ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬಕಾರಿ ಅಕ್ರಮ ತಡೆಗೆ ನಿಯಂತ್ರಣದಳ ರಚನೆ

Last Updated 5 ಏಪ್ರಿಲ್ 2013, 5:51 IST
ಅಕ್ಷರ ಗಾತ್ರ

ಹಾವೇರಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಚುನಾವಣೆ ಸದಾಚಾರ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಸಾಗಾಟ, ಮಾರಾಟ ಮತ್ತು ಅಕ್ರಮ ಮದ್ಯ ಸಾಗಾಟ ಹಾಗೂ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ನಿಯಂತ್ರಣ ದಳ ರಚನೆ ಮಾಡಲಾಗಿದೆ.

ಜಿಲ್ಲೆಯ ಅಬಕಾರಿ ಉಪ ಆಯುಕ್ತರವರ ಅಧೀನದಲ್ಲಿ ಮುಖ್ಯ ನಿಯಂತ್ರಣ ಕಚೇರಿ ಸ್ಥಾಪಿಸಲಾಗಿದ್ದು, ಇದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ.

ಜಿಲ್ಲಾ ಮಟ್ಟದ ಕಂಟ್ರೋಲ್ ಯೂನಿಟ್ ನೋಡಲ್ ಅಧಿಕಾರಿಗಳನ್ನಾಗಿ ಅಬಕಾರಿ ಉಪ ಆಯುಕ್ತರ ಕಚೇರಿ ಅಬಕಾರಿ ನಿರೀಕ್ಷಕಿ ಪ್ರತಿಭಾ ಹಿತ್ತಲಮನಿ ಅವರನ್ನು (ದೂರವಾಣಿ ಸಂಖ್ಯೆ: 08375-249063, ಮೊ:9739232946) ನೇಮಕ ಮಾಡಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಜರುಗಬಹುದಾದ ಅಕ್ರಮ ಮದ್ಯದ ಹಾವಳಿ ತಡೆಗಟ್ಟಲು, ತಾಲೂಕಿನ ವಲಯ ನಿರೀಕ್ಷಕರ ನೇತೃತ್ವದಲ್ಲಿ ಅಬಕಾರಿ ನಿಯಂತ್ರಣ ದಳ ರಚಿಸಿದ್ದು, ಆಯಾ ತಾಲ್ಲೂಕಿನ ವಲಯ ಅಬಕಾರಿ ನಿರೀಕ್ಷಕರು ನೋಡಲ್ ಅಧಿಕಾರಿಗಳಾಗಿರುತ್ತಾರೆ. ಅದಕ್ಕಾಗಿ ತಾಲ್ಲೂಕುವಾರು ನೇಮಕ ಮಾಡಿದ ಸಿಬ್ಬಂದಿ ಕೂಡಾ ದಿನ 24 ಗಂಟೆಗಳ ಕಾಲ ಕಾರ್ಯ ಪ್ರವೃತ್ತರಾಗಲಿದ್ದಾರೆ ಎಂದು ಜಿಲ್ಲಾ ಅಬಕಾರಿ ಅಧೀಕ್ಷಕರು ತಿಳಿಸಿದ್ದಾರೆ.

ಹಾವೇರಿ ವಲಯ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ (ದೂರವಾಣಿ ಸಂಖ್ಯೆ: 08375-235265), ಎಸ್.ಬಿ.ಚೌಕಿಮಠ, ಎಂ.ವಿ.ಬಸರಿಕಟ್ಟಿ ಕರ್ತವ್ಯ ನಿರ್ವಹಿಸಲಿದ್ದಾರೆ.

ರಾಣೆಬೆನ್ನೂರು  ಅಬಕಾರಿ ಉಪ ಅಧೀಕ್ಷಕರ ಕಚೇರಿಯಲ್ಲಿ (ದೂರವಾಣಿ ಸಂಖ್ಯೆ: 08373-267587) ಆರ್.ಎಫ್.ಬಂಕಾಪುರ ಹಾಗೂ ಭೂಪತಿ, ಸವಣೂರ ಅಬಕಾರಿ ವಲಯ ನಿರೀಕ್ಷಕರ ಕಚೇರಿಯಲ್ಲಿ (ದೂರವಾಣಿ ಸಂಖ್ಯೆ: 08378-241166) ಕೆ.ಎಂ.ತೇರದಾಳ ಹಾಗೂ ವಿ.ಎಸ್.ಮಾದರ ಕರ್ತವ್ಯ ನಿರ್ವಹಿಸಲಿದ್ದಾರೆ.

ಬ್ಯಾಡಗಿ ಅಬಕಾರಿ ವಲಯ ನಿರೀಕ್ಷಕರ ಕಚೇರಿಯಲ್ಲಿ ಎಂ.ಎಂ.ಅಸಾದಿ (91642 03543) ಹಾಗೂ  ಎಫ್.ಎಂ.ಹಿತ್ತಲಮನಿ (99005 94157), ಹಿರೇಕೆರೂರು ಅಬಕಾರಿ ವಲಯ ನಿರೀಕ್ಷಕರ ಕಚೇರಿಯಲ್ಲಿ (ದೂರವಾಣಿ ಸಂಖ್ಯೆ: 08376-283267) ಎಂ.ಡಿ.ಚಿಕ್ಕಣ್ಣವರ ಹಾಗೂ ದ್ವಿತೀಯ ದರ್ಜೆ ಸಹಾಯಕ ಎ.ಎಸ್.ಬಾಬನವಾಲೆ ಕರ್ತವ್ಯ ನಿರ್ವಹಿಸಲಿದ್ದಾರೆ.

ಶಿಗ್ಗಾಂವ  ಅಬಕಾರಿ ವಲಯ ನಿರೀಕ್ಷಕರ ಕಚೇರಿಯಲ್ಲಿ ವಿದ್ಯಾ ಖುರ್ಸಾಪುರ (99160 89948)  ಹಾಗೂ ಟಿ.ಎನ್.ಗೋಡಿ(99727 67908), ಹಾನಗಲ್ ಅಬಕಾರಿ ವಲಯ ನಿರೀಕ್ಷಕರ ಕಚೇರಿಯಲ್ಲಿ ಎಂ.ಎಫ್.ಕಟಿಗೆಣ್ಣನವರ (9008455202), ಕೆ.ಬಿ.ಹುಟಗಿ (94817 35900) ಕರ್ತವ್ಯ ನಿರ್ವಹಿಸಲಿದ್ದಾರೆ.

ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿರುವ ಜಿಲ್ಲಾ ಮಟ್ಟದ ಕಂಟ್ರೋಲ್ ಯೂನಿಟ್ (ದೂರವಾಣಿ ಸಂಖ್ಯೆ:08375-249063) ನಲ್ಲಿ ಎಂ.ಎಸ್.ಜೋಗಹಳ್ಳಿ ಹಾಗೂ ಬಿ.ಎಲ್.ವಂದಲಾ ಮತ್ತು ಎಸ್.ಜಿ.ಪಾಲ್ಮರಿ ಕರ್ತವ್ಯದಲ್ಲಿ ಇರಲಿದ್ದಾರೆ.

ತಾಲ್ಲೂಕುಗಳ ವಲಯ ಕಂಟ್ರೋಲ್‌ಗಳ ವಿವರ: ಹಾವೇರಿ ವಲಯ ಅಬಕಾರಿ ನೀರಿಕ್ಷಕ್ಷ ಆರ್.ಐ.ಹೂಗಾರ (94496 29510, ಕಚೇರಿ:08375-235265) ರಾಣೆಬೆನ್ನೂರು ವಲಯ ಅಬಕಾರಿ ನೀರಿಕ್ಷಕ್ಷ ಎನ್.ಎಚ್.ಪರಮೇಶ್ವರಪ್ಪ (94495 97101 ಕಚೇರಿ: 083773-261140). ಸವಣೂರ ವಲಯ ಅಬಕಾರಿ ನೀರಿಕ್ಷಕ್ಷ ದೀಪಕ ಎಸ್,(98804 49065, ಕಚೇರಿ:08378-241166). ಹಿರೇಕೆರೂರು ವಲಯ ಅಬಕಾರಿ ನೀರಿಕ್ಷಕಿ ಪ್ರತಿಭಾ ಹಿತ್ತಲಮನಿ (97392 32946, ಕಚೇರಿ:283267). ಹಾನಗಲ್ ವಲಯ ಅಬಕಾರಿ ನೀರಿಕ್ಷಕ್ಷ ಹೊನ್ನಪ್ಪ ಓಲೇಕಾರ (94495 97099), ಬ್ಯಾಡಗಿ ವಲಯ ಅಬಕಾರಿ ನೀರಿಕ್ಷಕ್ಷ ಬಸವರಾಜ ಕರಮಣ್ಣನವರ (99862 64533) ಹಾಗೂ ಶಿಗ್ಗಾವಿ ವಲಯ ಅಬಕಾರಿ ನೀರಿಕ್ಷಕ್ಷ ರವಿ ಮರಿಗೌಡ್ರ (89703 46997).

ಸಾರ್ವಜನಿಕರು ಅಬಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದಾದರೂ ಮಾಹಿತಿ ಇದ್ದಲ್ಲಿ ನೇರವಾಗಿ ಮೇಲ್ಕಂಡ ಅಧಿಕಾರಿಗಳಿಗೆ ತಿಳಿಸಲು ಕೋರಲಾಗಿದೆ.

ಮಾಹಿತಿ ನೀಡಿದ ವ್ಯಕ್ತಿಗಳಿಗೆ ಪ್ರಕರಣ ದಾಖಲಿಸಿದ ನಂತರ ನಗದು ಬಹುಮಾನ ನೀಡಲಾಗುವುದು ಹಾಗೂ ಅಂತವರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುವುದು ಜಿಲ್ಲಾ ಅಬಕಾರಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT