ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿ ಪಡೆಯದೆ ಇಳಿದ ವಿಮಾನ: ಪೈಲಟ್‌ಗಳ ಅಮಾನತು

Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ವಾಯು ಸಂಚಾರ ನಿಯಂತ್ರಣ(ಎಟಿಸಿ) ಅನುಮತಿ ಪಡೆಯದೆ ಮುಂಬೈನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ವಿಮಾನವನ್ನು ಇಳಿಸಿದ್ದ ತಪ್ಪಿಗಾಗಿ ಇಬ್ಬರು ಪೈಲಟ್‌ಗಳನ್ನು ಏರ್ ಇಂಡಿಯಾ ಸಂಸ್ಥೆಯು ಅಮಾನತು ಮಾಡಿದೆ.

ಅಬುಧಾಬಿಯಿಂದ ಹೊರಟ ವಿಮಾನವು ವಾಯು ಸಂಚಾರ ನಿಯಂತ್ರಣ(ಎಟಿಸಿ) ಅನುಮತಿ ಪಡೆಯದೆ ಶುಕ್ರವಾರ ಬೆಳಿಗ್ಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಅಲ್ಲದೆ ಭೂಮಿಯಿಂದ 60 ನಾಟಿಕಲ್ ಮೈಲ್ ದೂರದಲ್ಲಿರುವಾಗಲೇ ವಿಮಾನದ ಸಂವಹನ ಕಂಪನಾಂಕವನ್ನು (ಫ್ರೀಕ್ವೆನ್ಸಿ) ಬದಲಿಸಿಕೊಂಡಿತ್ತು. ಇದು ವಿಮಾನಯಾನ ನಿಯಮದ ಉಲ್ಲಂಘನೆ ಎನ್ನುವ ಆರೋಪದ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ.

`ಏರ್ ಇಂಡಿಯಾ ವ್ಯವಸ್ಥಾಪನ ಮಂಡಳಿಯು ಪೈಲಟ್ ಮತ್ತು ಸಹ ಪೈಲಟ್ ಅನ್ನು ಅಮಾನತುಗೊಳಿಸಿದೆ. ಅವರಿಬ್ಬರು ದೋಷಮುಕ್ತರಾಗುವವರೆಗೆ ಮತ್ತೆ ವಿಮಾನ ಚಲಾಯಿಸುವಂತಿಲ್ಲ. ಪ್ರಕರಣದಲ್ಲಿ ಅವರು ತಪ್ಪಿತಸ್ಥರು ಎಂದು ತಿಳಿದು ಬಂದಲ್ಲಿ ಅವರ ಮೇಲೆ ಕ್ರಮ ಜರುಗಿಸಲಾಗುವುದು' ಎಂದು ಏರ್ ಇಂಡಿಯಾ  ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT