ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೂರ್ವ ಸಂಗಮ

Last Updated 6 ಡಿಸೆಂಬರ್ 2012, 19:26 IST
ಅಕ್ಷರ ಗಾತ್ರ

ಬೆಂಗಳೂರು: ಒಡಿಶಾದ ಭುವನೇಶ್ವರದ ಕಳಿಂಗ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆಯ (ಕೆಐಐಟಿ) ಹಳೆಯ ವಿದ್ಯಾರ್ಥಿಗಳ `ಸ್ನೇಹ ಮಿಲನ-2012' ಕಾರ್ಯಕ್ರಮ ನಗರದಲ್ಲಿ ಇತ್ತೀಚೆಗೆ ನಡೆಯಿತು.

ಕೆಐಐಟಿ ಸಂಸ್ಥಾಪಕ ಡಾ.ಅಚ್ಯುತ ಸಮಂತ ಮಾತನಾಡಿ, `ಇನ್ನೂ ಹದಿನಾರು ವರ್ಷದ ಕೆಐಐಟಿ ಸಂಸ್ಥೆಯು ಜಗತ್ತಿನ ಅತಿದೊಡ್ಡ ಶಿಕ್ಷಣ ಸಂಸ್ಥೆ ಎಂದು ಹೆಸರು ಗಳಿಸಿದೆ. ಸಂಸ್ಥೆಯಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಾ ಬರಲಾಗುತ್ತಿದೆ. ಸಂಸ್ಥೆಯಲ್ಲಿ ಕಲಿತವರು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ' ಎಂದರು.

`ಐಐಟಿ, ಐಐಎಂಗಳಿಗಿಂತ ಗುಣಮಟ್ಟದ ಶಿಕ್ಷಣವನ್ನು ಕೆಐಐಟಿ ನೀಡುತ್ತಿದೆ. ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಮಾವೇಶಗಳು ಕೆಐಐಟಿಯಲ್ಲಿ ನಡೆಯುತ್ತಿವೆ. ಇತ್ತೀಚೆಗೆ ಭಾರತೀಯ ವಿಜ್ಞಾನ ಸಮಾವೇಶ ನಮ್ಮ ಸಂಸ್ಥೆಯಲ್ಲಿ ನಡೆದಿದ್ದು, ಜಗತ್ತಿನ 50 ದೇಶಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು' ಎಂದು ಅವರು ತಿಳಿಸಿದರು.

`ಯುಜಿಸಿ ನಿಯಮಗಳ ಪ್ರಕಾರ ಕೆಐಐಟಿ ಹಳೆ ವಿದ್ಯಾರ್ಥಿ ಸಂಘ ನೋಂದಣಿಯಾಗಿದ್ದು, ಪ್ರತಿ ವರ್ಷ ಡಿಸೆಂಬರ್ ಕೊನೆ ಶನಿವಾರ ಭುವನೇಶ್ವರದಲ್ಲಿ ಸಂಘದ ಚುನಾವಣೆ ನಡೆಯಲಿದೆ. ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ವಿವಿಧ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಜತೆಗೆ ವಾರ್ಷಿಕ ಸ್ನೇಹ ಮಿಲನ ಆಚರಿಸಲಾಗುವುದು' ಎಂದರು. `ಮುಂಬೈ, ದೆಹಲಿ ಹಾಗೂ ಕೋಲ್ಕತ್ತಗಳಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಹಳೆ ವಿದ್ಯಾರ್ಥಿಗಳಿಗೆ ಸಂಸ್ಥೆಯೊಂದಿಗಿನ ಬಾಂಧವ್ಯ ವೃದ್ಧಿಗೊಳ್ಳಲಿ ಎಂಬುದು ಉದ್ದೇಶ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT