ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಶ್ಚಿತತೆಯಲ್ಲಿ ಪಾಕ್ ಸರ್ಕಾರ; ರಾಜೀನಾಮೆಗೆ ಮುಂದಾದ ಗಿಲಾನಿ

Last Updated 16 ಜನವರಿ 2012, 12:40 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಐಎಎನ್‌ಎಸ್/ಪಿಟಿಐ): ಇಲ್ಲಿನ ಸುಪ್ರೀಂಕೋರ್ಟ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೆ ಗಿಲಾನಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ರಾಷ್ಟ್ರೀಯ ವ್ಯಾಜ್ಯ ಇತ್ಯರ್ಥ ಸುಗ್ರಿವಾಜ್ಞೆಯನ್ನು ರದ್ದುಗೊಳಿಸಿ ಅಧ್ಯಕ್ಷ ಜರ್ದಾರಿ ಸೇರಿದಂತೆ ಇತರರ ಬಗೆಗೆ ಇರುವ ಹಳೆಯ ಭ್ರಷ್ಟಾಚಾರ ಪ್ರಕರಣಗಳನ್ನು ಮತ್ತೆ ತನಿಖೆಗೆ ಒಳಪಡಿಸಬೇಕೆಂದು ಸೂಚನೆ ನೀಡಿದ್ದರೂ ಅದನ್ನು ಪಾಲಿಸದ ಪ್ರಧಾನಿ ಬಗೆಗೆ ಕೆಂಡಮಂಡಲವಾಗಿರುವ ಸುಪ್ರೀಂಕೋರ್ಟ್ ಸೋಮವಾರ ಬೆಳಿಗ್ಗೆ ಗಿಲಾನಿ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಮಾಡಿತಲ್ಲದೆ ಜನವರಿ  19 ರೊಳಗೆ ತನ್ನ ಮುಂದೆ ಖುದ್ದು ಹಾಜರಾಗುವಂತೆ ಆಜ್ಞಾಪಿಸಿತು.

ಇದರಿಂದ ಭಾರಿ ಮುಖಭಂಗಕ್ಕೊಳಗಾದ ಗಿಲಾನಿ ಮಿತ್ರಪಕ್ಷಗಳ ಮುಖಂಡರೂ ಸೇರಿದಂತೆ ಅಧ್ಯಕ್ಷ ಜರ್ದಾರಿ ಅವರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಮಯದಲ್ಲಿ ಅವರು ದೇಶದ ಸಂಸತ್ತು ಹಾಗೂ ಪ್ರಜಾತಂತ್ರ ವ್ಯವಸ್ಥೆಯನ್ನು ಕಾಪಾಡುವುದಕ್ಕೋಸ್ಕರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಆದರೆ ಮಿತ್ರಪಕ್ಷಗಳ ನಾಯಕರು ಹಾಗೂ ಅಧ್ಯಕ್ಷ ಜರ್ದಾರಿ ಅವರು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಗಿಲಾನಿ ಅವರಿಗೆ ಸಲಹೆ ಮಾಡಿದರು ಎಂದು ವರದಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT