ 2005ರಲ್ಲೇ ಪ್ರಸ್ತಾವವನ್ನು ಸಲ್ಲಿಸಿದೆ. ಆದರೆ ಈ ಪ್ರಸ್ತಾವವನ್ನು ಇನ್ನೂ ಯುನೆಸ್ಕೊಗೆ ಕಳಿಸಿಯೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT