ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬೆ- ಜಪಾನ್ ನೂತನ ಪ್ರಧಾನಿ

Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಟೋಕಿಯೊ (ಐಎಎನ್‌ಎಸ್/ಎಎಫ್‌ಪಿ): ಜಪಾನ್‌ನ ನೂತನ ಪ್ರಧಾನಿಯಾಗಿ ಲಿಬರಲ್ ಡೆಮಾಕ್ರಟಿಕ್ ಪಕ್ಷದ (ಎಲ್‌ಡಿಪಿ) ಶಿನ್ಜೊ ಅಬೆ ಅವರನ್ನು ಸಂಸತ್ತಿನ ಕೆಳಮನೆ ಬುಧವಾರ ಆಯ್ಕೆ ಮಾಡಿದೆ.

ಕೆಳಮನೆಯಲ್ಲಿ ಒಟ್ಟು 480 ಸ್ಥಾನಗಳ ಪೈಕಿ ಅಬೆ ಅವರು 328 ಮತಗಳನ್ನು ಪಡೆದಿದ್ದಾರೆ. 16ರಂದು ನಡೆದ ಚುನಾವಣೆಯಲ್ಲಿ ಕೆಳಮನೆಯಲ್ಲಿ ಎಲ್‌ಡಿಪಿ ಮತ್ತು ಅದರ ಮಿತ್ರ ಪಕ್ಷ 325 ಸ್ಥಾನಗಳನ್ನು ಪಡೆದಿವೆ.  ಮೇಲ್ಮನೆಯಲ್ಲಿ ಮೊದಲ ಸುತ್ತಿನ ಚುನಾವಣೆಯಲ್ಲಿ ಅಬೆ ಅವರು ಹೆಚ್ಚು ಮತಗಳನ್ನು ಪಡೆಯಲು ವಿಫಲರಾದರು. ಆದರೆ ಇದು ಅಬೆ ಪ್ರಧಾನಿಯಾಗಲು ಅಡ್ಡಿ ಆಗುವುದಿಲ್ಲ ಎನ್ನಲಾಗಿದೆ.

ಅಬೆ ಈ ಹಿಂದೆ 2006ರಿಂದ 2007ರವರೆಗೆ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು.

ಅಬೆ ಆಯ್ಕೆಯೊಂದಿಗೆ ಏಳು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಜಪಾನಿನಲ್ಲಿ ಏಳು ಪ್ರಧಾನಿಗಳು ಕಾರ್ಯ ನಿರ್ವಹಿಸಿದಂತೆ ಆಗಿದೆ. ಈ ಹಿಂದೆ ಯೊಷಿಹಿಕೊ ನೊಡಾ ಪ್ರಧಾನಿಯಾಗಿದ್ದರು. ಇವರ ಪಕ್ಷವು ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT