ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ನೀಡಿಕೆಯಲ್ಲಿ ತಾರತಮ್ಯ

Last Updated 10 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಹಾವೇರಿ: ನಂಜುಂಡಪ್ಪ ಅವರು ಹಿಂದುಳಿದ ತಾಲ್ಲೂಕುಗಳನ್ನು ಎ.ಬಿ.ಸಿ.ಡಿ. ಎಂದು ವರ್ಗೀಕರಣ ಮಾಡಿ, ಆ ವರ್ಗಗಳ ಮೇಲೆಯೇ ಅನುದಾನ ನೀಡುವಂತೆ ಸಲಹೆ ಮಾಡಿದ್ದರು. ಆದರೆ ಕಡಿಮೆ ಅನುದಾನ ನೀಡಬೇಕಾದ ತಾಲ್ಲೂಕುಗಳಿಗೆ ಹೆಚ್ಚು ನೀಡಿ, ಹೆಚ್ಚು ಅನುದಾನ ನೀಡಬೇಕಾದ ತಾಲ್ಲೂಕುಗಳಿಗೆ ಕಡಿಮೆ ನೀಡಲಾಗಿದೆ. ಹೀಗಾಗಿ ಈ ತಾಲ್ಲೂಕುಗಳಲ್ಲಿಯೇ ಅಸಮತೋಲನದ ಕೂಗು ಏಳಬಹುದಾಗಿದೆ ಎಂದು ಡಾ.ನಂಜುಂಡಪ್ಪ ವರದಿಯ ಅನುಷ್ಠಾನ ಸಮಿತಿ ಸದಸ್ಯ ಪ್ರೊ.ಅಬ್ದುಲ್ ಅಜೀಜ್ ಅಭಿಪ್ರಾಯಪಟ್ಟರು.

ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಧಾರವಾಡದ ಸೆಂಟರ್ ಫಾರ್ ಮಲ್ಟಿ ಡಿಸಿಪ್ಲಿನರಿ ಡೆವಲಪ್‌ಮೆಂಟ್(ಸಿಎಂಡಿಆರ್) ಸಂಸ್ಥೆ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ `ಪ್ರಾದೇಶಿಕ ಅಸಮತೋಲನ ಮತ್ತು ಕರ್ನಾಟಕದ ಅನುಭವಗಳು~ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

`ಪ್ರಾದೇಶಿಕ ಅಸಮತೋಲನ ನಿವಾರಣೆಯಲ್ಲಿ ಆಗಿರುವ ಏರುಪೇರಿನಿಂದಾಗಿ ಮುಂದೊಂದು ದಿನ ಡಾ.ನಂಜುಂಡಪ್ಪ ವರದಿಯಲ್ಲಿನ ಎಲ್ಲ 114 ತಾಲ್ಲೂಕುಗಳಲ್ಲಿ ಪ್ರಾದೇಶಿಕ ಅಸಮತೋಲನದ ಕೂಗು
ಎದ್ದರೆ ಆಶ್ಚರ್ಯಪಡಬೇಕಿಲ್ಲ~ಎಂದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಮಾತನಾಡಿ `ನಮ್ಮಲ್ಲಿರುವ ಮಾನಸಿಕ ಅಸಮತೋಲನ ನಿವಾರಿಸಿಕೊಂಡಾಗ ಮಾತ್ರ ಪ್ರಾದೇಶಿಕ ಅಸಮತೋಲನ ನಿವಾರಣೆ ಸಾಧ್ಯ~ ಎಂದು ಅಭಿಪ್ರಾಯಪಟ್ಟರು.

ನಂಜುಂಡಪ್ಪ ಅವರ ಆಶಯದಂತೆ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಪಥದತ್ತ ಸಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಾದೇಶಿಕ ಅಸಮತೋಲನ ಕೂಗು ಗೌಣವಾಗಿದೆ ಎಂದರು

ಸಮಿತಿಯ ಇನ್ನೊಬ್ಬ ಸದಸ್ಯ ಗೋಪಾಲ ಕಡೇಕುಡಿ, ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಸಿಎಂಡಿಆರ್ ನ ಯೋಜನಾ ನಿರ್ದೇಶಕಿ ನಯನತಾರಾ ಮಾತನಾಡಿದರು. ಜಿ.ಪಂ. ಸಿಇಓ ಉಮೇಶ ಕುಸಗಲ್ಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನಸಿಂಗ್ ರಾಠೋಡ್ ಹಾಜರಿದ್ದರು.

ಪ್ರಾಚಾರ್ಯ ಡಾ.ಬಿ.ಸಿ. ಬನ್ನೂರ ಸ್ವಾಗತಿಸಿದರು. ಪ್ರೊ.ಎನ್. ಕೆಂಚವೀರಪ್ಪ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT