ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನದ ಮಾತುಗಳು...

‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಶಿಪ್‌’
Last Updated 17 ಜನವರಿ 2016, 4:56 IST
ಅಕ್ಷರ ಗಾತ್ರ

ಇದೊಂದು ಸಮಾಜಮುಖಿ ಕೆಲಸ. ಇದರಿಂದ ಸುಪ್ತವಾದ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ. ಆ ಮೂಲಕ ಸಮಾಜಕ್ಕೆ ಒಳ್ಳೆಯದಾಗುತ್ತದೆ. ರಾಷ್ಟ್ರಕ್ಕೆ ಅಗತ್ಯವಾದ ಸತ್ಪ್ರಜೆಗಳನ್ನು ರೂಪಿಸುವಲ್ಲಿ  ‘ಪ್ರಜಾವಾಣಿ’ ಒಳ್ಳೆಯ ಕೆಲಸ ಮಾಡುತ್ತಿದೆ. ಅದಕ್ಕಾಗಿ ನಾನು ಪತ್ರಿಕೆಯನ್ನು ಅಭಿನಂದಿಸುತ್ತೇನೆ.
- ಪ್ರೊ.ಬಿ.ತಿಮ್ಮೇಗೌಡ, ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ

ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ ಗುರುತಿಸಲು ಇದೊಂದು ಉತ್ತಮ ವೇದಿಕೆ. ನಮ್ಮ ವಿದ್ಯಾರ್ಥಿಗಳು ತುಂಬಾ ಸಿದ್ಧತೆಯೊಂದಿಗೆ ಸ್ಪರ್ಧೆಗೆ ಬಂದಿದ್ದಾರೆ.
- ಸವಿತಾ,  ವಿವಿಪುರದ ವಿಇಟಿ ಪ್ರೌಢಶಾಲೆಯ  ಗ್ರಂಥಪಾಲಕಿ

ತುಂಬಾ ಹಳೆಯ ವಿಷಯಗಳಿಗೆ ಸಂಬಂಧಪಟ್ಟ ಪ್ರಶ್ನೆಗಳಿಗಿಂತ ಸುಮಾರು10–15 ವರ್ಷಗಳ ಈಚೆಗಿನ ವಿಷಯಗಳನ್ನು ಆಯ್ದಕೊಳ್ಳುವುದು ಉತ್ತಮ. ಅವುಗಳನ್ನು ವಿದ್ಯಾರ್ಥಿಗಳು ಅರಿತಿರುತ್ತಾರೆ.
- ಸುನಿಲ್ ಇಂಗಳಗಿ, ಪಾಲಕರು

ಪಠ್ಯಪುಸ್ತಕ, ಪರೀಕ್ಷೆಗಳಲ್ಲಿ ಕಳೆದು ಹೋಗುವ ಮಕ್ಕಳಿಗೆ ಈ ಸ್ಪರ್ಧೆ ಸಾಮಾನ್ಯ ಜ್ಞಾನದ ಮಹತ್ವ ಪರಿಚಯಿಸುತ್ತದೆ. ನನ್ನ ಮಗ ಈ ಸ್ಪರ್ಧೆಗಾಗಿಯೇ ದಿನಪತ್ರಿಕೆ ಓದುವಂತಹ ಹವ್ಯಾಸ ರೂಢಿಸಿಕೊಂಡ.
- ಎಂ.ಆರ್ ಸತೀಶ್‌, ಗಿರಿನಗರ ನಿವಾಸಿ

ಕೆಲ ವಿದ್ಯಾರ್ಥಿಗಳಲ್ಲಿ ತಾವೇ ಜಾಣರು  ಎಂಬ ಅಹಂ ಇರುತ್ತದೆ. ಅದು ಇಂತಹ ಸ್ಪರ್ಧೆಯಿಂದ ಕಳಚುತ್ತದೆ. ಲೋಕದಲ್ಲಿ ತಿಳಿದುಕೊಳ್ಳಬೇಕಾದದ್ದು ಇನ್ನೂ ಬಹಳಷ್ಟಿದೆ ಎಂಬ ಅರಿವಾಗುತ್ತದೆ. ಜತೆಗೆ, ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳು ಮೂಡುತ್ತವೆ. ಈ ಸ್ಪರ್ಧೆಯನ್ನು ನಗರದಲ್ಲಿ ನಾಲ್ಕು ವಲಯಗಳಲ್ಲಿ ನಡೆಸಿದರೆ ಚೆನ್ನಾಗಿರುತ್ತದೆ.
- ಮೀರಾ, ಉತ್ತರಹಳ್ಳಿ ನಿವಾಸಿ

ಈ ಸ್ಪರ್ಧೆಯಿಂದ ಪ್ರಚಲಿತ ವಿದ್ಯಮಾನ, ಚಿತ್ರಗಳನ್ನು ಹೋಲಿಕೆ ಮಾಡಿ ಉತ್ತರ ಕಂಡುಹಿಡಿಯುವ ಬಗೆ ಸೇರಿದಂತೆ ಬಹಳಷ್ಟು ಕಲಿತೆ. ರಮೇಶ್‌ ಅವರನ್ನು ನೋಡಿದ್ದಂತೂ ತುಂಬಾ ಖುಷಿ ಕೊಟ್ಟಿತು.
- ಅರ್ಪಿತಾ, ಪಟೇಲ್ ಪಬ್ಲಿಕ್‌ ಶಾಲೆ, ಸುಬ್ಬಯನ ಪಾಳ್ಯ

ಈ ಸ್ಪರ್ಧೆಯಿಂದ ನಾನು ದಿನಪತ್ರಿಕೆಗಳನ್ನು ಓದುವುದರಿಂದ ಆಗುವ ಲಾಭಗಳ ಬಗ್ಗೆ ಅರಿತುಕೊಂಡೆ. ಹೀಗಾಗಿ, ಎರಡನೇ ಬಾರಿ ನಾನು ಈ ಸ್ಪರ್ಧೆಯಲ್ಲಿ ಭಾಗಹಿಸಿರುವೆ.
- ಆರ್.ಸಚಿನ್‌, ಮೂಕಾಂಬಿಕಾ ಪ್ರೌಢಶಾಲೆ, ತ್ಯಾಗರಾಜ ನಗರ

ತುಂಬಾ ಸ್ಪರ್ಧಾತ್ಮಕವಾಗಿರುವ ಈ ಜಗತ್ತಿನಲ್ಲಿ ನಾವು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಂಡೆ. ನಮ್ಮ ಸುತ್ತಲಿನ ಪರಿಸರದಲ್ಲಿರುವ ಅನೇಕ ವಿಷಯಗಳನ್ನೇ ನಾವು ಗಮನಿಸಿಲ್ಲ ಎನ್ನುವುದು ಅರಿವಾಯಿತು.
- ಎಸ್‌.ರುಚಿತಾ, ರಮಣಶ್ರೀ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿಜಯನಗರ

ಸ್ಪರ್ಧೆ ತುಂಬಾ ಚೆನ್ನಾಗಿತ್ತು. ನಾನೂ ಭಾಗವಹಿಸಬೇಕೆಂದು ಬಂದೆ. ಆದರೆ, ನನ್ನ ಸಹಪಾಠಿ ಸಕಾಲಕ್ಕೆ ಬರದ ಕಾರಣ ನನಗೆ ಭಾಗವಹಿಸಲು ಆಗಲಿಲ್ಲ. ಬಂದದ್ದಕ್ಕೂ ವ್ಯರ್ಥವಾಗಲಿಲ್ಲ. ಬಹಳಷ್ಟು ತಿಳಿದುಕೊಂಡೆ.
- ಎಸ್‌.ಕೌಶಿಕ್, ಎಂ.ಎಸ್.ರಾಮಯ್ಯ ವಿದ್ಯಾನಿಕೇತನ ಪ್ರೌಢಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT