ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಯಂತ್ರಿತ ರಕ್ತಸ್ರಾವವಾಗುತ್ತದೆಯೇ...!

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ರಕ್ತಸ್ರಾವದ ಅಸ್ವಸ್ಥತೆಗಳನ್ನು ನಿರ್ವಹಿಸುವುದು ಸುಲಭವಲ್ಲ. ರಕ್ತಸ್ರಾವಕ್ಕೆ ಸಂಬಂಧಿಸಿದ ಮಾನಸಿಕ ಸಂಕಟ  ರೋಗಿಗಳಿಗೆ ಒಂದು ನರಕಸದೃಶ ಅನುಭವವನ್ನು ನೀಡುತ್ತದೆ.
 
ಇಂತಹ ಪ್ರಕರಣಗಳು ಐಟಿಪಿ ಅಥವಾ `ಇಮ್ಯೂನ್  ಥ್ರೋಂಬೊಸೈಟೊಪಿನಿಕ್ ಪರ್ಪ್ಯುರ~ಕ್ಕೆ ಸಂಬಂಧಿಸಿದ್ದಾಗಿರಬಹುದು. ಇದರಲ್ಲಿ ರೋಗನಿರೋಧಕಗಳು ತನ್ನದೇ ಆದ ಪ್ಲೇಟ್‌ಲೆಟ್ (ಥ್ರೋಂಬೊಸೈಟ್)ಗಳ ಮೇಲೆ ದಾಳಿ ನಡೆಸುತ್ತವೆ.

ದೇಹದ ರೋಗ ನಿರೋಧಕ ವ್ಯವಸ್ಥೆಯು ಶರೀರದ ರಕ್ಷಣಾ ವ್ಯವಸ್ಥೆಯಂತಿದೆ. ಯಾವುದೇ ಬಾಹ್ಯ ಆಕ್ರಮಣಕ್ಕೆ ಶರೀರದ ಆರೋಗ್ಯ ಕುಸಿಯದಂತೆ ತಡೆಯುತ್ತದೆ. ಇದು ದೇಹದ ರಕ್ಷಣಾ ವ್ಯವಸ್ಥೆ.

ಗುಲ್ಮ (ಸ್ಪ್ಲೀನ್), ಥೈಮಸ್, ಮೂಳೆ ಮಜ್ಜೆ ಮತ್ತು ದುಗ್ಧರಸ ಗ್ರಂಥಿ (ಲಿಂಫ್ ನೋಡ್ಸ್)ಗಳು ದೇಹದ ಅಂಗಗಳ ನಿರೋಧಕ ವ್ಯವಸ್ಥೆಯನ್ನು ರೂಪಿಸುತ್ತವೆ. ದೇಹದ ಮೇಲೆ ಯಾವುದೇ ಸೂಕ್ಷ್ಮಜೀವಿಗಳ ದಾಳಿ ಸಂದರ್ಭದಲ್ಲಿ ಈ ಅಂಗಗಳು ಈ ಸೂಕ್ಷ್ಮಜೀವಿಗಳ ನಾಶಕ್ಕೆ ಸಹಾಯ ಮಾಡುತ್ತವೆ. ಆದರೆ ರೋಗನಿರೋಧಕ ವ್ಯವಸ್ಥೆಯೇ ಕುಸಿದರೆ ಈ ಅಂಗಾಂಶಗಳು ಹಾನಿಕಾರಕ ಅಂಶಗಳನ್ನು ಉತ್ಪಾದಿಸುತ್ತವೆ. ಅದು ಸ್ವತಃ ಶರೀರದ ಆರೋಗ್ಯದ ವಿರುದ್ಧವೇ ಕಾರ್ಯಾಚರಿಸುತ್ತದೆ.

ಇದು ಮಾನವ ದೇಹದ ಒಳಗೆ ನಡೆಯುವ ಒಂದು ಆತ್ಮಹತ್ಯೆಯ ಪ್ರವೃತ್ತಿ!
ದೇಹದ ಒಳಗೆ ರೋಗ ನಿರೋಧಕ ವ್ಯವಸ್ಥೆಯು ಅವಶ್ಯಕವಾದ ರಕ್ತ ಪ್ಲೇಟ್ಲೆಟ್‌ಗಳನ್ನು ನಾಶಪಡಿಸಿದಾಗ ಐಟಿಪಿ ಸಂಭವಿಸುತ್ತದೆ. ಇದು ರಕ್ತದಲ್ಲಿ ಸಾಮಾನ್ಯವಾಗಿ ಇರಬೇಕಾದ ಪ್ಲೇಟ್‌ಲೆಟ್‌ಗಳನ್ನು ನಾಶಪಡಿಸುತ್ತದೆ.

ಆಗ ವಿನಾಶ ಮತ್ತು ದುರ್ಬಲಗೊಂಡ ಪ್ಲೇಟ್‌ಲೆಟ್ ಉತ್ಪಾದನೆಯಾಗುತ್ತದೆ. ಪ್ಲೇಟ್‌ಲೆಟ್ ಸಂಖ್ಯೆ 30,000ಕ್ಕಿಂತ ಕಡಿಮೆಯಾದರೆ ತೀವ್ರ ರಕ್ತ ಸ್ರಾವವಾಗುತ್ತದೆ. ಹೀಗೆ ಪ್ಲೇಟ್‌ಲೆಟ್‌ಗಳು ಕಡಿಮೆಯಾಗುವುದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಥ್ರೋಮ್‌ಬೋಕ್ಟಿಪೇನಿಯಾ ಎನ್ನುತ್ತಾರೆ.

ಐಟಿಪಿ ವ್ಯಕ್ತಿಯ ರೋಗ ನಿರೋಧಕ ವ್ಯವಸ್ಥೆಯ ವಿರುದ್ಧ ನೇರವಾಗಿ ಪರಿಣಾಮ ಬೀರುತ್ತದೆ. ಐಟಿಪಿಯಲ್ಲಿ ರೋಗನಿರೋಧಕ ವ್ಯವಸ್ಥೆಯು ಪ್ಲೇಟ್‌ಲೆಟ್‌ಗಳ ವಿರುದ್ಧವೇ ಹಾನಿಕಾರಕ ಅಂಶಗಳನ್ನು ಉತ್ಪಾದಿಸುತ್ತದೆ. ಪ್ಲೇಟ್‌ಲೆಟ್ ವಿರೋಧಿ ಆ್ಯಂಟಿಬಾಡಿಗಳು ಕೂಡ ಪ್ಲೇಟ್‌ಲೆಟ್‌ಗಳ ವಿರುದ್ಧ ಕಾರ್ಯಾಚರಿಸುವ ಸಾಧ್ಯತೆ ಇದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಸ್ವರಕ್ಷಿತ ಪ್ರತಿಕ್ರಿಯೆ ಎಂದು ಕರೆಯಲಾಗುತ್ತದೆ.

ವಿರೋಧಿ ಪ್ಲೇಟ್‌ಲೆಟ್‌ಗಳು ರೋಗನಿರೋಧಕಗಳು ಸಹ ಏಕಕಾಲದಲ್ಲಿ ಪ್ಲೇಟ್‌ಲೆಟ್‌ಗಳ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತವೆ. ಪ್ಲೇಟ್‌ಲೆಟ್‌ಗಳ (ಮೂಳೆ ತಿರುಳು) ಉತ್ಪಾದನೆಯು ಥ್ರೋಂಬೊಪೊಯಟಿನ್ (ಟಿಪಿಒ) ಎಂಬ ಹಾರ್ಮೋನ್‌ನಿಂದ ನಿಯಂತ್ರಿಸಲ್ಪಡುತ್ತದೆ. ವಿರೋಧಿ ಪ್ಲೇಟ್‌ಲೆಟ್ ಉತ್ಪಾದನೆ ಮೇಲೆ ರೋಗನಿರೋಧಕಗಳು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಮೂಳೆ ಮಜ್ಜೆ ಜೀವಕೋಶಗಳ ನಿಗ್ರಹಕ್ಕೆ ಕಾರಣವಾಗುತ್ತದೆ.  ಒಟ್ಟಾರೆ ಪರಿಣಾಮವಾಗಿ ಪ್ಲೇಟ್ ಲೆಟ್ ಎಣಿಕೆ ಕುಸಿತವಾಗುತ್ತದೆ. ಇದು ರಕ್ತಸ್ರಾವಕ್ಕೆ ಕಾರಣವಾಗುತ್ತದೆ.

ದೈನಂದಿನ ಚಟುವಟಿಕೆಗೆ ಮಾರಕ
ದೀರ್ಘಕಾಲದ ಐಟಪಿ ತೀವ್ರ ಸಮಸ್ಯೆ ತರಬಹುದು. ರೋಗಿಗಳ ದೈನಂದಿನ ಚಟುವಟಿಕೆಗಳನ್ನು ಸೀಮಿತಗೊಳಿಸುವ ಸಾಧ್ಯತೆ ಇರುತ್ತದೆ. ರಕ್ತಸ್ರಾವದ  ಭಯ ರೋಗಿಗಳ ಮೇಲೆ ಪರಿಣಾಮ ಬೀರುತ್ತದೆ.  ಮೂಗು, ವಸಡುಗಳ್ಲ್ಲಲದೆ ವಿವಿಧ ರೀತಿಗಳಲ್ಲಿ ರಕ್ತಸ್ರಾವ ಉಂಟಾಗಬಹುದು.  ಐಟಿಪಿ ಯಿಂದ ಬಳಲುತ್ತಿರುವ ಮಹಿಳೆಯರು  ಭಾರಿ ಮುಟ್ಟಿನ ರಕ್ತಸ್ರಾವದಿಂದ ಬಳಲಬಹುದು.  ಮೆದುಳು ಅಥವಾ ಜೀರ್ಣಾಂಗವ್ಯೆಹದಲ್ಲಿ ಕೂಡ ಕೆಲವೊಮ್ಮೆ ರಕ್ತಸ್ರಾವ ಸಂಭವಿಸುತ್ತವೆ.

ಐಟಿಪಿಯು ಮಕ್ಕಳು ಮತ್ತು ವಯಸ್ಕರನ್ನು ಅಪಾರವಾಗಿ ಕಾಡಬಹುದು. ವಯಸ್ಕರಲ್ಲಿ ದೀರ್ಘಕಾಲದ ಸಮಸ್ಯೆಯಾಗಿ ಪರಿಣಮಿಸಬಹುದು. ಇದು  ಸಾಂಕ್ರಾಮಿಕ ರೋಗವಲ್ಲ. ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಈ ರೋಗದ ಲಕ್ಷಣಗಳು ಕೆಲವೊಮ್ಮೆ ವೈದ್ಯರಿಗೇ ಗೊಂದಲ ಮೂಡಿಸುತ್ತದೆ. ಎಚ್‌ಐವಿ, ಎಚ್‌ಸಿವಿ ಮುಂತಾದ ರೋಗಗಳಿದ್ದಾಗ ಅಂತಹ ಸಾಧ್ಯತೆ ಇರುತ್ತದೆ. ಐಟಿಪಿ 10,000ಕ್ಕೆ ಒಬ್ಬರಲ್ಲಿ ಅಥವಾ 1000ದಲ್ಲಿ ಒಬ್ಬರಿಗೆ ಬರಬಹುದು. ಆದರೆ ವಾಸ್ತವಿಕ ಸಂಖ್ಯೆ ಹೆಚ್ಚಿರಲೂಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT