ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಯಾವತ್ತೂ ಶಾಶ್ವತವಲ್ಲ

ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ
Last Updated 4 ಡಿಸೆಂಬರ್ 2013, 9:30 IST
ಅಕ್ಷರ ಗಾತ್ರ

ಮಾಗಡಿ: ‘ಯಾವ ಅಧಿಕಾರವೂ ಶಾಶ್ವ ತವಲ್ಲ. ಪರರಿಗೆ ಮಾಡಿದ ಒಳಿತು ಮಾತ್ರವೇ ಕೊನೆಯವರೆಗೂ ನೆನಪಿನಲ್ಲಿ ಉಳಿಯಲು ಸಾಧ್ಯ’ ಎಂದು ಆದಿ ಚುಂಚನಗಿರಿ ಮಠಾಧೀಶರಾದ ನಿರ್ಮ ಲಾನಂದನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ತಾಲ್ಲೂಕಿನ ಕಂಚುಗಲ್ ಬಂಡೇಮಠ ದಲ್ಲಿ ನಡೆದ ಕಾರ್ತಿಕ ದೀಪೋತ್ಸವ ಹಾಗೂ ಧಾರ್ಮಿಕ ಚಿಂತನಾ ಸಮಾ ವೇಶದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು.

‘ವಿಜ್ಞಾನ ಮತ್ತು ವೈಚಾರಿಕಾ ಚಿಂತನೆಗಳನ್ನು ಪ್ರತಿಯೊಬ್ಬರು ತಿಳಿದು ಕೊಳ್ಳುವುದು ಅವಶ್ಯ’ ಎಂದು ಅವರು ತಿಳಿಸಿದರು.

ಸಿದ್ದಗಂಗೆಯ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ‘ಬದುಕನ್ನು ರೂಪಿಸಲು ಉತ್ತಮ ಚಿಂತನೆಗಳ ಅಗತ್ಯವಿದೆ. ಧಾರ್ಮಿಕ ಚಿಂತನೆಗಳಿಂದ ಮಾತ್ರವೇ ಪವಿತ್ರ ಬದುಕು ಸಾಧ್ಯ’ ಎಂದು ಹೇಳಿದರು.

ಶಿವಗಂಗೆಯ ಮೇಲಣ ಗವಿ ಮಠಾಧೀಶ  ಮಲಯ ಶಾಂತಮುನಿ ಶಿವಾ ಚಾರ್ಯರು ಮಾತನಾಡಿದರು.


ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿ, ಗುಮ್ಮಸಂದ್ರ ಮಠದ ಚಂದ್ರ ಶೇಖರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಸಂಸದ ಬಸವರಾಜು, ಶಾಸಕ ದಯಾ ನಂದರೆಡ್ಡಿ, ಕಲ್ಯಾಣ ಬಸವರಾಜು ಮಾತನಾಡಿದರು.

ಡಿಸಿಪಿ ಆರ್.ರಮೇಶ್, ಶಿವನಂ ಜಯ್ಯ, ಕೆ.ವಿ.ನಂಜಪ್ಪ ಮತ್ತು ನಾಗ ರಾಜು ದಂಪತಿಗಳನ್ನು ಸನ್ಮಾನಿಸ ಲಾಯಿತು. ಕಮಲಾ ಶಿವಕುಮಾರ್ ತಂಡದಿಂದ ನೃತ್ಯಗಾಯನ ಹಾಗೂ ಸದಾನಂದ ತಂಡ ದವರಿಂದ ವಚನ ಗಾಯನ ಏರ್ಪಡಿಸ ಲಾಗಿತ್ತು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವರುದ್ರಯ್ಯ, ತಟ್ಟೇಕೆರೆ ಶರ್ಮ, ಪಟೇಲ್ ಗಂಗರೇವಣ್ಣ, ಕೆಂಪಣ್ಣ, ವಕೀಲರಾದ ಕೆ.ಎಸ್.ಪ್ರಕಾಶ್, ಶಿವ ಪ್ರಸಾದ್, ಮುದ್ದುವೀರಪ್ಪ, ಹೇಮಲತಾ ಲೋಕೇಶ್, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಪ್ರಭು ದೇವರು ಹಾಗೂ ಹರಗುರು ಚರಮೂರ್ತಿಗಳು ಮತ್ತು ವೀರಶೈವ ಸಮಾಜದ ಹಿರಿಯರು, ಮಹಿಳೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT