ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಪರ, ಜನಸ್ನೇಹಿ ಸರ್ಕಾರ -ಸದಾನಂದಗೌಡ ಭರವಸೆ

Last Updated 3 ಆಗಸ್ಟ್ 2011, 12:55 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ತಾವು `ಅಭಿವೃದ್ಧಿ ಪರ , ಜನ ಸ್ನೇಹಿ~ ಸರ್ಕಾರವನ್ನು ಜನತೆಗೆ ನೀಡುವುದಾಗಿ ನಿಯೋಜಿತ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತಿಳಿಸಿದರು.

ಬಿಜೆಪಿ ಇತಿಹಾಸದಲ್ಲೆ ಬಹುಶ: ಮೊದಲ ಬಾರಿಗೆ ರಹಸ್ಯ ಮತದಾನದ ಮೂಲಕ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾದ ಡಿ.ವಿ.ಸದಾನಂದಗೌಡ ಅವರು ಫಲಿತಾಂಶ ಪ್ರಕಟವಾದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ತಾವು ಪಕ್ಷದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಮುಂಬರುವ 2 ವರ್ಷಗಳಲ್ಲಿ ತಾವು ಅಭಿವೃದ್ಧಿ ಪರ ಜನಸ್ನೇಹಿ ಆಡಳಿತ ನೀಡುವದಷ್ಟೆ ಅಲ್ಲ ಮೂಲಸೌಲಭ್ಯಕ್ಕೆ ಆದ್ಯತೆ ಕೊಡುವುದಾಗಿ ಅವರು ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಕೈಗೊಂಡ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ಮುಂದುವರೆಸುವುದಾಗಿಯೂ ಭರವಸೆ ನೀಡಿದರು.

ಸಾಮಾನ್ಯ ಜನರೂ ಕೂಡ ಆತ್ಮಗೌರವದಿಂದ ಬದುಕುವಂತಹ ವಾತಾವರಣ ಕಲ್ಪಿಸುವತ್ತ ತಾವು ಗಮನ ಹರಿಸುವುದಾಗಿ ತಿಳಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆದ ಮತದಾನದಲ್ಲಿ ಸೋಲುಂಡ ಜಗದೀಶ್ ಶೆಟ್ಟರ ಅವರು ತಾವು ಸದಾನಂದಗೌಡರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರಲ್ಲದೆ ಮುಂಬರುವ 2 ವರ್ಷಗಳಲ್ಲಿ ಸರ್ಕಾರ ಉತ್ತಮ ಆಡಳಿತ ನೀಡಲಿದೆ ಎಂದರು.

ಒಮ್ಮತಕ್ಕಾಗಿ ನಡೆಸುವ ಕಸರತ್ತು ಫಲ ನೀಡದೆ ಇದ್ದಾಗ ಮತದಾನ ಅನಿವಾರ್ಯ ಹಾಗೂ ಅದೊಂದು ಸಹಜ ಪ್ರಕ್ರಿಯೆ. ಮತದಾನವಾಯಿತು ಎಂದಾಕ್ಷಣ ಭಿನ್ನಮತ ಎಂದರ್ಥವಲ್ಲ. ಮತದಾನವು ಪಕ್ಷವು ಪ್ರಜಾಸತ್ತಾತ್ಮಕ ರೀತಿಯಲ್ಲಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಶೆಟ್ಟರ ವ್ಯಾಖ್ಯಾನಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT