ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಾಯದ ವಿರುದ್ಧ ಹೋರಾಟ: ರಾಜೀವ್

Last Updated 16 ಸೆಪ್ಟೆಂಬರ್ 2013, 8:12 IST
ಅಕ್ಷರ ಗಾತ್ರ

 ಗದಗ: ಅನ್ಯಾಯದ ವಿರುದ್ಧ ಹೋರಾಟ ನಡೆಸಿ, ಈ ಮಣ್ಣಿನ ಋಣ ತೀರಿಸುವುದಾಗಿ ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್ ಹೇಳಿದರು.
ತಾಲ್ಲೂಕಿನ ಅಡವಿಸೋಮಾಪುರ ದೊಡ್ಡತಾಂಡೆಯಲ್ಲಿ ಈಚೆಗೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಲ್ಲಿಯ ಜನರು ನೀಡಿದ ಸಹಾಯ, ಸಹಕಾರ  ಮರೆಯುವುದಿಲ್ಲ. ರಾಜ್ಯದ ಗಡಿ ಭಾಗದ ಶಾಸಕನಾಗಿ ಸ್ವಾಭಿಮಾನಿ ಜನಾಂಗದ ಸಮಸ್ಯೆಗಳಿಗೆ ಸ್ಪಂದಿಸುವೆ.

ನನ್ನ ಊರು ಅಡವಿಸೋಮಾಪುರ ದೊಡ್ಡತಾಂಡೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಗ್ರಾಮ ರಾಜ್ಯಕ್ಕೆ ಮಾದರಿಯಾಗಬೇಕು. ಸಮಾಜದಲ್ಲಿ ಕೆಟ್ಟ ವ್ಯವಸ್ಥೆಯನ್ನು ಬದಲಾವಣೆ ಮಾಡುವಲ್ಲಿ ಯುವಕರ ಪಾತ್ರ ಮಹತ್ವವಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಲ್ಹಾದ ಹೊಸಳ್ಳಿ ಮಾತನಾಡಿ, ಸಮಸ್ತ ಬಂಜಾರ ಸಮಾಜ ಶಾಸಕರಿಗೆ ಬೆಂಬಲವಾಗಿ ನಿಲ್ಲಬೇಕು. ಅವರು ಈ ನಾಡಿನಲ್ಲಿ ಅದ್ಬುತ ಕೆಲಸವನ್ನು ಸಾಧಿಸಿದ್ದಾರೆ ಎಂದು ಹೇಳಿದರು. ಷಣ್ಮುಖಪ್ಪ ಕಾರಬಾರಿ, ಎ.ಟಿ. ಹಡಪದ, ಪೌರಾದೇವಿ ರಮೇಶ ಮಹಾರಾಜ ಮಾತನಾಡಿದರು.

ಶಾಸಕ ಪಿ. ರಾಜೀವ್ ಅವರಿಗೆ ತಾಂಡದ ನಿವಾಸಿಗಳು ಅದೂ್ದರಿ ಸಾ್ವಗತ ಕೋರಿದರು. ಆರತಿ ಎತ್ತಿ, ತಾಂಡಾದಲ್ಲಿ ಮೆರವಣಿಗೆ ನಡೆಸಿ ವೇದಿಕೆಗೆ ಕರೆತರಲಾಯಿತು. ಭೀಮಪ್ಪ ಲಮಾಣಿ, ಪಾಂಡಪ್ಪ ಲಮಾಣಿ, ಶಾಂತವ್ವ ಲಮಾಣಿ, ಗ್ರಾಮ ಪಂಚಾಯಿತಿ  ಅಧ್ಯಕ್ಷ ರಮೇಶ ಲಮಾಣಿ, ಸದಸ್ಯರಾದ ಪಕೀರಪ್ಪ ಜಡಿ, ಮಲ್ಲಪ್ಪ ಹೊಸಳ್ಳಿ, ಸೀತವ್ವ ರಾಠೋಡ, ರಮೇಶ ಲಮಾಣಿ, ಗೋಪಾಲ, ಶಿವಪ್ಪ ಲಮಾಣಿ ಹಾಗೂ ತಾಂಡಾದ ಗುರುಹಿರಿಯರು ವೇದಿಕೆಯಲ್ಲಿದ್ದರು. ಕುಮಾರ ನಾಯಕ ಸ್ವಾಗತಿಸಿದರು. ಷಣ್ಮುಖ ರಾಠೋಡ ನಿರೂಪಿಸಿದರು. ಸುಬಾಸ ಕಾರಬಾರಿ ವಂದಿಸಿದರು.

‘ನಾಮ ಸ್ಮರಣೆಯಿಂದ ಬದಲಾವಣೆ’
ಗದಗ: ಓಂಕಾರದಿಂದ ಭವಸಾಗರ ವನ್ನು ದಾಟಬಹುದು ಎಂದು ಬಳಗಾ ನೂರ ಚಿಕೇನಕೊಪ್ಪದ ಶಿವಶಾಂತವೀರ ಶರಣರು ಹೇಳಿದರು.
ಸ್ಥಳೀಯ ಈಶ್ವರ ಬಡಾವಣೆಯ ಈಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಶರಣ ಚರಿತಾಮೃ ತದ ಮುಕ್ತಾಯ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ದೇವನಾಮ ಸ್ಮರಣೆ ಮಾಡುವುದರಿಂದ ಜೀವನದಲ್ಲಿ ಅನೇಕ ಬದಲಾವಣೆ ಗಳನ್ನು ಕಾಣಬಹುದು ಎಂದು ಹೇಳಿ ದರು. ಈಶ್ವರ ದೇವಸ್ಥಾನಕ್ಕೆ ಶರಣು ರೂ. 25 ಸಾವಿರ ದೇಣಿಗೆ ನೀಡಿದರು.

ನಗರಸಭಾ ಸದಸ್ಯ ಎಲ್.ಡಿ. ಚಂದಾವರಿ ಮಾತನಾಡಿದರು. ಸಿ.ವಿ.ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ಸಂತೋಜಿ, ನಗರಸಭಾ ಸದಸ್ಯ ಬಿ.ಬಿ.ಅಸೂಟಿ, ಶಿವಲೀಲಾ ಅಕ್ಕಿ, ಹಾಜರಿದ್ದರು. ಮಾಸಾಂತ್ಯದವರಿಗೆ ಪ್ರವಚನ ನೀಡಿದ ಶಂಕ್ರಣ್ಣ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಕೆ.ಬಿ.ಕಂಬಳಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT