ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೂರ್ವ ಭರತನಾಟ್ಯ

Last Updated 16 ನವೆಂಬರ್ 2011, 19:30 IST
ಅಕ್ಷರ ಗಾತ್ರ

ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಗುರುವಾರ ಆರ್. ಎನ್. ಮೂರ್ತಿ ದತ್ತಿ ಕಾರ್ಯಕ್ರಮದಲ್ಲಿ ಅಪೂರ್ವ ಶಾಸ್ತ್ರಿ ಭರತನಾಟ್ಯ.

ವಿಜಯ ಸಂಯುಕ್ತ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಅಪೂರ್ವ ಶಾಸ್ತ್ರಿ, ಚೆನ್ನೈ ಕಲಾಕ್ಷೇತ್ರ ಶೈಲಿಯ ಗುರು ಪ್ರೊ. ಎಂ. ಆರ್. ಕೃಷ್ಣಮೂರ್ತಿ ಅವರ ಶಿಷ್ಯೆ. ಏಳು ವರ್ಷದವಳಿದ್ದಾಗ ಇಂದಿರಾ ಪ್ರಸಾದ್ ಅವರ ಬಳಿ ಭರತನಾಟ್ಯ ಕಲಿಯಲು ಆರಂಭಿಸಿ ಮೂರು ವರ್ಷ ನೃತ್ಯದ ಪ್ರಾಥಮಿಕ ಜ್ಞಾನ ಪಡೆದರು. 2004ರಿಂದ ಕಲಾಕ್ಷಿತಿಯಲ್ಲಿ ನೃತ್ಯಾಭ್ಯಾಸ ಮುಂದುವರಿಸಿದರು. ಕಲಾಕ್ಷಿತಿಯ ನೃತ್ಯ ತಂಡದ ಸದಸ್ಯೆಯಾಗಿ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಭರತನಾಟ್ಯದ ಹೊರತಾಗಿ ಜನಪದ ನೃತ್ಯ, ಸಮಕಾಲೀನ ನೃತ್ಯದಲ್ಲೂ ಹಿಡಿತ ಸಾಧಿಸಿದ್ದಾರೆ. ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡುತ್ತಿರುವ ಅಪೂರ್ವಳಿಗೆ ಕಾವ್ಯ ಬರೆಯುವುದು ಮೆಚ್ಚಿನ ಹವ್ಯಾಸ.

ಸ್ಥಳ: ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ. ಸಂಜೆ 6.       
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT