ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ವೈತ ಪ್ರವಚನ

Last Updated 2 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಅದ್ವೈತ ವೇದಾಂತದಲ್ಲಿ ಸ್ವಾಮಿ ದಯಾನಂದ ಸರಸ್ವತಿ ವರದು ದೊಡ್ಡ ಹೆಸರು. ತಮಿಳುನಾಡಿನ ಕಾವೇರಿ ತಟಾಕದ ಮಂಜಕ್ಕುಡಿ ಎಂಬ ಗ್ರಾಮದಲ್ಲಿ ಜನಿಸಿದ (1930) ಅವರು ಅದ್ವೈತ ವೇದಾಂತದ ಪ್ರತಿಪಾದಕರಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ. ವಿಶ್ವಸಂಸ್ಥೆ ಸೇರಿದಂತೆ ಹಲವು ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ಪ್ರವಚನ ನೀಡಿದ್ದಾರೆ. ಅದ್ವೈತ ಸಿದ್ಧಾಂತದ ಸ್ಥಾಪಕ ಆದಿ ಶಂಕರಾಚಾರ್ಯರು ಮತ್ತು ಇಂದಿನ ಪೀಳಿಗೆಯನ್ನು ಬೆಸೆಯುವ ಕೊಂಡಿಯಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ.

ದಯಾನಂದ ಸರಸ್ವತಿ ಮತ್ತು ಅವರ 150 ಶಿಷ್ಯರು ವೇದಾಂತ ಪರಂಪರೆಯನ್ನು ಈಗಿನ ಪೀಳಿಗೆಯಲ್ಲಿ ಉಳಿಸಿ ಬೆಳೆಸಲು ಕಂಕಣ ತೊಟ್ಟಿದ್ದಾರೆ.ಅಮೆರಿಕ ಮತ್ತು ಭಾರತದ ಕೆಲವೆಡೆ ಸ್ವಾಮೀಜಿ ‘ಗುರುಕುಲ’ ನಡೆಸುತ್ತಿದ್ದಾರೆ. ಅವರು ಸ್ಥಾಪಿಸಿರುವ ‘ಏಮ್ ಫಾರ್ ಸೇವಾ’ ಸಂಸ್ಥೆ ಬುಡಕಟ್ಟು ಮಕ್ಕಳು, ಗ್ರಾಮೀಣ ಮತ್ತು ನಗರ ಪ್ರದೇಶದ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಧ್ಯೇಯ ಹೊಂದಿದೆ. ದೇಶಾದ್ಯಂತ 79 ಸ್ಥಳಗಳಲ್ಲಿ  ‘ಸೇವಾ’ದ ಉಚಿತ ವಿದ್ಯಾರ್ಥಿ ನಿಲಯಗಳಿವೆ. ಸಮಗ್ರ ಶಿಕ್ಷಣ ನೀಡುವ 17 ಸುಸಜ್ಜಿತ ಶಾಲೆಗಳಿವೆ. ಈ ಶಾಲೆಗಳಲ್ಲಿ ಹದಿನೈದು ಸಾವಿರ ಮಕ್ಕಳು ಪ್ರಸ್ತುತ ಕಲಿಯುತ್ತಿದ್ದಾರೆ.

ಈ ಆಧುನಿಕ ಯುಗದಲ್ಲಿ ಒತ್ತಡಕ್ಕೆ ಒಳಗಾದ ಹಲವರು ಆಧ್ಯಾತ್ಮಿಕ ಚಿಂತನೆ ಬೆಳೆಸಿಕೊಂಡಿರುತ್ತಾರೆ. ಆಧ್ಯಾತ್ಮಿಕ ಪುಸ್ತಕ ಓದುತ್ತಾರೆ. ಪ್ರವಚನ ಕೇಳುತ್ತಾರೆ. ಆದರೆ, ಆ ತತ್ವಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ಸೋಲುತ್ತಾರೆ. ಆಧ್ಯಾತ್ಮಿಕ ತತ್ವ, ಸಿದ್ಧಾಂತಗಳನ್ನು ನಿತ್ಯಜೀವನಕ್ಕೆ ಅಳವಡಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಸ್ವಾಮೀಜಿ ಮಾರ್ಗದರ್ಶನ ಮಾಡಲಿದ್ದಾರೆ.

ಧ್ಯಾನ, ಪ್ರವಚನ: ಶುಕ್ರವಾರ ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ಧ್ಯಾನ. ಸಂಜೆ 5.30ಕ್ಕೆ ಸ್ವಾಮಿ ದಯಾನಂದ ಸರಸ್ವತಿ ಅವರಿಂದ ಸ್ವಾಮಿ ವರದಾನಂದ ಸರಸ್ವತಿ ಅವರು ಕನ್ನಡದಲ್ಲಿ ಅನುವಾದ ಮಾಡಿದ ‘ಭಗವದ್ಗೀತೆ ಗೃಹ ಅಧ್ಯಯನ’ 4 ಮತ್ತು 5ನೇ ಸಂಪುಟ ಲೋಕಾರ್ಪಣೆ. ಶೈವ ಸಿದ್ಧಾಂತ ತಜ್ಞ ಡಾ. ಟಿ. ಎನ್. ರಾಮಚಂದ್ರನ್, ಇತಿಹಾಸ ತಜ್ಞ ಡಾ. ಸಿ.ಐ. ಐಸಾಕ್, ಎಸ್. ರಾಮಚಂದ್ರನ್, ಎ. ಕೃಷ್ಣಮಾಚಾರಿ ಮತ್ತು ಪನವೆಲಿಲ್ ನಿನನ್ ಬೆಂಜಮಿನ್ ಅವರಿಂದ ಭಾಷಣ. ಸಂಜೆ 7ಕ್ಕೆ ದಯಾನಂದ ಸರಸ್ವತಿ ಅವರಿಂದ ‘ಲಿವಿಂಗ್ ದ ಲರ್ನಿಂಗ್’ ಉಪನ್ಯಾಸ. ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು. ಮಾಹಿತಿಗೆ: 97385 49010.


ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT