ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಕ್ಷರತೆ: ಬೌದ್ಧಿಕ ದಿವಾಳಿತನಕ್ಕೆ ಕಾರಣ

Last Updated 21 ಸೆಪ್ಟೆಂಬರ್ 2013, 10:03 IST
ಅಕ್ಷರ ಗಾತ್ರ

ಚನ್ನಪಟ್ಟಣ: ದೇಶದಲ್ಲಿ ಮಹಿಳೆ ಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದ್ದರಿಂದಲೇ ಇಂದು ದೇಶ ಬೌದ್ಧಿಕ ದಿವಾಳಿತನ ಎದುರಿಸುತ್ತಿದೆ ಎಂದು ಪಟ್ಟಣದ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಮಧುಸೂಧನಾ ಚಾರ್ಯಜೋಷಿ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಅಪ್ಪಗೆರೆಯ ಸೇಂಟ್ ಆನ್ಸ್ ಪ.ಪೂ. ಕಾಲೇಜಿನಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕಸಾಪ ವತಿಯಿಂದ ಬುಧವಾರ ಏರ್ಪಡಿಸಿದ್ದ ಎಂ.ಹೊನ್ನೇ ಗೌಡ ಹಾಗೂ ವೆಂಕಟಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗ ವಹಿಸಿ, ‘ಶೈಕ್ಷಣಿಕ ಸುಧಾರಣೆ ಹಾಗೂ ಮಹಿಳೆಯರಲ್ಲಿ ಮತ್ತು ಮಕ್ಕಳಲ್ಲಿ ಸಾಹಿತ್ಯಾಭಿರುಚಿ ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಇಡೀ ಪ್ರಪಂಚಕ್ಕೆ ಗುರುಕುಲ ಶಿಕ್ಷಣದ ಮಾರ್ಗ ತೋರಿಸಿಕೊಟ್ಟ ಭಾರತದಲ್ಲೆ ಬಹುಪಾಲು ಮಂದಿಗೆ ಶಿಕ್ಷಣ ದೊರೆತಿಲ್ಲ. ಇದರಿಂದ ದೇಶ ಸಂಪದ್ಭರಿತವಾಗಿದ್ದರೂ ಬೌದ್ಧಿಕ ದಿವಾ ಳಿತನ ಎದುರಿಸಿ ಹಿಂದುಳಿಯುವಂ ತಾಯಿತು.

ಇಂದು ಶಿಕ್ಷಣ ದೊರೆಯು ತ್ತಿದ್ದರೂ ಅದು ಕೇವಲ ಹೊಟ್ಟೆಪಾಡಿನ ಶಿಕ್ಷಣವಾಗಿದೆ. ಭವಿಷ್ಯದಲ್ಲಿ ಕೆಲಸ ಗಿಟ್ಟಿಸಿ ಹಣ ಸಂಪಾದಿಸುವ ದೃಷ್ಟಿ ಯಿಂದ ಪೋಷಕರು ತಮ್ಮ ಮಕ್ಕಳ ಇಷ್ಟಕ್ಕೆ ವಿರುದ್ಧವಾದ ಶಿಕ್ಷಣ ಕೊಡಿ ಸುತ್ತಿದ್ದಾರೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗಿದ್ದು, ಸಾಮಾನ್ಯ ಜ್ಞಾನ ವನ್ನು ಸಹ ಅರಿಯದಂ ತಾಗಿದ್ದಾರೆ. ಇಂದಿನ ಶಿಕ್ಷಣ ಸಂಕುಚಿ ತವಾಗಿದೆ ಎಂದು ಅವರು ತಿಳಿಸಿದರು.

ಇಂದು ಎಷ್ಟೇ ಗುರುಗಳಿದ್ದರೂ ಶಿಕ್ಷಣ ಮಾತ್ರ ಸೀಮಿತ ವಾಗಿಬಿಟ್ಟಿದೆ. ಇಂದಿನ ಶಿಕ್ಷಣದಲ್ಲಿ ರಾಷ್ಟ್ರ ಪ್ರೇಮ, ನೈತಿಕತೆ ಬೆಳೆಸುವ ಅಂಶ ಗಳು ಇಲ್ಲ. ವಿದ್ಯಾರ್ಥಿಗಳು ಕೇವಲ ಅಂಕ ಸಂಪಾದನೆಗಾಗಿ ಕಲಿಯು ವಂತಾಗಿದೆ. ವಿದ್ಯಾರ್ಥಿಗಳು ಓದನ್ನು ಹವ್ಯಾಸ ವಾಗಿಸಿ ಕೊಳ್ಳಬೇಕು. ಪುಸ್ತಕ ಗಳನ್ನು ಓದುವ ಪರಿಪಾಠ ಬೆಳೆಸಿಕೊಳ್ಳ ಬೇಕು. ಪುಸ್ತಕ ಕ್ಕಿಂತ ಉತ್ತಮ ಮಿತ್ರರಿರಲು ಸಾಧ್ಯವಿಲ್ಲ. ಪುಸ್ತಕಗಳು ಒಳ್ಳೆಯ ಮಾರ್ಗದರ್ಶನ ಹಾಗೂ ಜ್ಞಾನವನ್ನು ನೀಡುತ್ತವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT