ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಮದುವೆ ಮಾಡಿದ ಜನತೆ

Last Updated 1 ಜುಲೈ 2012, 10:15 IST
ಅಕ್ಷರ ಗಾತ್ರ

ಕೆರೂರ: ಎಲ್ಲರಂತೆಯೇ ಶಾಸ್ತ್ರೋಕ್ತ ವಾಗಿ ನಡೆದರೂ ಸಹ ಇದೊಂದು ವಿಶಿಷ್ಟ ರೀತಿಯ ಮದುವೆ. ವರನಿಗೆ ಮಾತ್ರ ಯಾವುದೇ ಖರ್ಚಿನ ಗೊಡವೆ ಇಲ್ಲ.

ಮದು ಮಗನ ಹೆಸರು ಬಸವರಾಜ ರೂಢಗಿ. ನಿರಕ್ಷರ ಕುಕ್ಷಿ. ವೃತ್ತಿ ಕೂಲಿ ಇಲ್ಲವೇ ಅಲ್ಲಲ್ಲಿ ಅಂಗಡಿಗಳಿಗೆ ಸೈಕಲ್ ಗಾಡಿಯಲ್ಲಿ ನೀರು ಹಾಕಿ ದುಡಿ ಯುವುದೇ ಸಂಪಾದನೆ. ಇದಿಷ್ಟೇ ಆಗಿದ್ದರೆ ಈ ಕಥೆಯ ಔಚಿತ್ಯ ಇರಲಿಲ್ಲ. ಉಟ್ಟ ಬಟ್ಟೆಯಲ್ಲಿ ಮನೆಯಿಂದ ಹೊರ ಬಂದಾತ ಬಸವನಿಗೆ ನೆರಳು ಸೇರಿದಂತೆ ಯಾವುದೇ  ಆಸರೆ  ಸಹ ಇಲ್ಲ.

ಹಾಗಂತ ಈತ ದುಡ್ಡು ಗಳಿಸ ದಿದ್ದರೂ ತನ್ನ ಮುಗ್ಧ ವ್ಯಕ್ತಿತ್ವ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವನೆಯಿಂದ ಇಲ್ಲಿನ ಬಸರಿಗಿಡ ಪೇಟೆ ಓಣಿ ಸೇರಿದಂತೆ ಹೊಸಪೇಟೆ ಪ್ರದೇಶದಲ್ಲಿ ಜನರ, ಪ್ರೀತಿ ವಿಶ್ವಾಸ ಗಳಿಸಿದ್ದ. ಪಟ್ಟಣದ ವಿವಿಧ ಓಣಿಗಳಲ್ಲಿ ಯಾರೇ ಹುಟ್ಟಲಿ ಅಥವಾ ಸಾಯಲಿ ಈ ಬಸವ ಹಾಜರ್.ಮೊದ ಲಿನಿಂದ ಹಿಡಿದು ಎಲ್ಲ ಕೆಲಸ (ಅಂತ್ಯ ಸಂಸ್ಕಾರ ಸಹ) ಪೂರೈಸಿ, ಅವರಿಂದ ಏನನ್ನೂ ಅಪೇಕ್ಷಿಸದೇ ಏನೆಲ್ಲ ಸೇವೆ ಮಾಡುವ ಕಾಯಕ ಯೋಗಿ. ಎಲ್ಲರ ಅಚ್ಚುಮೆಚ್ಚಿನ  ಬಸವ ನಾಗಿದ್ದ. ಪುಣ್ಯವಂತರೊಬ್ಬರು ತಮ್ಮ ಮನೆಯಲ್ಲಿ ಇವನಿಗೆ ಆಸರೆ ನೀಡಿದ್ದಾರೆ.

ಬಸರಿಗಿಡಪೇಟೆ ಹಿರಿಯರು, ಯುವಕರು ಸೇರಿ ಬಡ ಬಸವನ ಮದುವೆಯನ್ನು ಅದ್ದೂರಿಯಾಗಿ ಮಾಡಿದರು.
ಪ್ರಾಮಾಣಿಕತೆಯಿಂದ ಎಲ್ಲ ಮನ ಗೆದ್ದ ನಿರ್ಗತಿಕನೊಬ್ಬನ ಬಾಳು ಪೂರೈಸಿದ ನೆಮ್ಮದಿ ಅಲ್ಲಿಯ ಜನರಲ್ಲಿ ಎದ್ದು ಕಾಣುತ್ತಿತ್ತು.

ತಮ್ಮ ಮನೆಯ ಮದುವೆ ಎಂಬ ರೀತಿಯಲ್ಲಿ ಪೊಲೀಸರು, ಪತ್ರಕರ್ತರು, ಯುವಕರು ಬಂದಆಶೀರ್ವದಿಸಿದರು. ಅಲ್ಲದೆ ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಹೊಸ ಜೀವನಕ್ಕೆ ಶುಭ ಹಾರೈಸಿದರು. ಯಾರ ಕೆಲಸವೇ ಇದ್ದರೂ ಅದನ್ನು ಮನಸಾರೆ ಮಾಡಿಕೊಡುತ್ತಿದ್ದ ಈ ಸಜ್ಜನ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT