ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ಉತ್ಪಾದನೆ: ಕುಸಿದ ನಾಟಿ ಕೋಳಿ ಬೆಲೆ

Last Updated 20 ಸೆಪ್ಟೆಂಬರ್ 2011, 8:50 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಈಗ ನಾಟಿ ಕೋಳಿ ಬೆಲೆಯಲ್ಲಿ ಗಣನೀಯ ಕುಸಿತ ಉಂಟಾಗಿದೆ. ಇದು ನಾಟಿ ಕೋಳಿ ಸಾಕಾಣಿಕೆ ಮಾಡುವ ಗ್ರಾಮೀಣ ರೈತರ ಅತೃಪ್ತಿಗೆ ಕಾರಣವಾಗಿದೆ. 

ಈ ಹಿಂದೆ ನಾಟಿ ಕೋಳಿಗೆ ಭಾರಿ ಬೇಡಿಕೆ ಇತ್ತು. ಒಂದು ಕೆ.ಜಿ ಕೋಳಿ ರೂ.180 ರಿಂದ 190 ರವರೆಗೆ ಮಾರಾಟವಾಗುತ್ತಿತ್ತು.

ತಾಲ್ಲೂಕಿನಲ್ಲಿ ಪಂದ್ಯಕ್ಕೆಂದು ಹುಂಜಗಳನ್ನು ವಿಶೇಷವಾಗಿ ಸಾಕಲಾಗುತ್ತಿತ್ತು. ಅವುಗಳನ್ನು ಒಂದು ಸಾವಿರದಿಂದ 4-5 ಸಾವಿರ ರೂ.ವರೆಗೆ ಮಾರಲಾಗುತ್ತಿತ್ತು.  ಕೋಳಿ ಪಂದ್ಯ ನಿಷೇಧದ ಹಿನ್ನೆಲೆಯಲ್ಲಿ ಹುಂಜಗಳ ವಿಶೇಷ ಸಾಕಾಣಿಕೆ ನಿಂತಿದೆ. ಈಗ ಮಾಂಸಕ್ಕಾಗಿ ಮಾತ್ರ ಸಾಕಾಣಿಕೆ ಸಾಗಿದೆ. ಇದೂ ಸಹ ಮಾರುಕಟ್ಟೆಯಲ್ಲಿ ಕೋಳಿಗಳ ಸಂಖ್ಯೆ ಹೆಚ್ಚಲು ಕಾರಣ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ.

`ಈಗ ನಾಟಿ ಕೋಳಿ ಕೆಜಿಗೆ 110 ರಿಂದ 120 ರವರೆಗೆ ಖರೀದಿ ಸಲ್ಪಡುತ್ತಿದೆ. ಇದರಿಂದ ನಾಟಿ ಕೋಳಿ ಸಾಕಿರುವ ರೈತರಿಗೆ ನಷ್ಟ ಉಂಟಾ ಗುತ್ತಿದೆ~ ಎಂದು ನಂಬಿಹಳ್ಳಿ ಗ್ರಾಮದ ರೈತ ಜಿ.ಶಿವಾನಂದರೆಡ್ಡಿ  ತಿಳಿಸಿದರು.

ಬ್ರಾಯ್ಲರ್ ಕೋಳಿ ವ್ಯಾಪಾರ ಹೆಚ್ಚಳದಲ್ಲಿ  ನಾಟಿ ಕೋಳಿ ಸಾಕಾಣಿಕೆಗೆ ಹಿನ್ನಡೆ ಉಂಟಾಗಿತ್ತು. ಆದರೆ ರುಚಿ ಮತ್ತಿತರ ಕಾರಣಗಳಿಗಾಗಿ ನಾಟಿ ಕೋಳಿ ಸೇವನೆ ಹೆಚ್ಚಿದಾಗ ಅದರ ಬೆಲೆ ಗಗನಕ್ಕೇರಿದೆ. ಹಳ್ಳಿಗಳಲ್ಲಿ ಮನೆಗೆ ಕನಿಷ್ಠ ಹತ್ತಿಪ್ಪತ್ತು ಕೋಳಿಗಳನ್ನಾದರೂ ಹೊಂದುವ ಮನೋಭಾವ ಬೆಳೆಯಿತು. ಇದರಿಂದ ನಾಟಿ ಕೋಳಿ ಸಂಖ್ಯೆ ಬೆಳೆಯಲು ಕಾರಣವಾಯಿತು.

`ನಾಟಿ ಕೋಳಿಯನ್ನು ಸಂತೆ, ರಸ್ತೆ, ಮಾಂಸದ ಅಂಗಡಿಗಳ ಪಕ್ಕದಲ್ಲಿ ಇಟ್ಟು ಮಾರಬೇಕು. ಮಾರುಕಟ್ಟೆಗೆ ಅಧಿಕ ಸಂಖ್ಯೆ ಕೋಳಿ ಬರುತ್ತಿರುವುದರಿಂದ ಸಹಜವಾಗಿಯೇ ಬೆಲೆ ಕಡಿಮೆಯಾಗಿದೆ ಎಂದು ಕೋಳಿ ವ್ಯಾಪಾರಿ ಸಮೀವುಲ್ಲಾ ತಿಳಿಸಿದರು.

ಇದರ ನಡುವೆ ಬ್ರಾಯ್ಲರ್ ಕೋಳಿ ಮಾಂಸದ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಕೆಜಿಯೊಂದಕ್ಕೆ ರೂ.120 ರಂತೆ ಮಾರಾಟವಾಗುತ್ತಿದೆ. ನಾಟಿ ಕೋಳಿ ಬೆಲೆಯಲ್ಲಿನ ಇಳಿಕೆ ನಾಟಿ ಕೋಳಿ ಸಾಕಾಣಿಕೆ ಮೇಲೆ ದುಷ್ಪರಿಣಾಮ ಬೀರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT