ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ತಡೆಗೆ ಸಹಕಾರ ಅಗತ್ಯ

Last Updated 9 ಜೂನ್ 2011, 7:00 IST
ಅಕ್ಷರ ಗಾತ್ರ

ಚಿಂತಾಮಣಿ: ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಹಾಗೂ ಅಪ ರಾಧ ಪತ್ತೆ ಮಾಡುವಲ್ಲಿ ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಇಲ್ಲಿನ ನೂತನ ಡಿವೈಎಸ್ಪಿ ನಾಣಯ್ಯ ಅಭಿಪ್ರಾಯ ಪಟ್ಟರು.

ವರ್ಗಾವಣೆಗೊಂಡ ಡಿವೈಎಸ್ಪಿ ಆನಂದ್ ಅವರಿಗೆ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊ ಡುಗೆ ಸಮಾರಂಭದಲ್ಲಿ ಮಾತ ನಾಡಿದರು. 

 ಸಾರ್ವಜನಿಕರು ಕಾನೂನು ಪಾಲಿಸಿದರೆ ಅಪರಾಧಗಳ ನಿಯಂ ತ್ರಣ ಸಾಧ್ಯವಿದೆ. ಅಕ್ರಮ ಚಟು ವಟಿಕೆ ಗಳಿಗೆ ಪೊಲೀಸ್ ಮಾಹಿತಿ ನೀಡು ವುದು ಅತ್ಯಗತ್ಯವಾಗಿದೆ ಎಂದರು.

ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಅಧಿಕಾರಿಗಳು ಸಾಮಾ ಜಿಕ ಚಿಂತನೆಗಳನ್ನು ಬೆಳೆಸಿಕೊಂಡಾಗ ಮಾತ್ರ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬಹುದು ಎಂದು ತಿಳಿಸಿದರು.

ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟಾಚಲಪತಿ ಮಾತನಾಡಿ,  ಆನಂದ್ ಅವರ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರ ಠಾಣೆಯ ಇನ್ಸ್‌ಪೆಕ್ಟರ್ ವೆಂಕಟಾಚಲಪತಿ, ದಲಿತ ಸಂಘರ್ಷ ಸಮಿತಿಯ ಕವಾಲಿ ವೆಂಕಟರವಣಪ್ಪ, ಸಬ್ ಇನ್ಸ್‌ಪೆಕ್ಟರ್ ಸತೀಶ್ ಮಾತ ನಾಡಿದರು.

ಚಿಂತಾಮಣಿ ಉಪವಲಯದ ಪೊಲೀಸ್ ಅಧಿಕಾರಿಗಳು, ಸಾರ್ವ ಜನಿಕ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT