ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬುಧಾಬಿ: ಆಸ್ಪತ್ರೆಗೆ ಶಂಕುಸ್ಥಾಪನೆ

Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಅಬುಧಾಬಿ: ಎನ್.ಎಂ.ಸಿ. ಹೆಲ್ತಕೇರ್ ಸಂಸ್ಥೆ ಅರಬ್ ಗಣರಾಜ್ಯದಲ್ಲಿಯೇ ಅತಿ ದೊಡ್ಡ ವೈದ್ಯಕೀಯ ಸಂಸ್ಥೆಯಾಗಿದ್ದು ಖಲೀಫ್‌ನಗರದಲ್ಲಿ 250 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲು ಉದ್ದೇಶಿಸಿದ್ದು ಇದರ ಶಂಕುಸ್ಥಾಪನಾ ಸಮಾರಂಭ ಇತ್ತೀಚೆಗೆ ನಡೆಯಿತು.

ಸಮಾರಂಭದಲ್ಲಿ ಯುಎಇಯ ಅಂತರರಾಷ್ಟ್ರೀಯ ಸಂಬಂಧ ಮತ್ತು ಆರೋಗ್ಯ ಇಲಾಖೆಯ ಸಹಾಯಕ ಅಧೀನ ಕಾರ್ಯದರ್ಶಿ ನಾಸೆರ್ ಖಲೀಫಾ ಅಲ್ ಬದೂರ್, ಆರೋಗ್ಯ ಪ್ರಾಧಿಕಾರದ ಆರೋಗ್ಯ ನಿಯಂತ್ರಣ ವಿಭಾಗದ ನಿರ್ದೇಶಕ ಡಾ. ಅಲಿ ಒಬೈದ್ ಅಲ್ ಅಲಿ, ಅಬುಧಾಬಿ ರಾಷ್ಟ್ರೀಯ ಜೀವವಿಮಾ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಲಿದ್ ಸಿದಾನಿ ಈ ಮುಂತಾದವರು ಭಾಗವಹಿಸಿದ್ದರು. ಈ ಆಸ್ಪತ್ರೆಯ ಮೊದಲ ಹಂತ 2014ರಲ್ಲಿ ಕಾರ್ಯಾರಂಭವಾಗಲಿದೆ.

ಇದು 23 ವಿಭಾಗಗಳನ್ನು ಒಳಗೊಳ್ಳಲಿದೆ.  ಅಬುಧಾಬಿ ನಗರಸಭೆ ಒದಗಿಸಿದ 54,200 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿದ್ದು ಇದರ ನಿರ್ಮಾಣಕ್ಕೆ 200 ದಶಲಕ್ಷ ಡಾಲರ್ ವೆಚ್ಚವಾಗಲಿದೆ. ಆಸ್ಪತ್ರೆಗೆ ಜಾಗ ಒದಗಿಸಿದ ನಗರಸಭೆಗೆ  ಹೆಲ್ತ್‌ಕೇರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಆರ್. ಶೆಟ್ಟಿ ಸಮಾರಂಭದಲ್ಲಿ ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT