ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮಾನದ ಸುಳಿಯಲ್ಲಿ ಸಿಂಗ್, ಜೈರಾಂ

ರಿಲಯನ್ಸ್ ಪವರ್‌ಗೆ ಅನಗತ್ಯ ಲಾಭ: ಸಿಎಜಿ ವರದಿ ಬಹಿರಂಗ
Last Updated 6 ಸೆಪ್ಟೆಂಬರ್ 2013, 20:59 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯಪ್ರದೇಶದಲ್ಲಿನ ರಿಲ ಯನ್ಸ್ ಪವರ್ ಒಡೆತನದ ಎರಡು ವಿದ್ಯುತ್ ಯೋಜನೆಗಳಿಗೆ ಕೇಂದ್ರ ಪರಿಸರ ಸಚಿವಾಲಯ ಕಾನೂನು ಬಾಹಿರವಾಗಿ ಲಾಭ ಮಾಡಿಕೊಟ್ಟಿರುವ ವಿಷಯವನ್ನು ಮಹಾಲೇಖಪಾಲರ (ಸಿಎಜಿ) ವರದಿ ಪತ್ತೆ ಹಚ್ಚಿದೆ.

ಈ ಎರಡೂ ಯೋಜನೆಗಳಿಗೆ ಅಕ್ರಮವಾಗಿ ಅನುಮತಿ ನೀಡಿರುವ ವಿವಾದ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಜೈರಾಂ ರಮೇಶ್ ಅವರನ್ನುಸುತ್ತಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.

ಏ. 2009ರಲ್ಲಿ ಈ ಪ್ರಕ್ರಿಯೆ ಶುರುವಾದಾಗ ಸಿಂಗ್ ಅವರು ಪರಿಸರ ಖಾತೆಯನ್ನೂ ನೋಡಿಕೊಳ್ಳುತ್ತಿದ್ದರು. 4 ಸಾವಿರ ಮೆಗಾವಾಟ್ ಸಾಮರ್ಥ್ಯದ ಎರಡನೇ ಯೋಜನೆಗೆ ಅನುಮತಿ ನೀಡುವಾಗ ಜೈರಾಂ ರಮೇಶ್ ಅವರು ಈ ಖಾತೆಯ ಹೊಣೆ ಹೊತ್ತಿದ್ದರು ಎಂಬ ಅಂಶವನ್ನು ಸಿಎಜಿ ಬಯಲಿಗೆ ಎಳೆದಿದೆ.

ಮಧ್ಯಪ್ರದೇಶದಲ್ಲಿ ರಿಲಯನ್ಸ್ ಪಾವರ್ ಒಡೆತನಕ್ಕೆ ಸೇರಿದ ಸಸಾನ್ ಪವರ್ ಲಿಮಿಟೆಡ್‌ಗೆ (ಎಸ್‌ಪಿಎಲ್) 4 ಸಾವಿರ ಮೆಗಾ ವಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಯೋಜನೆಗೆ ಅಕ್ರಮವಾಗಿ ಭೂಮಿ ಸೇರಿದಂತೆ ಇನ್ನಿತರ ಅನುಕೂಲತೆಗಳನ್ನು ಪರಿಸರ ಸಚಿವಾಲಯದ ಕಲ್ಪಿಸಿಕೊಟ್ಟಿತ್ತು ಎಂದು ಸಿಎಜಿ ಹೇಳಿದೆ. ಎಸ್‌ಪಿಎಲ್‌ಗೆ ಅನುಕೂಲತೆ ಕಲ್ಪಿಸಿಕೊಡುವ ಉದ್ದೇಶದಿಂದ ಅರಣ್ಯ ಸಂರಕ್ಷಣಾ ಕಾನೂನು ಮತ್ತು ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT