ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗೆ ಜೈಲು

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ತೆರಿಗೆ ಮರುಪಾವತಿ ವಿಚಾರ‌್ನ ಇತ್ಯರ್ಥಗೊಳಿಸುವುದಕ್ಕೆ ಒಂದು ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ  ಬಂಧನಕ್ಕೊಳಗಾಗಿರುವ ಆದಾಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಕಮಿಷನರ್ ಎಚ್. ಎ ಸಿದ್ಧಿಕಿ ಅವರಿಗೆ ಸಿಬಿಐನ ವಿಶೇಷ ನ್ಯಾಯಾಲಯ ನಾಲ್ಕು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ವಿಶೇಷ ಸಿಬಿಐ ನ್ಯಾಯಾಧೀಶ ತಲವಂತ ಸಿಂಗ್ ಅವರು ಎಚ್.ಎ ಸಿದ್ದಿಕಿ ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ಜೊತೆಗೆ ರೂ 4 ಲಕ್ಷ ದಂಡವನ್ನೂ ವಿಧಿಸಿದರು.

ಲೆಕ್ಕಪರಿಶೋಧಕ ಎಂ.ಎಂ ಸಚ್‌ದೇವ ಅವರು 2003ರಲ್ಲಿ ಸಿದ್ದಿಕಿ ವಿರುದ್ಧ ದೂರು ದಾಖಲಿಸಿದ್ದರು. `ದೂರುದಾರರಾಗಿರುವ ಸಚ್‌ದೇವ ಮೂಲಕ ಸಿದ್ದಿಕಿ ಅವರು ಆರ್.ಪಿ ಕತ್ಯಾಲ್ ಎಂಬುವವರಿಂದ ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನ್ನು ಸಿಬಿಐಯು ಸಾಬೀತು ಪಡಿಸಿದೆ~ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT