ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬಾ..ಇಲ್ನೋಡಿ ನಾಗರಹಾವು!

Last Updated 30 ಜುಲೈ 2012, 8:05 IST
ಅಕ್ಷರ ಗಾತ್ರ

ಕೆರೂರ : ಕಲ್ಲ ನಾಗರಕ್ಕೆ ಹಾಲು ಎರೆಯುವ ಜನತೆ, ನಿಜ ನಾಗರ ಕಂಡರೆ ಕೊಲ್ಲುವ ಪದ್ಧತಿ ಸಮಾಜದಲ್ಲಿ ಬೆಳೆದು ಬಂದಿರು ವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಆದರೆ ಇದಕ್ಕೆ ಅಪವಾದ ಎಂಬಂತೆ ಇಲ್ಲಿಗೆ ಸಮೀಪದ ಕುಳ ಗೇರಿ ಕ್ರಾಸ್‌ನ ಶರಣಯ್ಯ ಯಮನೂರಮಠ  ಮೂರು ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಪ್ಲಾಸ್ಟಿಕ್ ಡಬ್ಬವೊಂದರಲ್ಲಿ ಹಾಕಿ ಗ್ರಾಮದಲ್ಲಿ ಪ್ರದರ್ಶಿಸಿದ.

ಬಯಲು ಸೀಮೆಯಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುವ ಇಂತಹ ಸರ್ಪ ಕುಳಗೇರಿಯ  ಪ್ರಮುಖ ಬಡಾವಣೆಯಲ್ಲಿ ಪ್ರದರ್ಶನಕ್ಕೆ  ಇಟ್ಟಾಗ ಗ್ರಾಮಸ್ಥರು ಅಚ್ಚರಿಯಿಂದ ವೀಕ್ಷಿಸಿದರು.
ನಾಗರಪಂಚಮಿ ಹಬ್ಬದ ಸಂದರ್ಭದಲ್ಲಿ ಸೆರೆ ಸಿಕ್ಕ `ನಾಗರಾಜ~ನಿಗೆ ಭಕ್ತಿ-ಭಾವದಿಂದ ವಿವಿಧ ಬಗೆಯಲ್ಲಿ ಪೂಜೆ ಸಲ್ಲಿಸಿ ಧನ್ಯತೆ ಮೆರೆದರಲ್ಲದೇ ಕೆಲವರು ಹಾಲೆರೆದು ಜನ್ಮ ಸಾರ್ಥಕ  ಆದ ರೀತಿ ವರ್ತಿಸಿದರು.

ನಂತರ ಈ ಹಾವನ್ನು ಮಲಪ್ರಭಾ ನದಿಯಲ್ಲಿ ಹರಿಬಿಡಲಾಯಿತು ಎಂದು ಆತನ ಮಿತ್ರರಾದ ಆನಂದ ಕಲಬಾ ಶೆಟ್ಟಿ ಹಾಗೂ ಪ್ರಕಾಶ ಕಮತರ `ಪ್ರಜಾವಾಣಿ~ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT