ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಲ ಕೊಳವೆ ಬಾಂಗ್ಲಾ ಆಸಕ್ತಿ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ತುರ್ಕ್‌ಮೆನಿಸ್ತಾನ -ಆಫ್ಘಾನಿಸ್ತಾನ-ಪಾಕಿಸ್ತಾನ-ಭಾರತ (ಟಿಎಪಿಐ) ನಡುವಿನ ಬಹು ಶತಕೋಟಿ ಡಾಲರ್  ವೆಚ್ಚದ 1,680 ಕಿ.ಮೀ ಉದ್ದದ ಅನಿಲ ಕೊಳವೆ ಮಾರ್ಗ ಯೋಜನೆಗೆ ಬಾಂಗ್ಲಾದೇಶ ಕೈಜೋಡಿಸುವ ಆಸಕ್ತಿ ವ್ಯಕ್ತಪಡಿಸಿದೆ ಎಂದು ತುರ್ಕ್‌ಮೆನಿಸ್ತಾನದ ಹಂಗಾಮಿ ಸಚಿವ ಅಬ್ದುಲ್ಲಾ ಸೋಮವಾರ ಇಲ್ಲಿ ನಡೆದ `ಪೆಟ್ರೋಟೆಕ್-2012~ ಸಮ್ಮೇಳನದಲ್ಲಿ ಹೇಳಿದ್ದಾರೆ.

ಬಾಂಗ್ಲಾದೇಶದ ಮನವಿಯನ್ನು ನಾಲ್ಕೂ ದೇಶಗಳ ಸರ್ಕಾರಗಳು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿವೆ. ಬಾಂಗ್ಲಾದೇಶಕ್ಕೂ ಈ ಯೋಜನೆ ವಿಸ್ತರಿಸಬೇಕಾಗಿ ಬಂದರೆ ಕೊಳವೆ ಮಾರ್ಗದ ಉದ್ದ ಹೆಚ್ಚಲಿದೆ ಎಂದಿದ್ದಾರೆ.

ಈ ಕೊಳವೆ ಮಾರ್ಗ ನಿರ್ಮಾಣಕ್ಕೆ ಅಂತರರಾಷ್ಟ್ರೀಯ ಮಟ್ಟದ ಕಂಪೆನಿಗಳು   ಮುಂದೆ ಬಂದಿವೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಯೋಜನೆಗೆ ಭಾಗಶಃ ಬಂಡವಾಳ ಒದಗಿಸಲಿದ್ದು, 2018ರ ವೇಳೆಗೆ ಕಾಮಗಾರಿ ಕೊನೆಗೊಳ್ಳುವ ನಿರೀಕ್ಷೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT