ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪಣ್ಣ ಬದಲು ಮೊಯಿನುದ್ದೀನ್

ರಣಜಿ: ಮಹಾರಾಷ್ಟ್ರ ವಿರುದ್ಧದ ಪಂದ್ಯಕ್ಕೆ ಕರ್ನಾಟಕ
Last Updated 25 ಡಿಸೆಂಬರ್ 2012, 20:03 IST
ಅಕ್ಷರ ಗಾತ್ರ

ಬೆಂಗಳೂರು: ಅವಕಾಶದ ನಿರೀಕ್ಷೆಯಲ್ಲಿ ಎರಡು ವರ್ಷಗಳಿಂದ ಕಾದು ಕುಳಿತಿದ್ದ ಎಡಗೈ ಸ್ಪಿನ್ನರ್ ಎಸ್. ಖಾಜಾ ಮೊಯಿನುದ್ದೀನ್‌ಗೆ ಮಹಾರಾಷ್ಟ್ರ ವಿರುದ್ಧದ ಮುಂದಿನ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡದಲ್ಲಿ ಸ್ಥಾನ ಲಭಿಸಿದೆ. ಈ ಪಂದ್ಯ ಡಿಸೆಂಬರ್ 29ರಿಂದ ಜನವರಿ1ರ ವರೆಗೆ ಪುಣೆಯಲ್ಲಿ ನಡೆಯಲಿದೆ.

ಇಂಗ್ಲೆಂಡ್ ವಿರುದ್ಧದ ಎರಡು ಟ್ವೆಂಟಿ-20 ಪಂದ್ಯಗಳ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ವೇಗಿ ಅಭಿಮನ್ಯು ಮಿಥುನ್ ತಂಡಕ್ಕೆ ಮರಳಿದ್ದಾರೆ. ಮಿಥುನ್ ಬದಲು ತಂಡದಲ್ಲಿದ್ದ ಆದಿತ್ಯ ಸಾಗರ್ ಅವರನ್ನು ಕೈಬಿಡಲಾಗಿದೆ.

ಅಪ್ಪಣ್ಣಗೆ ಕೊಕ್: ಈ ಸಲದ ರಣಜಿಯಲ್ಲಿ ಏಳು ಪಂದ್ಯಗಳನ್ನಾಡಿರುವ ಸ್ಪಿನ್ನರ್ ಕೆ.ಪಿ. ಅಪ್ಪಣ್ಣಗೆ ಕೊಕ್ ನೀಡಲಾಗಿದೆ. 

ತಂಡ ಇಂತಿದೆ: ಸ್ಟುವರ್ಟ್ ಬಿನ್ನಿ (ನಾಯಕ), ಮನೀಷ್ ಪಾಂಡೆ (ಉಪನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್. ರಾಹುಲ್, ಕುನಾಲ್ ಕಪೂರ್, ಗಣೇಶ್ ಸತೀಶ್, ಸಿ.ಎಂ. ಗೌತಮ್, ಎಚ್.ಎಸ್. ಶರತ್, ಅಮಿತ್ ವರ್ಮಾ, ಕೆ.ಗೌತಮ್, ರೋನಿತ್ ಮೋರೆ, ಕರುಣ್ ನಾಯರ್, ಎಸ್.ಎಲ್. ಅಕ್ಷಯ್, ಅಭಿಮನ್ಯು ಮಿಥುನ್ ಹಾಗೂ ಎಸ್.ಕೆ. ಮೊಯಿನುದ್ದೀನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT