ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ;ಆರೋಪ

Last Updated 12 ಸೆಪ್ಟೆಂಬರ್ 2011, 9:40 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಗ್ರಾಮಸ್ಥರ ಸಮಸ್ಯೆ ಬಗೆ ಹರಿಸಲು ಗ್ರಾಮ ಸಭೆಗಳನ್ನು ನಡೆಸ ಲಾಗುತ್ತಿದ್ದು, ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಸಭೆಯು ಅರ್ಥ ಕಳೆದುಕೊಳ್ಳುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಈಚೆಗೆ ನಡೆದ ವಿಶೇಷ ಗ್ರಾಮ  ಸಭೆ ಯಲ್ಲಿ ಚರ್ಚಿಸಬೇಕಾದ ಹಲವು ವಿಷಯಗಳು ಬಾಕಿ ಉಳಿದಿದ್ದು, ಅಧಿಕಾರಿಗಳು ಗೈರು ಹಾಜರಾಗುವ ಸಭೆ ರದ್ದುಗೊಳಿಸಬೇಕು ಎಂದು  ಕಾಂಗ್ರೆಸ್ ಮುಖಂಡ ಮಿತ್ತನಹಳ್ಳಿ ಹರೀಶ್ ಒತ್ತಾಯಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಕಾರ್ಯದರ್ಶಿ ಆರ್.ರಾಮಚಂದ್ರ ಮಾತನಾಡಿ, ` ಇಲ್ಲಿನ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಚರಂಡಿ ಗಳನ್ನು ಸ್ವಚ್ಛಗೊಳಿಸಿಲ್ಲ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿವೆ. ಇದೇ ರೀತಿ ಕುಡಿ ಯುವ ನೀರಿನ ಸಂಗ್ರಹಗಾರ ಶುಚಿ ಗೊಳಿಸಿಲ್ಲ ಎಂದು ತಿಳಿಸಿದರು.

ಸರ್ಕಾರದಿಂದ ಶಿಶುವಿಗೆ ಹಾಗೂ ಗರ್ಭೀಣಿಯರಿಗೆ ನೀಡುವ ಆಹಾರ ಪೌಷ್ಟಿಕಾಂಶಯುಕ್ತವಾಗಿರುವುದಿಲ್ಲ ಎಂದಾಗ , ಪಂಚಾಯಿತಿ ಕಾರ್ಯ ದರ್ಶಿ ನಂಜೇಗೌಡ ಅದರ ಬಗ್ಗೆ ಪರಿ ಶೀಲಿಸಿ  ಸೂಕ್ತ ಕ್ರಮಕ್ಕೆ ಕೈಗೊಳ್ಳುವು ದಾಗಿ ತಿಳಿಸಿದರು.

 ಪಂಚಾಯಿತಿ ನೋಡಲ್ ಅಧಿಕಾರಿ ರಾಘವೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಮಂಜು ನಾಥ್, ಮಾಜಿ ಅಧ್ಯಕ್ಷ ಡಿ.ನಾರಾಯಣಸ್ವಾಮಿ, ಎನ್.ಪರಮೇಶ್,  ಪಂಚಾಯಿತಿ ಸದಸ್ಯರಾದ ಆರ್.ರಾಮಕೃಷ್ಣಗೌಡ,   ಎನ್.ಕೃಷ್ಣಪ್ಪ, ಶ್ರೀಧರ್, ಮಾರಪ್ಪ,  ಗ್ರಾಮಸ್ಥರಾದ ವಿ.ಎನ್.ಅಶ್ವತ್ಥನಾರಾಯಣಪ್ಪ, ಎಂ.ಆರ್.ನಾಗರಾಜ್, ಬಳುವನಹಳ್ಳಿ ಶಿವಣ್ಣ, ಪಂಚಾಯಿತಿ ಕಾರ್ಯದರ್ಶಿ ಮರಿನಂಜೇಗೌಡ, ಸುಗಟೂರು ದೇವರಾಜ್, ವಿ.ಎನ್.ಸುದೇಶ್  ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT