ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಸಿಂಚನಕ್ಕೆ ಕಾದಿರುವ ಸಿಂಕೋನ

Last Updated 18 ಜನವರಿ 2012, 10:35 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಜಿಲ್ಲೆಯ ಗಡಿಭಾಗವಾದ ಕುಟ್ಟ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಸಿಂಕೋನ ಕಾಲೊನಿಯೂ ಒಂದು. ಕೂಲಿಕಾರ್ಮಿಕರು, ಬಡವರೇ ಹೆಚ್ಚಾಗಿ ವಾಸ ಮಾಡುತ್ತಿರುವ ಪ್ರದೇಶ.

ಬಡವರು, ಕೂಲಿಕೆಲಸ ಮಾಡುವವರು ತಮಗೆ ನಿವೇಶನ ಇಲ್ಲದಾಗ ಪೈಸಾರಿ ಜಾಗದಲ್ಲಿ ವಾಸಕ್ಕೆ ಮನೆ ನಿರ್ಮಿಸಿಕೊಂಡರು. ಇದೀಗ ಈ ಕಾಲೋನಿಯಲ್ಲಿ ಸುಮಾರು 35 ಕುಟುಂಬಗಳಿವೆ. ಇವರೆಲ್ಲ ತಮಗೆ ಇಷ್ಟ ಬಂದಂತೆ ಮನೆ ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ವ್ಯವಸ್ಥಿತವಾದ ರಸ್ತೆ ಇಲ್ಲ. ಚರಂಡಿಯೂ ಇಲ್ಲ. ಶೌಚಾಲಯ ಮೊದಲೇ ಇಲ್ಲ.

ಮನೆ ನೀರು ಕೆಲವು ಕಡೆ ರಸ್ತೆಯ ಮೇಲೆಯೇ ಹರಿಯುತ್ತಿದೆ. ಗ್ರಾ.ಪಂ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ರಸ್ತೆ ನಿರ್ಮಿಸಿ ಚರಂಡಿ ಮಾಡಿಸಲು ಯತ್ನಿಸುತ್ತಿದೆ. ಆದರೆ ರಸ್ತೆಯಲ್ಲಿಯೇ ಮನೆಗಳಿರುವುದರಿಂದ ಚರಂಡಿ ನಿರ್ಮಾಣ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.

ಇಲ್ಲಿನ ನಿವಾಸಿಗಳು ಕಾರ್ಮಿಕರಾಗಿದ್ದರೂ ತಮ್ಮ ಮಕ್ಕಳನ್ನು ಮಾತ್ರ ತಪ್ಪದೆ ಶಾಲೆಗೆ ಕಳುಹಿಸುತ್ತಿದ್ದಾರೆ. ಮಲೆಯಾಳ, ತಮಿಳು ಭಾಷೆಯ ಜನತೆ ಹೆಚ್ಚಾಗಿದ್ದಾರೆ. ಪಟ್ಟಣದಿಂದ ಸುಮಾರು 0.75 ಕಿ.ಮೀ. ದೂರದಲ್ಲಿದ್ದು, ಶಾಲೆ, ಬಸ್ ನಿಲ್ದಾಣ ಯಾವುದಕ್ಕೂ ಸಮಸ್ಯೆ ಇಲ್ಲ. 50 ಹಾಸಿಗೆಯ ಬೃಹತ್ ಸಮುದಾಯ ಆರೋಗ್ಯ ಕೇಂದ್ರ ಇದೆ. ಶಿಕ್ಷಣಕ್ಕೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿವೆ. ಸರ್ಕಾರಿ ತಮಿಳು  ಪ್ರಾಥಮಿಕ ಶಾಲೆಯೂ ಇದೆ. ಪಟ್ಟಣದಲ್ಲಿ ವ್ಯಾಪಾರ, ವಹಿವಾಟು ಭರದಿಂದ ಸಾಗುತ್ತಿದೆ. ಹಣವಿದ್ದರೆ ಇಲ್ಲಿ ಯಾವುದೇ ವಸ್ತುವಿಗೆ ಕೊರತೆ ಇಲ್ಲ. 
  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT