ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನಪೂರ್ಣೇಶ್ವರಿ ದೇವಸ್ಥಾನದ 14ನೇ ವಾರ್ಷಿಕೋತ್ಸವ

Last Updated 25 ಜನವರಿ 2012, 6:05 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ದೇವರಾಜ ಅರಸು ಬಡಾವಣೆ `ಎ~ ಬ್ಲಾಕ್‌ನ ಅನ್ನಪೂರ್ಣೇಶ್ವರಿ ದೇವಸ್ಥಾನದ 14ನೇ ವಾರ್ಷಿಕೋತ್ಸವದ ಅಂಗವಾಗಿ ಜ. 26ರಿಂದ 30ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
26ರಂದು ಬೆಳಿಗ್ಗೆ 8ರಿಂದ ಪ್ರಾರ್ಥನೆ, ಗಂಗಾಪೂಜೆ, ಗಣಪತಿ ಪೂಜೆ, ದೇವನಾಂದಿ, ಮಂಟಪಪೂಜೆ, ರಕ್ಷಾಚಂದನ, ಕಳಸಸ್ಥಾಪನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಮಿತಿಯ ಅಧ್ಯಕ್ಷ ಆರ್.ಜಿ. ನಾಗೇಂದ್ರಪ್ರಸಾದ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

27ರಂದು ಬೆಳಿಗ್ಗೆ 8ರಿಂದ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ಕಳಸಸ್ಥಾಪನೆ, ಅನ್ನಪೂರ್ಣೇಶ್ವರಿ ಹೋಮ, ಪೂರ್ಣಾಹುತಿ, ಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಇರುತ್ತದೆ. 28ರಂದು ಬೆಳಿಗ್ಗೆ 8ರಿಂದ ಪಂಚಾಮೃತ ಅಭಿಷೇಕ, ಕಳಸಸ್ಥಾಪನೆ, ರುದ್ರಹೋಮ, ಮಹಾವಿಷ್ಣು ಹೋಮ, ದತ್ತಾತ್ರೇಯ ಹೋಮ, ಪೂರ್ಣಾಹುತಿ, ಪಲ್ಲಕ್ಕಿ ಉತ್ಸವ ಹಾಗೂ ಮಹಾಮಂಗಳಾರತಿ ನಡೆಯಲಿದೆ ಎಂದು ತಿಳಿಸಿದರು.

29ರಂದು ಬೆಳಿಗ್ಗೆ 8ಕ್ಕೆ ಪ್ರಾರ್ಥನೆ, ವಾಯುಸ್ತುತಿ ಪುನಶ್ಚರಣೆ,  ಪಂಚಾಮೃತ ಅಭಿಷೇಕ, ಕಳಸ ಸ್ಥಾಪನೆ, ಪವಮಾನ ಹೋಮ, ಸುಬ್ರಹ್ಮಣ್ಯ ಹೋಮ, ಪೂರ್ಣಾಹುತಿ, ಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಇರುತ್ತದೆ. 30ರಂದು ಕಡೆದಿನವಾಗಿದ್ದು, ಅಂದು ರಥೋತ್ಸವ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಆದ್ದರಿಂದ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಎಸ್.ಬಿ. ಹಲಗೇರಿ, ಕಾರ್ಯದರ್ಶಿ ವಿ.ವಿ.ವಿ. ಸತ್ಯನಾರಾಯಣ, ನಾಗಭೂಷಣ ಕಡೇಕೊಪ್ಪ, ಬಿ.ವಿ. ಶ್ರೀಧರಮೂರ್ತಿ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT