ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದ ಗುಂಡಿಗೆ ರಸ್ತೆ ತಡೆ ಎಚ್ಚರಿಕೆ !

Last Updated 19 ಡಿಸೆಂಬರ್ 2013, 10:41 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಹಲವು ಗ್ರಾಮಗಳಿಗೆ ಉತ್ತಮ ರಸ್ತೆ ಎನ್ನುವುದು ಈಗಲೂ ಮರೀಚಿಕೆ­ಯಾಗಿಯೇ ಉಳಿದಿದೆ. ಇನ್ನು ಇರುವ ರಸ್ತೆಗಳಲ್ಲಿ ಬಹುತೇಕ ಹದಗೆಟ್ಟಿವೆ. ಆದರೆ ತಾಲ್ಲೂಕಿನ ಗಡಿ ಗ್ರಾಮ­ವಾಗಿ­ರುವ ಅಕ್ಕಿಮಂಗಲಕ್ಕೆ ಇರುವ ಸಂಪರ್ಕ ರಸ್ತೆ ಸಮಸ್ಯೆ ಮಾತ್ರ ಎಲ್ಲಕ್ಕಿಂತ ಹೆಚ್ಚು ‘ಗಂಭೀರ’ವಾಗಿದೆ.

ಬೆಂಗಳೂರು ರಸ್ತೆಯ ವೈಜಕೂರ್‌­ನಿಂದ ಬೀರ್ಜೇನಹಳ್ಳಿ ಮೂಲಕ ಹೋಗುವ ಈ ರಸ್ತೆಯಲ್ಲಿ ಗುಂಡಿ ಬಿದ್ದು ಹಲವು ತಿಂಗಳುಗಳೇ ಕಳೆದಿವೆ. ಆದರೂ ಸಂಬಂಧಿಸಿದವರು ಗಮನಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥರು.

ಗುಂಡಿ ಬಿದ್ದಿರುವ ಭಾಗ ತಗ್ಗಿನಲ್ಲಿ ಇರುವುದರಿಂದ ದೂರದಿಂದ ಬರುವ­ವರ ಕಣ್ಣಿಗೆ ಕಾಣುವುದೇ ಇಲ್ಲ. ರಾತ್ರಿ­ಯಂತೂ ಬೀದಿ ದೀಪದ ಕಂಬಗಳು ಇರುವುದಿಲ್ಲ. ಹಲವು ಸಾರಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ­ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಈಚೆಗೆ ರಸ್ತೆಯಲ್ಲಿನ ಗುಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಂಥ ಘಟನೆ ಇಲ್ಲಿ ನಡೆಯಬೇಕೇ, ಇದರ ಸುಧಾರಣೆಗೆ ಇಲ್ಲಿ ಯಾರಾ­ದರೂ ಪ್ರಾಣ ಕಳೆದುಕೊಳ್ಳಬೇಕೇ  ಎಂದು ಆಕ್ರೋಶದ ಧ್ವನಿಯಲ್ಲಿ ಪ್ರಶ್ನಿಸು­ತ್ತಾರೆ ಇಲ್ಲಿನ ಗ್ರಾಮಸ್ಥರು.

ಪ್ರತಿನಿತ್ಯ ಬೆಳಿಗ್ಗೆಯಿಂದ ರಾತ್ರಿಯ­ವರೆಗೂ ನೂರಾರು ಶಾಲಾ–ಕಾಲೇಜು ವಿದ್ಯಾರ್ಥಿಗಳು, ಕೂಲಿಕಾರ್ಮಿಕರು, ಜನರು ನಿತ್ಯ ಕಚೇರಿ ಕೆಲಸಗಳಿಗಾಗಿ ಈ ಮಾರ್ಗದ ಮೂಲಕವೇ ಹೋಗ­ಬೇಕು.  ಈ ರಸ್ತೆಯು ಜಿಲ್ಲಾ ಪಂಚಾ­ಯಿತಿ ಅಧ್ಯಕ್ಷರ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿ­ಗಳು ಇನ್ನಾದರೂ ರಸ್ತೆ­ಯನ್ನು ದುರಸ್ತಿಗೊಳಿಸಬೇಕು. ಇಲ್ಲದಿ­ದ್ದರೆ ಬೆಂಗಳೂರು ರಸ್ತೆಯಲ್ಲಿ ರಸ್ತೆತಡೆ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT