ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳನ್ನು ಕೂಡಿಹಾಕಿ ಪ್ರತಿಭಟಿಸಿದ ಫುಟ್‌ಬಾಲ್ ಪ್ರೇಮಿಗಳು!

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಈಸ್ಟ್ ಬೆಂಗಾಲ್ ತಂಡವು ಸತತ ಎರಡನೇ ಪಂದ್ಯದಲ್ಲಿ ಸೋಲನುಭವಿಸಿದ್ದರ ಬಿಸಿಯು ಈ ಫುಲ್‌ಬಾಲ್ ಕ್ಲಬ್‌ನ ಅಧಿಕಾರಿಗಳಿಗೆ ತಟ್ಟಿತು. ಕೋಪಗೊಂಡ ಈಸ್ಟ್ ಬೆಂಗಾಲ್ ತಂಡದ ಅಭಿಮಾನಿಗಳು ಕ್ಲಬ್ ಅಧಿಕಾರಿಗಳನ್ನು ಸುಮಾರು ಅರ್ಧ ತಾಸು ಕೋಣೆಯಲ್ಲಿ ಕೂಡಿಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಸ್ಥಳೀಯ ಲೀಗ್‌ನ ಮೊದಲ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡವು 0-2ರಲ್ಲಿ ಮೋಹನ್ ಬಾಗನ್ ವಿರುದ್ಧ ಸೋಲನುಭವಿಸಿತ್ತು. ಆದರೆ ಆ ನಿರಾಸೆಯನ್ನು ಬೆಂಬಲಿಗರು ಹೇಗೋ ಸಹಿಸಿಕೊಂಡಿದ್ದರು. ಆದರೆ 1-4 ಗೋಲುಗಳಿಂದ ದುರ್ಬಲ ಆರ‌್ಯನ್ ಕ್ಲಬ್ ಎದುರು ಪರಾಭವಗೊಂಡಿದ್ದು ಭಾರಿ ಬೇಸರಕ್ಕೆ ಕಾರಣವಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT