ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಮೂರ್ತಿಗೆ ವೈಕಂ ಮಹಮ್ಮದ್ ಬಷೀರ್ ಪ್ರಶಸ್ತಿ

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ಕೋಯಿಕ್ಕೋಡ್: ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿಯವರನ್ನು 18ನೇ ಬಷೀರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಗಲ್ಫ್  ಮಲಯಾಳಿಗಳ ಸಾಂಸ್ಕೃತಿಕ ಸಂಘಟನೆ `ಪ್ರವಾಸಿ ದೋಹಾ~ ಸಂಸ್ಥೆ, ಪ್ರಸಿದ್ಧ  ಮಲಯಾಳಂನ ಲೇಖಕ ವೈಕಂ ಮಹಮ್ಮದ್ ಬಷೀರ್ ಅವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡುತ್ತಿದೆ.

ಪ್ರಶಸ್ತಿಯು ರೂ. 50 ಸಾವಿರ ನಗದು ಹಾಗೂ ಸ್ಮರಣ ಫಲಕ ಹಾಗೂ ಪುತ್ಥಳಿಯೊಂದನ್ನು ಒಳಗೊಂಡಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಎಂ.ಟಿ.ವಾಸುದೇವನ್ ನಾಯರ್, ಪ್ರವಾಸಿ ಟ್ರಸ್ಟ್‌ನ ಟ್ರಸ್ಟಿ ಬಾಬು ಮಾಥರ್ ಮತ್ತು ಎಂ.ಎ.ರಹಮಾನ್ ಅವರನ್ನೊಳ ಗೊಂಡ ತೀರ್ಪುಗಾರರ ಸಮಿತಿ ಅನಂತಮೂರ್ತಿಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಇಂಗ್ಲಿಷ್ ಭಾಷೆಯ ಶಿಕ್ಷಕರಾದರೂ ತಮ್ಮ ಮಾತೃಭಾಷೆ ಕನ್ನಡದಲ್ಲಿ ಸಾಹಿತ್ಯ ರಚಿಸಿರುವ, ವೈಕಂ ಅವರನ್ನು ಇತರ ದೇಶಗಳಲ್ಲಿ ಪರಿಚಯಿಸಿದ ಅನಂತಮೂರ್ತಿ ಪ್ರಶಸ್ತಿಗೆ ಅರ್ಹರು ಎಂದು ಆಯ್ಕೆ ಸಮಿತಿ ಹೇಳಿದೆ.

ಅನಂತಮೂರ್ತಿ ಸಂತಸ
ಶಿವಮೊಗ್ಗ ವರದಿ:
`ಈ ಪ್ರಶಸ್ತಿ ನಿಜಕ್ಕೂ ನನಗೆ ಗೌರವ ತಂದುಕೊಟ್ಟಿದೆ. ಬಷೀರ್ ಕೇರಳದ ಮಹತ್ವದ ಕಾದಂಬರಿಕಾರರು; ಅವರ ಹೆಸರಿನಲ್ಲಿ ಪ್ರಶಸ್ತಿ ಬಂದಿರುವುದು ಖುಷಿಯಾಗುತ್ತಿದೆ~ ಎಂದು ಡಾ.ಯು.ಆರ್. ಅನಂತಮೂರ್ತಿ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT