ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಯೋಜನೆ: ಹಳ್ಳಿಗಳೇ ಕೇಂದ್ರವಾಗಲಿ

Last Updated 3 ಅಕ್ಟೋಬರ್ 2012, 5:00 IST
ಅಕ್ಷರ ಗಾತ್ರ

ವಿಜಾಪುರ: `ಹಳ್ಳಿಗಳನ್ನು ಕೇಂದ್ರ ವಾಗಿಟ್ಟುಕೊಂಡು ಅಭಿವೃದ್ಧಿ ಯೋಜನೆ ರೂಪಿಸಿ ಜಾರಿಗೊಳಿಸು ವವರೆಗೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ~ ಎಂದು ಮಾಜಿ ಶಾಸಕ ಎನ್.ಎಸ್. ಖೇಡ ಹೇಳಿದರು.

ತಾಲ್ಲೂಕಿನ ಅತಾಲಟ್ಟಿ ಗ್ರಾಮದಲ್ಲಿ  ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಮತ್ತು ಗಾಂಧೀ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಜಯಂತಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಮೀನಾ ಆರ್. ಚಂದಾವರಕರ, ಗಾಂಧೀಜಿ ಪ್ರತಿಪಾದಿಸಿದ ಸರಳ ಜೀವನ ಉನ್ನತ ವಿಚಾರ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳುವುದರ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ಜ್ಞಾನಶಕ್ತಿ ಕ್ಯಾಂಪಸ್‌ನ ಗಾಂಧೀ ಅಧ್ಯಯನ ಕೇಂದ್ರದಲ್ಲಿ ಕುಲಪತಿ ಮೀನಾ ಚಂದಾವರಕರ ಮತ್ತು ಎನ್.ಎಸ್. ಖೇಡ ಅವರು ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.

ಅತಾಲಟ್ಟಿ ಗ್ರಾಮದ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಕುಲಪತಿಗಳು ಐದು ಸಾವಿರ ರೂಪಾಯಿಗಳ ಕೊಡುಗೆ ನೀಡಿದರು. ಅತಾಲಟ್ಟಿಯಲ್ಲಿ ನಡೆದ ಸಮಾರಂಭದಲ್ಲಿ ಮಲ್ಲಪ್ಪ ಬೀಳಗಿ, ಮಹಾದೇವ ಅಹೇರಿ, ಮಹಾದೇವಿ ಸೊನ್ನದ, ಸುಭಾಸ ಪಾಟೀಲ ಮುಂತಾದವರು ಮಾತನಾಡಿದರು.

ಮೌಲ್ಯಮಾಪನ ಕುಲಸಚಿವೆ ಪ್ರೊ.ಡಿ.ಎಚ್. ತೇಜಾವತಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರು ಸೊನ್ನದ, ಇಬ್ರಾಹಿಂ ಮುಲ್ಲಾ, ಸುಭಾಸಗೌಡ ಪಾಟೀಲ, ಬಾಳಾಸಾಬ ಗೊಲಪ್ಪಗೋಳ, ಗುಡದಪ್ಪ ಜಾಲಮಟ್ಟಿ, ಮುಖ್ಯೋಪಾಧ್ಯಾಯ ಡಿ.ವಿ.ಭುವಿ ಮುಂತಾದವರು ಉಪಸ್ಥಿತರಿದ್ದರು.

ಶ್ರಿದೇವಿ ಭಂಡಾರಕರ ಸಂಗಡಿಗರಿಂದ ಭಜನೆ ನಡೆಯಿತು. ಸಹಾಯಕ ಪ್ರಾಧ್ಯಾಪಕಿ ಡಾ.ಶಾಂತಾದೇವಿ ಟಿ. ಸ್ವಾಗತಿಸಿದರು. ಗಾಂಧೀ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಪಿ.ಜಿ. ತಡಸದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ. ಗವಿಸಿದ್ದಪ್ಪ ಅನಂದಹಳ್ಳಿ ಪ್ರತಿಜ್ಞಾವಿಧಿ ಬೋಧಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಬಿ.ಎಲ್.ಲಕ್ಕಣ್ಣನ ವರ ವಂದಿಸಿದರು. ಎನ್‌ಎಸ್‌ಎಸ್ ಸಂಯೋಜಕ ಡಾ.ಆರ್.ವಿ.ಗಂಗಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಅತಾಲಟ್ಟಿ ಗ್ರಾಮದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿನಿಯರು ಜಾಥಾ ನಡೆಸಿ ಶಿಕ್ಷಣ, ಆರೋಗ್ಯ, ಶೌಚಾಲಯ, ಮಾದಕ ವಸ್ತು ಮತ್ತು ಮದ್ಯಪಾನ ಮುಂತಾದ ವಿಷಯಗಳ ಕುರಿತು ಜನಜಾಗೃತಿ ನಡೆಸಿದರು.
ಹಣಕಾಸು ಅಧಿಕಾರಿ ಡಾ.ಅರ್. ಸುನಂದಮ್ಮ,  ಡಾ.ಎಂ.ಬಿ.ದಿಲ್‌ಷಾದ್ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT