ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರಾಮಾಣಿಕ, ಬೇಕಾದ್ದನ್ನಷ್ಟೇ ಪ್ರಕಟಿಸಿದ ಹೇಡಿ ಕೃತ್ಯ: ನಾಯರ್ ಪ್ರಹಾರ

Last Updated 5 ಫೆಬ್ರುವರಿ 2012, 8:00 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ಅಂತರಿಕ್ಷ್- ದೇವಾಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ದೋಷಾರೋಪ ಹೊರಿಸಿ ಉನ್ನತ ಮಟ್ಟದ ತಂಡವು ಬಿಡುಗಡೆ ಮಾಡಿದ ವರದಿಯಲ್ಲಿನ ಲೋಪದೋಷಗಳತ್ತ ಬೊಟ್ಟು ಮಾಡಿದ ಮಾಜಿ ಇಸ್ರೋ ಮುಖ್ಯಸ್ಥ ಜಿ. ಮಾಧವನ್ ನಾಯರ್ ಅವರು ವರದಿ ~ಅಸಂಗತಗಳು ಮತ್ತು ಅಸ್ಪಷ್ಟತೆಗಳು ತುಂಬಿಕೊಂಡಿವೆ~ ಎಂದು ಭಾನುವಾರ ಇಲ್ಲಿ ಹೇಳಿದರು.

~ಅನುಕೂಲಕರವಾದ~ ಭಾಗಗಳನ್ನಷ್ಟೇ ಬಿಡುಗಡೆ ಮಾಡುವ ~ಹೇಡಿತನ~ ಪ್ರದರ್ಶಿಸಿದ್ದಕ್ಕಾಗಿ ಉತ್ತರಾಧಿಕಾರಿ ಕೆ. ರಾಧಾಕೃಷ್ಣನ್ ನೇತೃತ್ವದ ಬಾಹ್ಯಾಕಾಶ ಇಲಾಖೆಯ ಮೇಲೆ ಟೀಕಾಪ್ರಹಾರ ಮಾಡಿದರು.

~ಅನುಕೂಲಕರ ಭಾಗಗಳನ್ನಷ್ಟೇ ಆಯ್ದು ಪ್ರಕಟಿಸಿದ್ದಾರೆ. ಇದು ಸಂಪೂರ್ಣ ಅಪ್ರಾಮಾಣಿಕ ಕೃತ್ಯ. ನೀವು ಒಂದು ವರದಿಯನ್ನು ಪ್ರಕಟಿಸುವಾಗ ಅದನ್ನು ಸಂಪೂರ್ಣವಾಗಿರಬೇಕು~ ಎಂದು ನಾಯರ್ ಪಿಟಿಐ ಜೊತೆ ಮಾತನಾಡುತ್ತಾ ನುಡಿದರು.

ಬಾಹ್ಯಾಕಾಶ ಇಲಾಖೆಯು ಎರಡು ಪ್ರಮುಖ ವರದಿಗಳನ್ನು ಬಿಡುಗಡೆ ಮಾಡಿದ ಒಂದು ದಿನದ ಬಳಿಕ ನಾಯರ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಈ ವರದಿಯನ್ನು ಆಧರಿಸಿ ಸರ್ಕಾರವು ನಾಯರ್ ಮತ್ತು ಇತರ ಮೂವರು ವಿಜ್ಞಾನಿಗಳನ್ನು ಪ್ರಮುಖ ಸರ್ಕಾರಿ ಹುದ್ದೆಗಳಿಗೆ ಹೋಗದಂತೆ ನಿರ್ಬಂಧಿಸಿದೆ.

ಬಿ.ಕೆ. ಚತುರ್ವೇದಿ ಮತ್ತು ಪ್ರೊಫೆಸರ್ ರೊದ್ದಂ ನರಸಿಂಹ ನೇತೃತ್ವದ ಉನ್ನತಾಧಿಕಾರ ಪುನರ್ ಪರಿಶೀಲನಾ ಸಮಿತಿಗಳು ನೀಡಿದ ವರದಿಯನ್ನು ಮತ್ತು ಮಾಜಿ ಮುಖ್ಯ ಜಾಗೃತಾ ಆಯುಕ್ತ ಪ್ರತ್ಯೂಷ ಸಿನ್ಹ ನೇತೃತ್ವದ ಪಂಚಸದಸ್ಯ  ಉನ್ನತಾಧಿಕಾರ ತಂಡವು ಮಾಡಿದ ನಿರ್ಣಯಗಳನ್ನು ಬಾಹ್ಯಾಕಾಶ ಇಲಾಖೆ ಕಳೆದ ರಾತ್ರಿ ಬಿಡುಗಡೆ ಮಾಡಿದೆ

~ಪಂಚ ಸದಸ್ಯ ಉನ್ನತಾಧಿಕಾರ ಸಮಿತಿಯ ವರದಿಯಲ್ಲಿರುವ ಅಂಶಗಳು ~ತುಂಬ ಗಂಭೀರವಾದ ಆರೋಪಗಳು.~ ಎಂದು ಬಣ್ಣಿಸಿದ ನಾಯರ್, ~ಸಂಬಂಧಪಟ್ಟ ವ್ಯಕ್ತಿಗಳಿಂದ  ಈ ಕುರಿತು ಯಾಕೆ ವಿವರಣೆ ಕೇಳಲಿಲ್ಲ? ಔಪಚಾರಿಕ ತನಿಖೆಯನ್ನು ಏಕೆ ನಡೆಸಲಿಲ್ಲ?~ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂದೂ ಅವರು ನುಡಿದರು.

ಅಷ್ಟೊಂದು ಅವ್ಯವಹಾರಗಳು ನಡೆದಿವೆ ಎಂಬುದು ಇಲಾಖೆಗೆ ಮನವರಿಕೆಯಾಗಿದ್ದರೆ ಅವುಗಳ ಮೂಲದ ಪತ್ತೆಗಾಗಿ ಅವರು ತನಿಖೆಗೆ ಆದೇಶ ಮಾಡಬೇಕಾಗಿತ್ತು. ಇದು  ಸಮಿತಿಯಲ್ಲಿನ ಒಂದಿಬ್ಬರು ವ್ಯಕ್ತಿಗಳ ಭಾವನೆಗಳೇ ಹೊರತು ನಿಜವಾದ ನಿರ್ಣಯಗಳಲ್ಲ~ ಎಂದು ಹೇಳುವ ಮೂಲಕ ಪಂಚ ಸದಸ್ಯ ಸಮಿತಿಯ ಭಾಗವಾಗಿದ್ದ ರಾಧಾಕೃಷ್ಣನ್ ಅವರ ಹೆಸರನ್ನು ಉಲ್ಲೇಖಿಸದೆಯೇ ನಾಯರ್ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT