ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಲ ಸೋರಿಕೆ: ತಪ್ಪಿದ ಭಾರಿ ಅನಾಹುತ

Last Updated 14 ಅಕ್ಟೋಬರ್ 2012, 4:40 IST
ಅಕ್ಷರ ಗಾತ್ರ

ಸೋಮವಾರಪೇಟೆ: ಅನಿಲ ಸೋರಿಕೆಯಿಂದ ಹೊತ್ತಿಕೊಂಡ ಬೆಂಕಿಗೆ ಓಮಿನಿ ಸುಟ್ಟು ಕರಕಲಾಗಿದ್ದು, ಪಕ್ಕದ ಮತ್ತೊಂದು ಕಾರು, ಮನೆಗೂ ಬೆಂಕಿ ವ್ಯಾಪಿಸಿದ ಘಟನೆ ಶನಿವಾರ ಬೆಳಿಗ್ಗೆ ನಗರದ ರೇಂಜರ್ ಬ್ಲಾಕ್‌ನಲ್ಲಿ ಸಂಭವಿಸಿದೆ.

ಇಲ್ಲಿನ ನಿವಾಸಿ ಕೆ.ಎ.ಆದಂ ಎಂಬುವವರ ಮನೆಯ ಆವರಣದಲ್ಲಿ ಮುನಿರ್ ಎಂಬವರು ಕಾರು ಬೆಂಕಿಗೆ ಆಹುತಿಯಾಗಿದೆ. ಕಾರನ್ನು ಚಾಲನೆ ಮಾಡುವಾಗ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಕಾರಿನ ಗಾಜುಗಳು ಸ್ಫೋಟಗೊಂಡಿವೆ. ಭಾರೀ ಶಬ್ದದಿಂದ ಬೆಚ್ಚಿಬಿದ್ದ ಬಡಾವಣೆ ಜನತೆ ಮನೆಯಿಂದ ಹೊರಬಂದಿದ್ದರು.

ಬೆಂಕಿಯ ಕೆನ್ನಾಲಿಗೆಗೆ ಇಡೀ ವಾಹನ ಉರಿಯುತ್ತಿದ್ದರೆ, ಹಲವು ಮಂದಿ ಯುವಕರು ಬಕೇಟ್ ಹಾಗೂ ಬಿಂದಿಗೆಗಳಲ್ಲಿ ನೀರು ಸುರಿಯುವ ಮೂಲಕ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಪಕ್ಕದಲ್ಲಿಯೇ ನಿಂತಿದ್ದ ಆದಂ ಅವರ ಕಾರು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ.

ಸ್ಫೋಟದಿಂದ ಆದಂ ಅವರ ಮನೆ ಕೂಡ ಜಖಂಗೊಂಡಿದ್ದು, ಕಿಟಕಿ  ಗಾಜುಗಳು ಪುಡಿಯಾಗಿವೆ. ಕಾರಿನ ಮಾಲಿಕ ಮುನೀರ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT