ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ: ಭರವಸೆ

Last Updated 3 ಜುಲೈ 2012, 9:15 IST
ಅಕ್ಷರ ಗಾತ್ರ

ಮೂಡಿಗೆರೆ : ಇಲ್ಲಿನ ತಾಲ್ಲೂಕು ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮರಸಣಿಗೆ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ರಾಜೇಂದ್ರಪ್ರಸಾದ್ ಆಯ್ಕೆಯಾದರು.

 ಜೂನ್ 2 ರಂದು ನಡೆಯಬೇಕಾಗಿದ್ದ ಅಧ್ಯಕ್ಷರ ಆಯ್ಕೆ,  ಬಿಜೆಪಿ ಸದಸ್ಯರಲ್ಲಿ ಉಂಟಾದ ಭಿನ್ನಾಭಿ ಪ್ರಾಯದಿಂದಾಗಿ ಕೋರಂ ನೆಪ  ಒಡ್ಡಿ ಸೋಮ ವಾರಕ್ಕೆ ಮುಂದೂಡಲಾಗಿತ್ತು.  ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಉಪವಿಭಾಗಾಧಿಕಾರಿ ಪ್ರಶಾಂತ್ ಅವರ ನೇತೃತ್ವದಲ್ಲಿ ನಡೆದ ಅಧ್ಯಕ್ಷ ಚುನಾವಣೆಯಲ್ಲಿ 13 ಸದಸ್ಯರನ್ನು ಹೊಂದಿರುವ ತಾಲ್ಲೂಕು ಪಂಚಾಯತಿಯಲ್ಲಿ 7 ಮತಗಳನ್ನು ಪಡೆಯುವ ಮೂಲಕ ರಾಜೇಂದ್ರ ಪ್ರಸಾದ್ ಆಯ್ಕೆ ಯಾದರು.

ತಾಲ್ಲೂಕು ಪಂಚಾಯ ತಿಯಲ್ಲಿ ಬಿಜೆಪಿ 7, ಕಾಂಗ್ರೆಸ್5 ಹಾಗು ಜೆಡಿಎಸ್ ಒಂದು ಸ್ಥಾನವನ್ನು ಹೊಂದಿದ್ದು, ಅಧ್ಯಕ್ಷ ಸ್ಥಾನ  ಬಿಜೆಪಿಯ ಪಾಲಾಗಿದೆ.

ನೂತನವಾಗಿ ಆಯ್ಕೆಯಾದ ರಾಜೇಂದ್ರಪ್ರಸಾದ್ ಅವರನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ ಅಭಿನಂದಿಸಿ ಮಾತನಾಡಿ, ಈಗಾಗಲೇ ತಾಲ್ಲೂಕು ಪಂಚಾಯತಿ, ಕಳೆದ ಅಧ್ಯಕ್ಷರ ಅವಧಿಯಲ್ಲಿ  ರಸ್ತೆ, ಕುಡಿಯುವ ನೀರು ಸೇರಿದಂತೆ ಹಲವಾರು ಸಮಸ್ಯೆಗಳನ್ನು ನಿವಾರಿ ಸಲಾಗಿದ್ದು, ತಾಲ್ಲೂಕಿನಲ್ಲಿ ಉಳಿದಿರುವ ಸಮಸ್ಯೆಯ ಬಗ್ಗೆ ನೂತನ ಅಧ್ಯಕ್ಷರು ತಾಲ್ಲೂಕಿನೆಲ್ಲೆಡೆ ಪ್ರವಾಸ ನಡೆಸಿ ಸಮಸ್ಯೆಗಳನ್ನು ಪಟ್ಟಿ ಮಾಡಿ ಅವುಗಳ ನಿವಾರಣೆಯತ್ತ ಗಮನಹರಿಸಿ ಮಾದರಿ ತಾಲ್ಲೂಕ ನ್ನಾಗಿ ಮಾರ್ಪಡಿಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗು ರಾಜ್ಯ ಅರಣ್ಯ ಮತ್ತು ವಸತಿ ವಿಹಾರಧಾಮ ನಿಗಮ ಅಧ್ಯಕ್ಷ ಎಂ.ಕೆ. ಪ್ರಾಣೇಶ್ ಮಾತನಾಡಿ, ತಾಲ್ಲೂಕು ಆಡಳಿತವು ಆ ನಿಟ್ಟಿನಲ್ಲಿ ಈಗಲೇ ಯೊಜನೆಗಳನ್ನು ರೂಪಿಸಿಕೊಳ್ಳಬೇಕು. ಜನರು ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆ ಹುಸಿಯಾಗದ ರೀತಿಯಲ್ಲಿ ಆಡಳಿತ ನಡೆಸಬೇಕಿದೆ ಎಂದರು.

 ಜಿಲ್ಲಾ ಪಂಚಾತಿಯತಿ ಸದಸ್ಯ ಶಿವೇಗೌಡ, ಅರೆಕೂಡಿಗೆ ಶಿವಣ್ಣ, ಬಿದರಹಳ್ಳಿ ಜಯಂತ್, ತಾ.ಪಂ.ಮಾಜಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ರಾಜ್ಯ ಸಮಿತಿಯ ಕೆಂಜಿಗೆ ಕೇಶವ, ಜಿಲ್ಲಾ ಉಪಾಧ್ಯಕ್ಷ ಸುರೇಂದ್ರ, ಮಾತನಾಡಿದರು.
ತಾ.ಪಂ. ಉಪಾಧ್ಯಕ್ಷೆ ಸುಮತಿ ಸುರೇಶ್, ಪ.ಪಂ. ಅಧ್ಯಕ್ಷೆ ಲತಾಲಕ್ಷ್ಮಣ್ ಬಿಜೆಪಿ ಪದಾಧಿಕಾರಿಗಳಾದ ಪ್ರಮೋದ್ ದುಂಡುಗ, ಕಲ್ಲೇಶ್, ಜೆ.ಎಸ್. ರಘು, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT