ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಭರವಸೆ: ಧರಣಿ ವಾಪಸ್

Last Updated 1 ಜುಲೈ 2012, 7:50 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ವಡಗೆರೆ ಗ್ರಾಮದಲ್ಲಿ ಪಟ್ಟಣ ಪಂಚಾಯಿತಿ ವತಿ ಯಿಂದ ನಿರ್ಮಾಣವಾಗುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸದಿರುವಂತೆ ಒತ್ತಾಯಿಸಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟ ಧರಣಿಯನ್ನು ಶನಿವಾರ ವಡಗೆರೆ ಗ್ರಾಮಸ್ಥರೊಂದಿಗೆ ಜಿಲ್ಲಾ ಧಿಕಾರಿ ಕೆ. ಸುಂದರ್ ಮಾತುಕತೆ ನಡೆಸಿದ ಬಳಿಕ ವಾಪಸ್ಸು ಪಡೆಯಲಾಯಿತು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ 2 ಗಂಟೆ ಗೂ ಹೆಚ್ಚು ಸಮಯ ಚರ್ಚೆ ನಡೆಯಿತು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ ಗಳು ತ್ಯಾಜ್ಯ ವಿಲೇವಾರಿ ಘಟಕದ ಸ್ಥಾಪನೆಯಿಂದ ಯಾವುದೇ ತೊಂದರೆ ಯಾಗುವುದಿಲ್ಲ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು. ನಂತರ 6 ಹಕ್ಕೋತ್ತಾಯಗಳನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಮುಂದಿಟ್ಟರು.

ಸರ್ವೇ ನಂ. 67 ರಲ್ಲಿ  ಉಳಿದ ಭೂಮಿಯನ್ನು ಅರಣ್ಯ ಉತ್ಪನ್ನಗಳನ್ನು ಬೆಳೆಯಲು ಅನುಕೂಲವಾಗುವಂತೆ ಗ್ರಾಮಸ್ಥರಿಗೆ ಮಂಜೂರು ಮಾಡಿ ಕೊಡಬೇಕು. ವಡಗೆರೆ ಗ್ರಾಮವನ್ನು ಜಿಲ್ಲಾಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಯವರ ನೇತೃತ್ವದಲ್ಲಿ ದತ್ತು ಪಡೆದು ಅಭಿವೃದ್ಧಿ ಪಡಿಸಬೇಕು, ಘನತ್ಯಾಜ್ಯ ಘಟಕದಿಂದ ಯಾವುದೇ ಮಾಲಿನ್ಯ ಹಾಗೂ ಪರಿಸರ ಹಾನಿ ಜೀವನಷ್ಟ ಅನುಭವಿಸಿದ್ದಲ್ಲಿ ಅದನ್ನು ಸರ್ಕಾರದಿಂದ   ತುಂಬಿ ಕೊಡಬೇಕು. ಇಲ್ಲಿ ಉತ್ಪಾದನೆಯಾಗುವ ಬಯೋ ಗ್ಯಾಸ್ ಅನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಸರಬರಾಜು ಮಾಡಬೇಕು. ಪ್ರತಿ ಕುಟುಂಬಕ್ಕೆ 1 ಕೋಟಿ ರೂಪಾಯಿವಿಮೆ ಮಾಡಿಸಬೇಕು ಹಾಗೂ ಸರ್ಕಾರಿ ಹುದ್ದೆಯನ್ನು ನೀಡಬೇಕು ಎಂಬ 6 ಬೇಡಿಕೆಗಳನ್ನು ಗ್ರಾಮಸ್ಥರು ಮುಂದಿಟ್ಟರು. ಇದನ್ನು ಅಧಿಕಾರಿಗಳು ಲಿಖಿತ ರೂಪದಲ್ಲಿ ನೀಡಿದ ನಂತರ ಕಾಮಗಾರಿ ಆರಂಭಿಸ ಬಹುದೆಂದು ಗ್ರಾಮಸ್ಥರು ತಿಳಿಸಿದರು.

ಈ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ ನಂತರ ಸಭೆ ಮುಕ್ತಾಯವಾಯಿತು.

ಉಪವಿಭಾಗಾಧಿಕಾರಿ ಬಸವರಾಜು, ಡಿವೈಎಸ್‌ಪಿ ಮಹಾದೇವಯ್ಯ, ತಹ ಶೀಲ್ದಾರ್ ಶಿವನಾಗಯ್ಯ, ಮುಖ್ಯಾಧಿ ಕಾರಿ ವಿಜಯ, ಸರ್ಕಲ್ ಇನ್ಸ್‌ಪೆಕ್ಟರ್ ಕೀರ್ತಿಕುಮಾರ್, ಸಬ್‌ಇನ್ಸ್‌ಪೆಕ್ಟರ್ ಮಹಾದೇವನಾಯಕ, ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟಾಚಲ, ಗೌಡಹಳ್ಳಿ ಗ್ರಾಮ ಪಂಚಾಯಿತಿ  ಅದ್ಯಕ್ಷ ಶೇಖರ್, ಸದಸ್ಯ ಮಹಾದೇವಯ್ಯ, ಡಿಎಸ್‌ಎಸ್‌ನ ಸಿ. ರಾಜಣ್ಣ, ಒಡನಾಡಿ ಡಾ. ಮಹಾದೇವ್, ರೈತ ಸಂಘದ ಹೊನ್ನೂರು ಪ್ರಕಾಶ್, ಪ್ರಜಾ ವಿಮೋಚನಾ ಚಳುವಳಿಯ ದುಗ್ಗಹಟ್ಟಿ ಮಾದೇಶ್, ಚಕ್ರವರ್ತಿ, ಕೆ. ಸೋಮ ಶೇಖರ್, ಗಂಗವಾಡಿ ಸೋಮಣ್ಣ, ಕಂದಹಳ್ಳಿನಾರಾಯಣ, ಸೋಮ, ಕೃಷ್ಣಪ್ಪ, ರಂಗಸ್ವಾಮಿ, ಯರಗಂಬಳ್ಳಿ ಸಿ. ರಾಜಣ್ಣಕೃಷ್ಣ, ಚಿಕ್ಕೀರಯ್ಯ, ಆರ್. ನಾಗರಾಜು ಮಹಿಳಾ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT