ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಹತ್ಯೆಯ ಸೇಡು ತೀರಿಸುವೆ: ಗಡ್ಡಾಫಿ ಪುತ್ರನ ಪ್ರತಿಜ್ಞೆ

Last Updated 23 ಅಕ್ಟೋಬರ್ 2011, 10:20 IST
ಅಕ್ಷರ ಗಾತ್ರ

ಕೈರೋ (ಐಎಎನ್ ಎಸ್/ ಆರ್ ಐ ಎ ನೊವೊಸ್ತಿ): ರಾಷ್ಟ್ರೀಯ ಸಂಧಿಕಾಲ ಮಂಡಳಿ ಯೋಧರಿಂದ ಸಿರ್ಟೆಯಲ್ಲಿ ಹತರಾದ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡ್ಡಾಫಿ ಅವರ ಪುತ್ರರಲ್ಲಿ ಒಬ್ಬರಾದ ಸೀಫ್ ಅಲ್- ಇಸ್ಲಾಂ ತಾನು ತನ್ನ ತಂದೆಯ ಹತ್ಯೆಯ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಸಿರಿಯಾ ಮೂಲದ ಗಡ್ಡಾಫಿ ಆಡಳಿತಕ್ಕೆ ನಿಷ್ಠವಾಗಿರುವ ಅಲರೈ ಟಿವಿ ವಾಹಿನಿಯಲ್ಲಿ ಶನಿವಾರ ರಾತ್ರಿ ಕಾಣಿಸಿಕೊಂಡ  ಅಲ್- ಇಸ್ಲಾಂ, ತಾನು ಜೀವಂತ ಇದ್ದು ಲಿಬಿಯಾದಲ್ಲಿಯೇ ಇರುವುದಾಗಿಯೂ, ಬಂಡಕೋರರ ವಿರುದ್ಧ ಭೀಕರ ಯುದ್ಧ ನಡೆಸಲಿರುವುದಾಗಿಯೂ ಘೋಷಿಸಿದ್ದಾರೆ.

~ನಾವು ನಮ್ಮ ಪ್ರತಿರೋಧವನ್ನು ಮುಂದುವರೆಸಿದ್ದೇವೆ. ನಾನು ಲಿಬಿಯಾದಲ್ಲಿಯೇ ಇದ್ದೇನೆ. ಜೀವಂತವಾಗಿದ್ದೇನೆ, ಸ್ವತಂತ್ರನಾಗಿದ್ದೇನೆ ಮತ್ತು ಸೇಡು ತೀರಿಸಿಕೊಳ್ಳಲು ಕೊನೆಯವರೆಗೂ ಸಮರ ಮುಂದುವರೆಸಲು ಇಚ್ಛಿಸಿದ್ದೇನೆ~ ಎಂದು ಹೇಳಿದರು.

ಇದಕ್ಕೆ ಮುನ್ನ ಗಡ್ಡಾಫಿ ಬೆಂಬಲಿಗರ ವೆಬ್ ಸೈಟ್ ಒಂದು ಕೂಡಾ ಸೀಫ್ ಅಲ್- ಇಸ್ಲಾಂ ಅವರನ್ನು ಲಿಬಿಯಾದ ಸರ್ವಾಧಿಕಾರಿಯ ಉತ್ತರಾಧಿಕಾರಿಯಾಗಿ ನೇಮಿಸಲಾಗಿದ್ದು ಅವರಿಗೆ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೇನಾ ಪಡೆಗಳ ಸೇನಾಧಿಪತ್ಯವನ್ನು ವಹಿಸಲಾಗಿದೆ ಎಂಬ ಹೇಳಿಕೆಯನ್ನು ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT