ನವದೆಹಲಿ (ಪಿಟಿಐ): ತುರ್ಕ್ಮೇನಿಸ್ತಾನದಿಂದ ಉದ್ದೇಶಿತ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅನಿಲ ಪೂರೈಸುವಲ್ಲಿ ಏಕರೂಪದ ಸಾಗಾಣಿಕಾ ಶುಲ್ಕ ವಿಧಿಸಲು ಭಾರತ ಮತ್ತು ಪಾಕಿಸ್ತಾನ ಔಪಚಾರಿಕ ಸಮ್ಮತಿ ಸೂಚಿಸಿವೆ.
ಈ ಹಿನ್ನೆಲೆಯಲ್ಲಿ, ಭಾರತ ಪ್ರತಿದಿನ ಪಡೆಯಲಿರುವ ತನ್ನ ಪಾಲಿನ 38 ದಶಲಕ್ಷ ಕ್ಯುಬಿಕ್ ಮೀಟರ್ನಷ್ಟು ಅನಿಲಕ್ಕಾಗಿ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನಕ್ಕೆ ಸಾಗಾಣಿಕೆಯ ಶುಲ್ಕವನ್ನು ನೀಡಲಿದೆ.