ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಯನಶೀಲರಾಗಲು ಶಿಕ್ಷಕರಿಗೆ ಸಲಹೆ

Last Updated 7 ಅಕ್ಟೋಬರ್ 2011, 10:05 IST
ಅಕ್ಷರ ಗಾತ್ರ

ಬೆಳಗಾವಿ: ಶಿಕ್ಷಕರು ಸತತ ಅಧ್ಯಯನ ಶೀಲರಾದಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಕರು ಅಧ್ಯಯನಶೀಲರಾಗಬೇಕು ಎಂದು ಕಾಯಂ ಲೋಕ ಅದಾಲತ್ ಅಧ್ಯಕ್ಷ ಜಿನದತ್ತ ದೇಸಾಯಿ ಕರೆ ನೀಡಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಅಖಿಲ ಕರ್ನಾಟಕ ಪ್ರಾಥಮಿಕ ಶಿಕ್ಷಕ ಸಂಘದ ಜಿಲ್ಲಾ ಘಟಕದ ವತಿಯಿಂದ ನಡೆದ ವಿಶ್ವ ಶೈಕ್ಷಣಿಕ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಉಪನ್ಯಾಸ ಹಾಗೂ ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

`ಶಿಕ್ಷಕ ವೃತ್ತಿಗೆ ಘನತೆ, ಗೌರವ ಸಿಗುವಂತೆ ಕಾರ್ಯ ನಿರ್ವಹಿಸಬೇಕು. ಮಕ್ಕಳಿಗೆ ಅಕ್ಷರದ ಜೊತೆಗೆ ಮಕ್ಕಳಿಗೆ ನೈತಿಕತೆಯನ್ನು ಬೋಧಿಸಬೇಕು~ ಎಂದು ಅವರು ಹೇಳಿದರು.

ಕಾರಂಜಿಮಠದ ಗುರುಸಿದ್ಧ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಉಲ್ಲಾಸಬಾಪು ನಿಂಬಾಳಕರ ಅಧ್ಯಕ್ಷತೆ ವಹಿಸಿದ್ದರು. ಸಂಸದ ಸುರೇಶ ಅಂಗಡಿ, ರಾಜ್ಯ ಶಿಕ್ಷಕ ಸಂಘದ ಅಧ್ಯಕ್ಷ ಶಂಕರಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಂ.ಕೆ. ಹುರಕಡ್ಲಿ, ಬಸವರಾಜ ಸುಣಗಾರ ಪಾಲ್ಗೊಂಡಿದ್ದರು.

ಬಿ.ಎನ್. ಚಚಡಿ ಪ್ರಾರ್ಥಿಸಿದರು. ಪ್ರಶಾಂತ ಕದಮ್ ಸ್ವಾಗತಿಸಿದರು. ಕೆ.ಎ. ನಿರವಾಣಿ, ಎಸ್.ಆರ್. ಕುಂದರಗಿ ನಿರೂಪಿಸಿದರು. ಜಯಕುಮಾರ ಹೆಬಳಿ ವಂದಿಸಿದರು.

ಆರ್. ದ್ರಾಕ್ಷಾಯಣಿ, ಜಯಶ್ರೀ ಹನಮನಗಸಿ, ಕಾಂಚನ ಯಾದವ, ಮಹಾದೇವಿ ಮಾದರ, ಜಗದೀಶ ಪತ್ತಾರ, ಅನಿಲ ಭೋಸಲೆ, ಎಂ.ಎ. ಮಾಹುತ್, ವಂದನಾ ಪಾಟೀಲ, ಶೈಲಾ ಪತ್ತಾರ, ಟಿ.ವೈ. ಬ್ಯಾಕೂಡ, ಭಾರತಿ ಮಜಗಾಂವಕರ, ಡಿ.ಜಿ. ಬೇವಿನಕೊಪ್ಪಮಠ, ವೀಣಾ ಕಾಗಲೆ, ಎ.ಪಿ. ಪಾಟೀಲ ಹಾಗೂ ಮಧುಮತಿ ಮಲಶೆಟ್ಟಿ ಅವರಿಗೆ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT