ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪವಿತ್ರಗೊಂಡ ಗದುಗಿನ ‘ಪವಿತ್ರವನ’

Last Updated 23 ಸೆಪ್ಟೆಂಬರ್ 2013, 9:57 IST
ಅಕ್ಷರ ಗಾತ್ರ

ಗದಗ: ನಿರ್ಮಲ ನಗರ, ಅವಳಿ ನಗರದ ಪ್ರತಿಷ್ಠಾಪಿತ ಬಡಾವಣೆಗಳಲ್ಲಿ  ಒಂದು. ಸುಶಿಕ್ಷಿತರೇ ಹೆಚ್ಚು ವಾಸಿಸುವ ನಗರ ಎಂದೇ ಕರೆಸಿಕೊಳ್ಳುತ್ತದೆ. ಹೇಳಿ ಕೊಳ್ಳುವಂಥ ಮೂಲ ಸೌಕರ್ಯ ಇಲ್ಲ. ಹದಗೆಟ್ಟ ರಸ್ತೆಗಳು, ಬೀದಿ ದೀಪಗಳು ಮತ್ತು ಚರಂಡಿ ವ್ಯವಸ್ಥೆ ಬಂದ್‌ ಆಗಿದೆ.

ಇನ್ನೂ ಉದ್ಯಾನಗಳಿಗಂತೂ ಸೌಲಭ್ಯ ಗಳೇ ಇಲ್ಲ. ಮೂರು ಉದ್ಯಾನಗಳು  ಅಧ್ವಾನಗೊಂಡಿವೆ.
ಜೆ.ಸಿ.ಶಾಲೆಯ ಮೈದಾನಕ್ಕೆ ಹೊಂದಿಕೊಂಡಿರುವ ‘ಪವಿತ್ರವನ’ ಸಹ ನಿರ್ವಹಣೆ ಕೊರತೆಯಿಂದ ಸೊರಗಿದೆ.

ನಗರಸಭೆಯಾಗಲಿ, ನಗರಾಭಿವೃದ್ಧಿ ಪ್ರಾಧಿಕಾರವಾಗಲಿ ಉದ್ಯಾನದ ಅಭಿವೃದ್ಧಿಗೆ ಗಮನ ಹರಿಸಿಲ್ಲ.
ಹತು್ತ ವರ್ಷಗಳ ಹಿಂದೆ ನಿರ್ಮಿಸಿದ ಉದ್ಯಾನದಲ್ಲಿ ಜಾರು ಬಂಡಿ, ಜೋಕಾಲಿ, ಮಕ್ಕಳ ಆಟಿಕೆ ಸಾಮಾನು ಅಳವಡಿಸಲಾಗಿತು್ತ. ಆದರೆ ಅವುಗಳಲ್ಲಿ  ಯಾವುದು ಬಳಸುವ ಸ್ಥಿತಿಯಲ್ಲಿಲ್ಲ.

ಜಾರು ಬಂಡಿ ತುಕು್ಕ ಹಿಡಿದು ತಗಡು ಕಿತು್ತಕೊಂಡು ಬಂದಿದೆ. ಮಕ್ಕಳು ಆಟವಾಡಲು ಆಗದಂತ ಪರಿಸಿ್ಥತಿ ಇದೆ.  ಮಕ್ಕಳು ಕುಳಿತು ಕೊಳು್ಳವ ಜೋಕಾಲಿ ಮಣೆಯನೆ್ನೇ  ಕಿತ್ತುಕೊಂಡು ಹೋಗ ಲಾಗಿದೆ. ಪಾರ್ಕ್‌ ತುಂಬ ಗಿಡ, ಗಂಟಿಗಳು ಬೆಳೆದು ನಿಂತಿವೆ.  ಕೇಳುವ ವರು  ಯಾರೂ ಇಲ್ಲದಂತಾಗಿದೆ. ಪಾರ್ಕ್‌ ಒಳಗೆ ಬೀದಿ ನಾಯಿಗಳು, ಹಂದಿಗಳು, ಬಿಡಾಡಿ ಹಸುಗಳು ಓಡಾಡುತ್ತವೆ.

ಜಾರು ಬಂಡಿ ಅಳವಡಿಸಿರುವ ಜಾಗದಲಿ್ಲ ಮರಳು ಇಲ್ಲ.  ಸೂಕ್ತ ಸ್ಥಳಾವಕಾಶ ದೊರೆಯದೆ ತಗಡಿನ ಶೀಟ್‌ಗಳು ಕಿತು್ತ ಬಂದಿರುವ ಜಾರು ಬಂಡಿಯಲಿ್ಲಯೇ ಮಕ್ಕಳು ಆಟ ಆಡುತಾ್ತರೆ. ಕೆಲವೊಮೆ್ಮ ಜಾರಿ ಬಿದು್ದ ಗಾಯಗೊಂಡಿದಾ್ದರೆ. ಕೆಲ ಮಕ್ಕಳು ಭಯದಿಂದ ಜಾರು ಬಂಡೆ ಬಳಿ ಸುಳಿಯವುದಿಲ್ಲ.

ನಿರ್ಮಲ ನಗರದ ಪಕ್ಕದಲಿ್ಲಯೇ ಇರುವ ಹುಡ್ಕೋ ಕಾಲೋನಿಯ ಉದಾ್ಯನ ಗದಗ ಬೆಟಗೇರಿ ಅವಳಿ ನಗರಕೆ್ಕ ಮಾದರಿಯಾಗಿದೆ. ಸುಮಾರು 35 ಲಕ್ಷ ರೂಪಾಯಿ ವೆಚ್ಚದಲಿ್ಲ ಮಾದರಿ ಉದಾ್ಯನ ನಿರ್ಮಿಸಿ, ಎಲ್ಲ ಸೌಲಭ್ಯ ನೀಡಲಾಗಿದೆ. ಅದೇ ಮಾದರಿ ಯಲಿ್ಲ ‘ಪವಿತ್ರವನ’ ಅಭಿವೃದಿ್ಧ ಪಡಿಸ ಬೇಕು ಎಂಬುದು ನಾಗರಿಕರ ಒತಾ್ತಯ.

‘ಮಕ್ಕಳು ಶಾಲೆಯಿಂದ ಬಂದ ಬಳಿಕ ಆಟವಾಡಲು ಹೋಗುತಾ್ತರೆ. ಪಾರ್ಕ್‌ ನಲಿ್ಲ ಜಾಲಿ ಗಿಡ ಬೆಳೆದಿದೆ. ಜಾರು ಬಂಡಿ ತಗಡು ಕಿತು್ತ ಹೋಗಿದೆ. ಆಟ ವಾಡಲು ಸರಿಯಾದ ಜಾಗ ಇಲ್ಲ. ರಸೆ್ತಯಲೆ್ಲೇ ಆಟವಾಡಬೇಕು. ವಾಹನ ಗಳು ಓಡಾಡುತ್ತಿರುತ್ತವೆ. ಹೆಚು್ಚ ಕಮಿ್ಮಯಾದರೆ ಎಂಬ ಭಯ’ ಎನು್ನತಾ್ತರೆ ಸ್ಥಳೀಯ ಮಹಿಳೆಯರು.

‘ಹತು್ತ ವರ್ಷದಿಂದ ಗಾರ್ಡನ್‌ ಹೀಗೆ ಇದೆ.   ನಗರಸಭೆ ಸದಸ್ಯರಿಗೆ ಕೇಳಿದರೆ ಮಾಡಿ್ತವಿ, ನೋಡಿ್ತವಿ ಅಂತಾರೆ. ಇತ್ತ ತಲೆಯೂ ಹಾಕುವು ದಿಲ್ಲ. ಶಿ್ರೀಕಾಂತ ಖಟವಟೆ ಅವರು ನಗರಾಭಿವೃದಿ್ಧ ಪಾ್ರಧಿಕಾರ ಅಧ್ಯಕ್ಷರಾಗಿ ದ್ದಾಗ ಗಾರ್ಡನ್‌ಗೆ ಗಿ್ರೀಲ್‌ ಅಳವಡಿ ಸಿದ್ದು ಬಿಟ್ಟರೆ ಮತೆ್ತ ಏನು ಆಗಿಲ್ಲ’ ಎಂಬುದು ನಿವಾಸಿಗಳ ಆರೋಪ.

‘ನಗರಾಭಿವೃದಿ್ಧ ಪಾ್ರಧಿಕಾರದವರು ಅಭಿವೃದಿ್ಧ ಪಡಿಸಬೇಕಾಗಿತು್ತ. ಆದರೆ ಅವರು ಮಾಡಿಲ್ಲ. ಚುನಾವಣೆ ವೇಳೆ ಭರವಸೆ ನೀಡಿದಂತೆ ಇದನ್ನು ಅಭಿವೃದಿ್ಧ ಪಡಿಸಲಾಗುವುದು’ ಎಂದು 33ನೇ ವಾರ್ಡ್‌ನ ನಗರಸಭೆ ಸದಸ್ಯ ಎಂ.ಸಿ. ಶೇಖ್‌ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT